ಕರ್ನಾಟಕ

karnataka

ETV Bharat / entertainment

ಎ ಆರ್​ ರೆಹಮಾನ್ ಜೊತೆಗಿನ ಸಂಬಂಧ ಕಡಿದುಕೊಂಡ ಸೈರಾ ಬಾನು: 29 ವರ್ಷಗಳ ದಾಂಪತ್ಯ ಅಂತ್ಯ - AR RAHMAN DIVORCE

ಸಂಗೀತ ಲೋಕದ ಮಾಂತ್ರಿಕ ಎ ಆರ್​ ರೆಹಮಾನ್​ಗೆ ಪತ್ನಿ ಸೈರಾ ಬಾನು ವಿಚ್ಛೇದನ ನೀಡಿದ್ದಾರೆ.

AR rahman wife saira banu has announced her separation
ಎ ಆರ್​ ರೆಹಮಾನ್​​ ರೆಹಮಾನ್​ಗೆ ವಿಚ್ಛೇದನ ನೀಡಿದ ಪತ್ನಿ ಸೈರಾ ಬಾನು (ETV Bharat)

By ETV Bharat Karnataka Team

Published : Nov 19, 2024, 11:07 PM IST

ಚೆನ್ನೈ, ತಮಿಳುನಾಡು: ಖ್ಯಾತ ಸಂಗೀತ ನಿರ್ದೇಶಕ ಎ.ಆರ್​. ರೆಹಮಾನ್ ಪತ್ನಿ ಸೈರಾ ಬಾನು, ರೆಹಮಾನ್​ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹೇಳಿದ್ದಾರೆ. ಎ.ಆರ್​. ರೆಹಮಾನ್ ಮತ್ತು ಸೈರಾ ಬಾನು 29 ವರ್ಷಗಳ ಕಾಲ ಸಂಸಾರ ನಡೆಸಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರಿಬ್ಬರ ನಡುವೆ ವೈಮನಸ್ಸು ಮೂಡಿತ್ತು. ಆ ವಿಚಾರವನ್ನು ಸೈರಾ ಬಾನು ಖಚಿತಪಡಿಸಿದ್ದಾರೆ.

ಖ್ಯಾತ ಸಂಗೀತ ಸಂಯೋಜಕ ಎಆರ್ ರಖುಮಾನ್ ಅವರ ಪತ್ನಿ ಸಾಯಿರಾ ಬಾನು ತಮ್ಮ ಈ ನಿರ್ಧಾರವನ್ನು ಇಂದು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಈ ದಂಪತಿಗೆ ಖದೀಜಾ ಮತ್ತು ರಹೀಮಾ ಎಂಬ ಇಬ್ಬರು ಮಕ್ಕಳಿದ್ದಾರೆ

"ಮದುವೆಯಾಗಿ ಹಲವು ವರ್ಷಗಳ ನಂತರ, ಶ್ರೀಮತಿ ಸಾಯಿರಾ ಅವರು ತಮ್ಮ ಪತಿ ಎ.ಆರ್. ರೆಹಮಾನ್‌ನಿಂದ ಬೇರ್ಪಡುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ನಿರ್ಧಾರವು ಅವರ ಸಂಬಂಧದಲ್ಲಿ ಗಮನಾರ್ಹವಾದ ಭಾವನಾತ್ಮಕ ಒತ್ತಡದ ನಂತರ ಬಂದಿದೆ. ಪರಸ್ಪರ ಆಳವಾದ ಪ್ರೀತಿಯ ಹೊರತಾಗಿಯೂ, ದಂಪತಿಗಳು ಬೇರೆಯಾಗುವುದಕ್ಕೆ ನಿರ್ಧರಿಸಿದ್ದಾರೆ. ಉದ್ವಿಗ್ನತೆ ಮತ್ತು ತೊಂದರೆಗಳು ತಮ್ಮ ನಡುವೆ ಭಾರಿ ಅಂತರವನ್ನು ಸೃಷ್ಟಿಸಿವೆ, ಈ ಸಮಯದಲ್ಲಿ ನಮ್ಮ ನಡುವೆ ಯಾರೂ ಸೇತುವೆಯಾಗಲು ಸಾಧ್ಯವಿಲ್ಲ ಎಂದು ಸಾಯಿರಾ ಅವರು ನೋವು ತೋಡಿಕೊಂಡಿದ್ದಾರೆ. ಈ ಸವಾಲಿನ ಸಮಯದಲ್ಲಿ ಕುಟುಂಬದ ಗೌಪ್ಯತೆ ಕಾಪಾಡಲು ಅನುವು ಮಾಡಿಕೊಡುವಂತೆ ಅವರು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ರೆಹಮಾನ್ ಪುತ್ರ ಅಮೀನ್ ಕೂಡ ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ABOUT THE AUTHOR

...view details