ಕರ್ನಾಟಕ

karnataka

ETV Bharat / entertainment

ಅರ್ಮಾನ್ ಮಲಿಕ್​ ದನಿಯಲ್ಲಿ ಮೂಡಿಬಂತು ಡಾಲಿಯ 'ಕೋಟಿ' ಚಿತ್ರದ ಚೊಚ್ಚಲ ಗೀತೆ - Kotee Movie Song - KOTEE MOVIE SONG

ಬಹುನಿರೀಕ್ಷಿತ 'ಕೋಟಿ' ಚಿತ್ರದ ಚೊಚ್ಚಲ ಗೀತೆ 'ಮಾತು ಸೋತು' ಅನಾವರಣಗೊಂಡಿದೆ.

Kotee movie song released
'ಕೋಟಿ'ಯ ಮಾತು ಸೋತು ಹಾಡು ಅನಾವರಣ (ETV Bharat)

By ETV Bharat Karnataka Team

Published : May 14, 2024, 6:44 AM IST

ಡಾಲಿ ಧನಂಜಯ್ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟರಲ್ಲೋರ್ವರು. ತಮ್ಮ ಅಮೋಘ ಅಭಿನಯದಿಂದ 'ನಟರಾಕ್ಷಸ' ಎಂದೇ ಜನಪ್ರಿಯತೆ ಪಡೆದಿದ್ದಾರೆ. ಕೆಲವು ಸೂಪರ್​​ ಹಿಟ್, ಹಲವು ಉತ್ತಮ ಚಿತ್ರಗಳನ್ನು ಮನರಂಜನಾ ಕ್ಷೇತ್ರಕ್ಕೆ ಕೊಟ್ಟಿರುವ ನಟನ ಮುಂದಿನ ಚಿತ್ರಗಳ ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆಗಳಿವೆ. ಧನಂಜಯ್ ನಟನೆಯ ಮುಂದಿನ ಚಿತ್ರವೇ 'ಕೋಟಿ'.

ಈಗಾಗಲೇ ಸಾಕಷ್ಟು ಸದ್ದು ಮಾಡಿರುವ 'ಕೋಟಿ'ಯ ಚೊಚ್ಚಲ ಗೀತೆ 'ಮಾತು ಸೋತು' ರಿಲೀಸ್ ಆಗಿದೆ. ಈ ಹಾಡನ್ನು ವಾಸುಕಿ ವೈಭವ್ ಸಂಯೋಜಿಸಿದ್ದಾರೆ. ಯೋಗರಾಜ್ ಭಟ್ ಸಾಹಿತ್ಯವಿರುವ ಹಾಡಿಗೆ ಖ್ಯಾತ ಗಾಯಕ ಅರ್ಮಾನ್ ಮಲಿಕ್ ದನಿಯಾಗಿದ್ದಾರೆ. ಹಾಡುಗಳ ಹಕ್ಕುಗಳನ್ನು 'ಸರಿಗಮ' ಸಂಸ್ಥೆ ಖರೀದಿಸಿದೆ. ಲಿರಿಕಲ್ ವಿಡಿಯೋವನ್ನು ಸರಿಗಮ ಕನ್ನಡ ಯೂಟ್ಯೂಬ್ ಚಾನೆಲ್​ನಲ್ಲಿ ವೀಕ್ಷಿಸಬಹುದು.

ಸಂಗೀತ ಸಂಯೋಜಕ ವಾಸುಕಿ ವೈಭವ್ ಮಾತನಾಡಿ, "ಇದು ನನ್ನ ಮತ್ತು ಅರ್ಮಾನ್ ಮಲಿಕ್ ಕಾಂಬಿನೇಶನ್​ನ ಮೊದಲ ಹಾಡು. ಸಾಹಿತ್ಯ ರಚಿಸಿರುವ ಯೋಗರಾಜ್ ಭಟ್ ಅವರೊಂದಿಗೆ ಕೆಲಸ ಮಾಡುವುದು ಯಾವಾಗಲೂ ಖುಷಿ ಕೊಡುವ ಮತ್ತು ಕಲಿಕೆಯ ವಿಚಾರ. ಜನರಿಗೆ ಖಂಡಿತವಾಗಿಯೂ ಹಾಡು ಇಷ್ಟವಾಗುತ್ತದೆ‌ ಎಂಬ ನಂಬಿಕೆಯಿದೆ" ಎಂದರು.

"ವಾಸುಕಿ ವೈಭವ್ ಹೊಸ ತಲೆಮಾರಿನ ಪ್ರತಿಭಾವಂತ ಸಂಗೀತ ನಿರ್ದೇಶಕ. ಯೋಗರಾಜ್ ಭಟ್ ಸಾಹಿತ್ಯದ ದೊಡ್ಡ ಅಭಿಮಾನಿ ನಾನು. ಇಬ್ಬರ ಕಾಂಬಿನೇಶನ್ನಿನ ಹಾಡನ್ನು ಅರ್ಮಾನ್ ಮಲಿಕ್ ಚೆನ್ನಾಗಿ ಹಾಡಿದ್ದಾರೆ. ಇದು ಕನ್ನಡಿಗರ ಕಿವಿ, ಮನಸ್ಸುಗಳಿಗೆ ಇಷ್ಟವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ" ಎನ್ನುತ್ತಾರೆ ಚಿತ್ರ ನಿರ್ದೇಶಕ ಪರಮ್.

ತಾರಾಗಣ: ನಾಯಕಿಯಾಗಿ ಮೋಕ್ಷಾ ಕುಶಾಲ್‌ ನಟಿಸಿದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ರಮೇಶ್‌ ಇಂದಿರಾ, ತಾರಾ, ಸರ್ದಾರ್‌ ಸತ್ಯ ಮೊದಲಾದವರಿದ್ದಾರೆ.

ಇದನ್ನೂ ಓದಿ:ಕೇನ್ಸ್‌ ಫಿಲ್ಮ್​ ಫೆಸ್ಟಿವಲ್​ನಲ್ಲಿ ಟಾಲಿವುಡ್​ನ ಬಹುನಿರೀಕ್ಷಿತ 'ಕಣ್ಣಪ್ಪ' ಟೀಸರ್ ಬಿಡುಗಡೆಗೆ ಸಿದ್ದತೆ - Kannappa Film Big Update

ಚಿತ್ರದಲ್ಲಿ ಐದು ಹಾಡುಗಳಿವೆ. ಹಿನ್ನೆಲೆ ಸಂಗೀತದ ಜವಾಬ್ದಾರಿ ಚಾರ್ಲಿ 777 ಖ್ಯಾತಿಯ ನೊಬಿನ್‌ ಪೌಲ್‌ ಅವರದ್ದು. 'ಕಾಂತಾರ'ದ ಕೆಲಸಕ್ಕೆ ಪ್ರಶಂಸೆ ಗಳಿಸಿದ್ದ ಪ್ರತೀಕ್‌ ಶೆಟ್ಟಿ ಸಂಕಲನಕಾರನ ಜವಾಬ್ದಾರಿ ಹೊತ್ತಿದ್ದಾರೆ. ಖ್ಯಾತ ಛಾಯಾಗ್ರಾಹಕ ಅರುಣ್ ಕ್ಯಾಮರಾ ಕೈಚಳಕ ತೋರಿಸಿದ್ದಾರೆ.

ಇದನ್ನೂ ಓದಿ:ಇತಿಹಾಸದಲ್ಲೇ ಇದು ಮೊದಲು: ಕೇನ್ಸ್​ 2024ರಲ್ಲಿ ಭಾರತದ, ಭಾರತೀಯ ಕಥೆಯಾಧಾರಿತ 12 ಚಿತ್ರಗಳ ಪ್ರದರ್ಶನ - Cannes 2024 ndia themed Films

'ಕೋಟಿ' ರಿಲೀಸ್ ಡೇಟ್ ಫಿಕ್ಸ್: 'ಕೋಟಿ'ಯನ್ನು ಜಿಯೋ ಸ್ಟುಡಿಯೋಸ್ ನಿರ್ಮಿಸಿದೆ. ಕಲರ್ಸ್ ಕನ್ನಡ ವಾಹಿನಿಯವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್‌ ಚಿತ್ರಕಥೆ ಬರೆದು, ನಿರ್ದೇಶಿಸಿದ್ದಾರೆ. ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿರುವ ಸಿನಿಮಾ ಜೂನ್‌ 14ರಂದು ಚಿತ್ರಮಂದಿರ ಪ್ರವೇಶಿಸಲಿದೆ.

ABOUT THE AUTHOR

...view details