ಬಿಗ್ ಬಾಸ್ ಸೀಸನ್ 11ರ ಏಳನೇ ವಾರದ ಆಟ ಮುಂದುವರೆದಿದೆ. ಆರನೇ ವಾರಾಂತ್ಯ ಯಾರು ಮನೆಯಿಂದ ಹೊರನಡೆಯಬಹುದು ಎಂಬ ಕುತೂಹಲ ನೋಡುಗರಲ್ಲಿತ್ತು. ಆದ್ರೆ ಎಲಿಮಿನೇಷನ್ ನಡೆದಿಲ್ಲ. ಕೊನೆವರೆಗೂ ಭವ್ಯಾ ಅವರು ಎಲಿಮಿನೇಟ್ ಎಂದೇ ಭಾವಿಸಲಾಗಿತ್ತು. ಆದ್ರೆ ಕಳೆದ ಸಂಚಿಕೆ ಕೊನೆಯಲ್ಲಿ ಬಿಗ್ ಬಾಸ್ನಲ್ಲಿ ಬಿಗ್ ಟ್ವಿಸ್ಟ್ ನಡೆದಿದೆ. ಎಲಿಮಿನೇಷನ್ ಬಿಸಿಯಿಂದ ಭವ್ಯಾ ಬಚಾವ್ ಆಗಿದ್ದಾರೆ.
ಸಾಮಾನ್ಯವಾಗಿ ಬಿಗ್ ಬಾಸ್ನಲ್ಲಿ ವಾರದಿಂದ ವಾರಕ್ಕೆ ಸ್ಪರ್ಧಿಗಳ ಸಂಖ್ಯೆ ಕಡಿಮೆ ಆಗುತ್ತಾ ಬರುತ್ತದೆ. ಅದರಂತೆ ಆಟದಲ್ಲಿ, ಸ್ಪರ್ಧಿಗಳ ಪರ್ಫಾಮೆನ್ಸ್ನಲ್ಲಿಯೂ ಹಲವು ಬದಲಾವಣೆಗಳಾಗುತ್ತವೆ. ಒಟ್ಟಾರೆ, ಆಟದ ಕಾವು ಏರುತ್ತದೆ. ಅದರಂತೆ, ಆರನೇ ವಾರ ಮನೆಯಿಂದ ಹೊರಹೋಗೋದು ಯಾರು ಎಂಬ ಕುತೂಹಲ ಮನೆಯೊಳಗಿನ ಸ್ಪರ್ಧಿಗಳ ಜೊತೆ ಜೊತೆಗೆ ಕನ್ನಡಿಗರಲ್ಲಿತ್ತು. ಕಳೆದ ಎಪಿಸೋಡ್ನಲ್ಲಿ ಭವ್ಯಾ ಅವರು ಎಲಿಮಿನೇಟ್ ಆಗಿ ಮನೆಯಿಂದ ಹೊರಬರುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು.
ಎಲಿಮಿನೇಷನ್ ಪ್ರೊಸೆಸ್ನಲ್ಲಿ ಒಬ್ಬೊಬ್ಬರೇ ಸೇಫ್ ಆಗುತ್ತಾ ಬಂದು ಕೊನೆಯಲ್ಲಿ ಧನರಾಜ್ ಆಚಾರ್ ಮತ್ತು ಭವ್ಯಾ ಗೌಡ ಉಳಿದುಕೊಂಡಿದ್ದರು. ಇನ್ನೇನು ಒಬ್ಬರ ಆಟ ಮುಗಿಯಿತು ಎಂದೇ ಭಾವಿಸಿದ್ದರು. ಆದ್ರೆ ಬಿಗ್ ಬಾಸ್ ಸರ್ಪ್ರೈಸ್ ನೀಡಿದ್ದಾರೆ.
ಮನೆಯ ಮುಖ್ಯದ್ವಾರದವರೆಗೂ ಬಂದಿರುತ್ತಾರೆ. ಮನೆಯ ಇತರೆ ಎಲ್ಲಾ ಸ್ಪರ್ಧಿಗಳು ಭವ್ಯಾ ಗೌಡ ಅವರು ಮನೆಯಿಂದ ಹೊರ ಹೋಗುತ್ತಾರೆ ಎಂದು ಅಂದುಕೊಂಡಿರುತ್ತಾರೆ. ಮೋಕ್ಷಿತಾ ಮತ್ತು ಗೌತಮಿ ಇಬ್ಬರೂ ದೂರ ನಿಂತು ನೋಡುತ್ತಿರುತ್ತಾರೆ. ಈ ಕಠಿಣ ಸಂದರ್ಭ ಬಿಗ್ ಬಾಸ್ ಈ ವಾರ ನಾಮಿನೇಷನ್ ಇಲ್ಲ ಎಂದು ತಿಳಿಸಿದ್ದಾರೆ. ಈ ಮನೆಯಲ್ಲಿ ನಿಮ್ಮ ಆಟ ಮುಂದುವರಿಯಲಿದೆ ಎಂದು ತಿಳಿಸಿದಾಗ ಆಶ್ಚರ್ಯದ ಜೊತೆ ಸಂತಸವೂ ಆಗಿದೆ. ಈ ವಿಷಯ ಮನೆಯೊಳಗೆ ಹೆಚ್ಚು ಸಮಯ ಸ್ಪರ್ಧಿಗಳ ನಡುವೆ ಚರ್ಚೆಯಾಗಿದೆ.