ಕರ್ನಾಟಕ

karnataka

ETV Bharat / entertainment

ರಾಜಕಾರಣವೆಂಬ ಸಿನಿಮಾದಲ್ಲಿ ಯಾರು ಹೀರೋ, ಯಾರು ವಿಲನ್, ಯಾರು ನಿರ್ದೇಶಕ ಎಂಬುದು ಗೊತ್ತಾಗೋಲ್ಲ: ಯು.ಟಿ.ಖಾದರ್ - U T Khader - U T KHADER

ಬಿಗ್‌ ಬಾಸ್ ಮಾಜಿ ಸ್ಪರ್ಧಿ, ನಟ ರೂಪೇಶ್ ಶೆಟ್ಟಿ ಅವರ ಮುಂದಿನ ಸಿನಿಮಾ ಘೋಷಣೆಯಾಗಿದೆ. ಟೈಟಲ್​ ಲಾಂಚ್​ ಕಾರ್ಯಕ್ರಮಕ್ಕೆ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಆಗಮಿಸಿ ಹೊಡೆದ ಪಂಚಿಂಗ್​ ಡೈಲಾಗ್​​ಗಳು ಸಖತ್​​ ಸದ್ದು ಮಾಡುತ್ತಿದೆ.

'Jai' Title Launch Event
'ಜೈ' ಟೈಟಲ್​ ಲಾಂಚ್​ ಈವೆಂಟ್​​ (ETV Bharat)

By ETV Bharat Entertainment Team

Published : Aug 21, 2024, 6:30 PM IST

ಯು.ಟಿ.ಖಾದರ್ ಪಂಚ್ (ETV Bharat)

ಮಂಗಳೂರು(ದಕ್ಷಿಣ ಕನ್ನಡ):ಸಿನಿಮಾಗಳಲ್ಲಿ ಹೀರೋಗಳು ಪಂಚಿಂಗ್ ಡೈಲಾಗ್ಸ್ ಹೊಡೆಯೋದು ಸಾಮಾನ್ಯ. ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಅವರೂ ಕೂಡಾ ಆಗಾಗ್ಗೆ ಪಂಚಿಂಗ್ ಡೈಲಾಗ್ ಹೊಡೆಯುವುದಿದೆ‌. ತುಳು ಸಿನಿಮಾವೊಂದರ ಟೈಟಲ್ ಲಾಂಚ್ ಈವೆಂಟ್​ನ ವೇದಿಕೆಯಲ್ಲಿ ಖಾದರ್, ಸಿನಿಮಾ ಹಾಗೂ ರಾಜಕಾರಣವನ್ನು ತುಲನೆ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

ನಗರದ ಸಿಟಿ ಸೆಂಟರ್ ಮಾಲ್‌ನಲ್ಲಿ ನಟ, ಬಿಗ್‌ ಬಾಸ್ ಮಾಜಿ ಸ್ಪರ್ಧಿ ರೂಪೇಶ್ ಶೆಟ್ಟಿ ಅವರ ಮುಂದಿನ ಸಿನಿಮಾ ಅನೌನ್ಸ್​​ ಆಯಿತು. ಈ ಕಾರ್ಯಕ್ರಮದಲ್ಲಿ ಯು.ಟಿ.ಖಾದರ್ ನಟ ರೂಪೇಶ್ ಶೆಟ್ಟಿ ಅವರನ್ನು ಉದ್ದೇಶಿಸಿ ಮಾತನಾಡಿದರು.

''ರಾಜಕಾರಣಿಗಳಾದ ನಾವು ನಮ್ಮ ಜಗತ್ತಿನಲ್ಲಿ ಸಿನಿಮಾದಂತೆಯೇ. ನಿಮ್ಮ ಸಿನಿಮಾದಲ್ಲಿ ಹೇಗೆ ಡೈರೆಕ್ಷನ್, ಪ್ರೊಡಕ್ಷನ್ ಇದೆಯೋ ಅದೇ ರೀತಿ ನಮ್ಮ ರಾಜಕಾರಣವೂ ಒಂದು ಸಿನಿಮಾವೇ. ಆದರೆ ನಮ್ಮ ಸಿನಿಮಾಕ್ಕೂ ನಿಮ್ಮ ಸಿನಿಮಾಕ್ಕೂ ವ್ಯತ್ಯಾಸವಿದೆ. ಅದೇನೆಂದರೆ, ನಿಜವಾದ ಸಿನಿಮಾದಲ್ಲಿ ಹೀರೋ ಯಾರು? ವಿಲನ್ ಯಾರು? ಎಂಬುದು ಗೊತ್ತಾಗುತ್ತದೆ. ಆದರೆ ರಾಜಕಾರಣವೆಂಬ ಸಿನಿಮಾದಲ್ಲಿ ಯಾರು ಹೀರೋ?, ಯಾರು ವಿಲನ್?, ನಿರ್ದೇಶಕ ಯಾರು? ಎಂಬುದು ಗೊತ್ತಾಗದ ಪರಿಸ್ಥಿತಿ ಇದೆ ಎಂದರು.

ಈ ವೇಳೆ ಸಭಿಕರಿಂದ ಗೊಳ್ಳೆಂದು ನಕ್ಕರು. ವೇದಿಕೆಯಲ್ಲಿದ್ದ ರೂಪೇಶ್ ಶೆಟ್ಟಿ, ದ.ಕ.ಜಿಲ್ಲಾ ಸಂಸದ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್ ಅವರುಗಳೂ ಕೂಡಾ ನಗೆಗಡಲಲ್ಲಿ ತೇಲಿದರು.

ಇದನ್ನೂ ಓದಿ:ಶೀಘ್ರದಲ್ಲೇ ಅಮ್ಮನಾಗುವ ಖುಷಿಯಲ್ಲಿ ದೀಪಿಕಾ ಪಡುಕೋಣೆ: ಬೇಬಿಬಂಪ್​ ವಿಡಿಯೋ ವೈರಲ್​​ - Deepika Padukone

ರೂಪೇಶ್ ಶೆಟ್ಟಿ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ತಮ್ಮ ಪೋಸ್ಟ್​ಗೆ, ''ಜೈ ಟೈಟಲ್ ಲಾಂಚ್ ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರ ಹಾಸ್ಯ ಚಟಾಕಿಗೆ ಬಿದ್ದು ಬಿದ್ದು ನಕ್ಕ ಜನರು'' ಎಂಬ ಕ್ಯಾಪ್ಷನ್​​​ ಕೊಟ್ಟಿದ್ದಾರೆ.

ಈ ವಿಡಿಯೋ ವೈರಲ್​​ ಆಗುತ್ತಿದ್ದು, ಸೋಷಿಯಲ್​​ ಮೀಡಿಯಾ ಬಳಕೆದಾರರು ಪ್ರತಿಕ್ರಿಯಿಸುತ್ತಿದ್ದಾರೆ. ಸತ್ಯ ಹೇಳಿದ್ರಿ ಸರ್​​ ಎಂದು ನೆಟ್ಟಿಗರೋರ್ವರು ಹೇಳಿದರೆ, ಉಳಿದಂತೆ ಹಲವರು ಸ್ಮೈಲಿ ಎಮೋಜಿ ಮೂಲಕ ರಿಯಾಕ್ಟ್​​ ಮಾಡಿದ್ದಾರೆ.

ಇದನ್ನೂ ಓದಿ:'ಪೌಡರ್' ಸಕ್ಸಸ್​ಗಾಗಿ ದೇವರ ಮೊರೆಹೋದ ದಿಗಂತ್​​: ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪೂಜೆ - Powder Team Visits Temple

ಜೈ ಸಿನಿಮಾ ಕುರಿತು..:ಜೈ ಸಿನಿಮಾ ಟೈಟಲ್​​ ಟೀಸರ್​​​ ಕೂಡಾ ಅನಾವರಣಗೊಂಡಿದ್ದು ಉತ್ತಮ ವೀಕ್ಷಣೆಯಾಗುತ್ತಿದೆ. ರೂಪೇಶ್​ ಶೆಟ್ಟಿ ರಗಡ್​​ ಲುಕ್​​​ನಲ್ಲಿ ಕಾಣಿಸಿಕೊಂಡಿದ್ದಾರೆ. ನ್ಯಾಯಕ್ಕಾಗಿ ಹೋರಾಡುವ ನಾಯಕನಾಗಿದ್ದಾರೆ. ಗಿರಿಗಿಟ್​​, ಗಮ್ಜಾಲ್​​, ಸರ್ಕಸ್​ ತಂಡವೇ ಈ ಚಿತ್ರದಲ್ಲೂ ಸಹಕರಿಸುತ್ತಿದೆ. ರೂಪೇಶ್​ ನಟನೆ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಕಥೆ, ಡೈಲಾಗ್ಸ್​​ ಪ್ರಸನ್ನ ಶೆಟ್ಟಿ ಅವರದ್ದು. ಶೀಘ್ರದಲ್ಲೇ ಶೂಟಿಂಗ್​ ಶುರುವಾಗಲಿದೆ.

ABOUT THE AUTHOR

...view details