ಕರ್ನಾಟಕ

karnataka

ETV Bharat / entertainment

ಬಿಗ್​ ಬಾಸ್​ ಇತಿಹಾಸದಲ್ಲೇ ಇದೇ ಮೊದಲು: ಮನೆಯೊಳಗೆ ಜನಸಾಗರ, ಧಿಕ್ಕಾರದ ಕೂಗು...! - BIGG BOSS

ಇದೇ ಮೊದಲ ಬಾರಿಗೆ ಕನ್ನಡ ಬಿಗ್​ ಬಾಸ್​ ಮನೆಯೊಳಗೆ ಹೆಚ್ಚಿನ ಸಂಖ್ಯೆಯ ಜನಸಾಮಾನ್ಯರು ಎಂಟ್ರಿ ಕೊಟ್ಟಿದ್ದಾರೆ.

Kannada Bigg Boss
ಕನ್ನಡ ಬಿಗ್​ ಬಾಸ್​ (Bigg Boss Poster)

By ETV Bharat Entertainment Team

Published : Oct 25, 2024, 12:50 PM IST

ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್​ ಬಾಸ್​​ ಸಿಸನ್​ 11' ನಾಲ್ಕನೇ ವಾರಾಂತ್ಯ ಸಮೀಪಿಸಿದೆ. ಈ ಸೀಸನ್​ನಲ್ಲಿ ಈಗಾಗಲೇ ಹಲವು ಘಟನೆಗಳು ನಡೆದು ಹೋಗಿವೆ. ಮುಂದಿನ ದಿನಗಳು ಹೇಗಿರಲಿವೆ? ಎಂಬ ಕುತೂಹಲವೂ ಮೂಡಿದೆ. ಇದೀಗ ಬಿಗ್​ ಬಾಸ್​ ಇತಿಹಾಸದಲ್ಲೇ ಇದೇ ಮೊದಲು ಎನ್ನುವಂತೆ ಮನೆಯೊಳಗೆ ಜನಸಾಗರ ಹರಿದುಬಂದಿದೆ. ಆಟದಲ್ಲಿ ಬದಲಾವಣೆಗಳು ಕಂಡುಬಂದಿದ್ದು, ರಾತ್ರಿ ಪ್ರಸಾರ ಕಾಣಲಿರುವ ಸಂಪೂರ್ಣ ಸಂಚಿಕೆ ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದಾರೆ.

''ರಾಜಕೀಯ ಅಂದ್ಮೇಲೆ ಜನರು ಬೇಡ್ವಾ? ಬಂದ್ರು ನೋಡಿ!'' ಬಿಗ್ ಬಾಸ್ ಕನ್ನಡ ಸೀಸನ್ 11 - ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್​ನೊಂದಿಗೆ ಬಿಗ್​ ಬಾಸ್​​ ಇಂದಿನ ಎಪಿಸೋಡ್​​ನ ಪ್ರೋಮೋ ಅನಾವರಣಗೊಳಿಸಿದೆ.

ಹೌದು, ಬಿಗ್​ ಬಾಸ್​ ಮನೆಯೊಳಗೀಗ ರಾಜಕೀಯ ಪಕ್ಷಗಳ ಹವಾ ಜೋರಾಗಿದೆ. ಮತದಾನ ಮಾಡುವ ನಿಟ್ಟಿನಲ್ಲಿ ಜನಸಾಮಾನ್ಯರು ಮನೆಯೊಳಗೆ ಪ್ರವೇಶಿಸಿದ್ದಾರೆ. ಪಕ್ಷಗಳ ಗೆಲುವು ಮತ್ತು ಸೋಲು ಇಂದು ನಿರ್ಧಾರ ಆಗಲಿದೆ.

ಮನೆಯೊಳಗೆ ಜನರ ಎಂಟ್ರಿ:ಸಾಮಾನ್ಯವಾಗಿ ಮನೆಯೊಳಗೆ ಸ್ಪರ್ಧಿಗಳನ್ನು ಹೊರತುಪಡಿಸಿದರೆ ಬೇರೆ ಯಾರ ಆಗಮನವೂ ಆಗುವುದಿಲ್ಲ. ಫಿನಾಲೆ ಹೊತ್ತಿನಲ್ಲಿ ಫೈನಲಿಸ್ಟ್​​ಗಳ ಮನೆ ಮಂದಿ ಎಂಟ್ರಿ ಕೊಡುತ್ತಾರೆ. ಅಗತ್ಯ ಬಿದ್ದಾಗ ಅಷ್ಟೇ ಬಿಗ್​ ಬಾಸ್​ ತಂಡದ ಸದಸ್ಯರು ಒಳ ಹೋಗುತ್ತಾರೆ. ಹಾಗಾಗಿ ಈ ಮನೆಯೊಳಗೆ ನೀವು ಇಷ್ಟೊಂದು ಜನರನ್ನು ಕಂಡಿರಲು ಸಾಧ್ಯವೇ ಇಲ್ಲ. ಆದ್ರಿಂದು ಮನೆಯೊಳಗೆ ಹೆಚ್ಚಿನ ಸಂಖ್ಯೆಯ ಜನರು ಎಂಟ್ರಿ ಕೊಟ್ಟಿದ್ದಾರೆ.

ರಾಜಕೀಯಕ್ಕೆ ಸಂಬಂಧಿಸಿದ ಟಾಸ್ಕ್​​ಗೆ ಸಂಬಂಧಪಟ್ಟಂತೆ ಮತದಾನದ ಹಂತ ನಡೆಯುತ್ತಿದೆ. ಹಾಗಾಗಿ, ವೋಟಿಂಗ್​ಗೆ ಜನಸಾಮಾನ್ಯರನ್ನು ಕಳುಹಿಸಿಕೊಡಲಾಗಿದೆ. ಗಾರ್ಡನ್ ಏರಿಯಾದಲ್ಲಿ ಜನರು ಬಂದು ಕುಳಿತಿರುವುದನ್ನು ಕಂಡ ಸ್ಪರ್ಧಿಗಳು ಒಮ್ಮೆಗೆ ಆಶ್ಚರ್ಯಚಕಿತರಾಗಿದ್ದಾರೆ. ಮನೆಯೊಳಗೆ ಇಷ್ಟೊಂದು ಸಂಖ್ಯೆಯ ಜನಸಾಮಾನ್ಯರು ಬರಬಹುದು, ಅವರ ಅಭಿಪ್ರಾಯಗಳು ತಮ್ಮ ಟಾಸ್ಕ್​ ಮೇಲೆ ಪರಿಣಾಮ ಬೀರಬಹುದು ಎಂದು ಬಹುಶಃ ಸ್ಪರ್ಧಿಗಳು ಊಹಿಸಿರಲಿಲ್ಲ.

ಹೀಗೆ ರಾಜಕೀಯದಾಟಕ್ಕೆ ಸಂಬಂಧಿಸಿದಂತೆ ಸ್ಪರ್ಧಿಗಳು ಮತ್ತು ಜನಸಾಮಾನ್ಯರ ನಡುವೆ ಮಾತುಕತೆ ನಡೆದಿದೆ. ಕೊನೆಗೆ ಜನರ ಕಡೆಯಿಂದ ಧಿಕ್ಕಾರ ಎಂಬ ಕೂಗು ಸಹ ಕೇಳಿಬಂದಿದೆ.

ಇದನ್ನೂ ಓದಿ:ಆರೋಗ್ಯ ಸಮಸ್ಯೆಯ ನಡುವೆ 'ಸಿಟಾಡೆಲ್' ವೆಬ್ ಸೀರಿಸ್ ಚಿತ್ರೀಕರಣ ಮುಗಿಸಿರುವುದು ಅಚ್ಚರಿ ತರಿಸಿತು: ಸಮಂತಾ

ಇನ್ನೂ, ಕಳೆದ ಸಂಚಿಕೆಯಲ್ಲಿ ''ರಾಜಕೀಯ ಚದುರಂಗದಲ್ಲಿ ಮನೆಮಂದಿಯ ಹೈವೋಲ್ಟೇಜ್‌ ಕಾದಾಟ!''ದ ವಾತಾವರಣ ನಿರ್ಮಾಣ ಆಗಿತ್ತು. ಆಟದ ರಭಸದಲ್ಲಿ ಕಿತ್ತಾಟಗಳು ಜೋರಾಗಿದ್ದವು. ಹಾಗಾಗಿ ಟಾಸ್ಕ್​ ಒಂದನ್ನು ನಿಲ್ಲಿಸಬೇಕಾಯಿತು.

ಇದನ್ನೂ ಓದಿ:ಅಭಿಷೇಕ್ ಬಚ್ಚನ್​-ಐಶ್ವರ್ಯಾ ರೈ 'ಗ್ರೇ ಡಿವೋರ್ಸ್'ಗೆ ಮುಂದಾಗಿದ್ದಾರಾ? ಏನಿದು ಗ್ರೇ ಡಿವೋರ್ಸ್!

ಮತ್ತೊಂದೆಡೆ, ಮನೆಯೊಳಗಿನ ರಾಜಕೀಯ ವಿಚಾರಿಸಲು ಜನಪ್ರಿಯ ನ್ಯೂಸ್​ ಆ್ಯಂಕರ್​ ರಾಧಾ ಹಿರೇಗೌಡರ್​ ಆಗಮಿಸಿದ್ದಾರೆ. ಅವರಿಗೆ ಸಂಬಂಧಪಟ್ಟ ಟಾಸ್ಕ್​​ ಇಂದಿನ ಎಪಿಸೋಡ್​ನಲ್ಲಿ ಪ್ರಸಾರ ಆಗಲಿದೆ.

ABOUT THE AUTHOR

...view details