ಕರ್ನಾಟಕ

karnataka

ETV Bharat / entertainment

ಅಕ್ಷಯ್ ಕುಮಾರ್, ರಾಜ್‌ಕುಮಾರ್ ರಾವ್, ಜಾಹ್ನವಿ ಕಪೂರ್, ಫರ್ಹಾನ್ ಅಖ್ತರ್ ಸೇರಿ ಸೆಲೆಬ್ರಿಟಿಗಳಿಂದ ಮತದಾನ - CELEBRITIES VOTING - CELEBRITIES VOTING

ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನ ನಡೆಯುತ್ತಿದ್ದು ಬಾಲಿವುಡ್ ಸೆಲೆಬ್ರಿಟಿಗಳಾದ ಅಕ್ಷಯ್ ಕುಮಾರ್, ರಾಜ್‌ಕುಮಾರ್ ರಾವ್, ಜಾಹ್ನವಿ ಕಪೂರ್, ಫರ್ಹಾನ್ ಅಖ್ತರ್ ಸೇರಿದಂತೆ ಹಲವರು ಮುಂಬೈನಲ್ಲಿ ಮತದಾನ ಮಾಡಿ ಮಾದರಿಯಾದರು.

Celebrity voting
ಸೆಲೆಬ್ರಿಟಿಗಳ ಮತದಾನ (ANI)

By ANI

Published : May 20, 2024, 9:15 AM IST

Updated : May 20, 2024, 11:24 AM IST

ಮುಂಬೈ:ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಎಂಟು ರಾಜ್ಯಗಳ ಒಟ್ಟು 49 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಐದನೇ ಹಂತದ ಮತದಾನ ಸುಗಮವಾಗಿ ನಡೆಯುತ್ತಿದೆ. ಇದೇ ವೇಳೆ, ಒಡಿಶಾದ 35 ವಿಧಾನಸಭಾ ಕ್ಷೇತ್ರಗಳಿಗೂ ಚುನಾವಣೆ ನಡೆಯುತ್ತಿದ್ದು, ಮತದಾರರ ಮತಗಟ್ಟೆಯತ್ತ ಆಗಮಿಸಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಅದರಂತೆ ಉದ್ಯಮಿಗಳು, ಸೆಲೆಬ್ರಿಟಿಗಳು, ರಾಜಕೀಯ ಮುಖಂಡರು ಸಹ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿ ಗಮನ ಸೆಳೆದರು.

ಮುಂಬೈನ ಮತಗಟ್ಟೆಯಲ್ಲಿ ಗೊತ್ತುಪಡಿಸಿದ ಮತಗಟ್ಟಗೆ ತೆರಳಿ ಮತದಾನ ಮಾಡಿದ ಬಾಲಿವುಡ್​ ನಟ ಅಕ್ಷಯ್ ಕುಮಾರ್, ತಮ್ಮ ಬೆರಳಿಗೆ ಹಾಕಿದ ಶಾಯಿ ಗುರುತು ತೋರಿಸಿದರು. ಅಕ್ಷಯ್ ಕುಮಾರ್ ಸೆಲೆಬ್ರಿಟಿಗಳಲ್ಲಿ ಮತದಾನ ಮಾಡಿದವರಲ್ಲಿ ಮೊದಲಿಗರಾದರು.

ಮತದಾನದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ನನ್ನ ಭಾರತವು ಅಭಿವೃದ್ಧಿ ಹೊಂದಬೇಕು ಜೊತೆಗೆ ಮತ್ತಷ್ಟು ಬಲಿಷ್ಠವಾಗಿರಬೇಕು. ಇದೆಲ್ಲವನ್ನು ನಾನು ನನ್ನ ಮನಸ್ಸಿನಲ್ಲಿಟ್ಟುಕೊಂಡು ಮತ ಹಾಕಿದ್ದೇನೆ. ಭಾರತವು ತಮಗೆ ಸರಿ ಎನಿಸುವುದಕ್ಕೆ ಮತ ಹಾಕಬೇಕು. ನೀವು ಕೂಡ ನಿಮ್ಮ ಮತದಾನದ ಹಕ್ಕು ಚಲಾಯಿಸಿ ಎಂದು ಮನವಿ ಮಾಡಿದರು.

ಫರ್ಹಾನ್ ಅಖ್ತರ್ ಮತ್ತು ಜೋಯಾ ಅಖ್ತರ್ ಕೂಡ ಬಾಂದ್ರಾದ ಮೌಂಟ್ ಮೇರಿ ಕಾನ್ವೆಂಟ್ ಹೈಸ್ಕೂಲ್‌ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಮತದಾರರು ಮನೆಯಿಂದ ಹೊರಗೆ ಬಂದು ತಮ್ಮ ಕರ್ತವ್ಯವನ್ನು ಚಲಾಯಿಸುವಂತೆ ಕೋರಿದರು. ತಾರೆಯರಾದ ಜಾಹ್ನವಿ ಕಪೂರ್, ಪರೇಶ್ ರಾವಲ್, ನ್ಯಾ ಮಲ್ಹೋತ್ರಾ ಕೂಡ ಮತದಾನ ಮಾಡಿದರು.

ಮತದಾನದ ಬಳಿಕ ಮಾತನಾಡಿದ ನಟ ರಾಜ್‌ಕುಮಾರ್ ರಾವ್, ಮತದಾನ ನಮ್ಮ ಜವಾಬ್ದಾರಿ. ನಾವೆಲ್ಲರು ಮತದಾನ ಮಾಡಬೇಕು. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು. ಚುನಾವಣಾ ಆಯೋಗವು ನನ್ನನ್ನು ರಾಷ್ಟ್ರೀಯ ಐಕಾನ್ ಆಗಿ ಆಯ್ಕೆ ಮಾಡಿದ್ದಕ್ಕಾಗಿ ತುಂಬಾ ಖುಷಿ ಇದೆ. ನೀವು ಕೂಡ ಮತ ಹಾಕಿ ಎಂದು ಅವರು ಮನವಿ ಮಾಡಿದರು. ಮತದಾನ ಮಾಡದವರಿಗೆ ತೆರಿಗೆ ಹೆಚ್ಚಳ ಅಥವಾ ಇತರ ಶಿಕ್ಷೆಯಂತಹ ಕೆಲವು ನಿಬಂಧನೆಗಳು ಇರಬೇಕು ಎಂದು ಮತದಾನದ ಬಳಿಕ ನಟ ಪರೇಶ್ ರಾವಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇರಷ್ಟೇ ಅಲ್ಲದೇ ನಟರಾದ ಧರ್ಮೇಂದ್ರ, ಸುನೀಲ್ ಶೆಟ್ಟಿ, ರಣದೀಪ್ ಹೂಡಾ, ಶಾಹಿದ್ ಕಪೂರ್, ನಟ ಮತ್ತು ಶಿವಸೇನೆ ನಾಯಕ ಗೋವಿಂದ, ಗಾಯಕ ಕೈಲಾಶ್ ಖೇರ್, ನಟಿ ಮತ್ತು ಸಂಸದೆ ಹೇಮಾ ಮಾಲಿನಿ, ಅವರ ಪುತ್ರಿ ಮತ್ತು ನಟಿ ಇಶಾ ಡಿಯೋಲ್, ನಟಿ ಅನಿತಾ ರಾಜ್, ಅಮೀರ್ ಖಾನ್ ಅವರ ಮಕ್ಕಳಾದ ಇರಾ ಖಾನ್ ಮತ್ತು ಜುನೈದ್ ಖಾನ್ ಸೇರಿದಂತೆ ಹಲವರು ಗುರುತಿಸಿದ ಮತಗಟ್ಟೆಗೆ ಆಗಮಿಸಿ ಮತ ಹಾಕಿದರರು. 'ದೇಶದ ಜವಾಬ್ದಾರಿಯುತ ಪ್ರಜೆಗಳಾದ ನಾವು, ಈ ಹಬ್ಬದಲ್ಲಿ ಮತ ಹಾಕುವ ಮೂಲಕ ರಾಷ್ಟ್ರದ ಪ್ರಗತಿಯನ್ನು ಎತ್ತಿ ತೋರಿಸಬೇಕು. ಮತದಾನದ ಪ್ರಮಾಣ ಕಡಿಮೆ ಆಗಬಾರದು. ಸೋಮಾರಿಯಾಗದೇ, ಮನೆಯಿಂದ ಹೊರಬಂದು ಮತ ಚಲಾಯಿಸಿ ಎಂದು ಇದೇ ವೇಳೆ ಅವರು ಮನವಿ ಮಾಡಿಕೊಂಡಿದ್ದಾರೆ.

ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರು ನಡೆಯುತ್ತಿರುವ ಐದನೇ ಹಂತದ ಲೋಕಸಭೆ ಚುನಾವಣೆಗೆ ಮತದಾರರು ಹೊರಗೆ ಬಂದು ತಮ್ಮ ಜವಾಬ್ದಾರಿಗಳನ್ನು ಪೂರೈಸುವಂತೆ ಒತ್ತಾಯಿಸುವ ಚಮತ್ಕಾರಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಿರುವ ಮತದಾನ ಸಂಜೆ 6 ಗಂಟೆಯವರೆಗೆ ನಡೆಯಲಿದೆ.

ದೇಶಾದ್ಯಂತ 543 ಲೋಕಸಭಾ ಕ್ಷೇತ್ರಗಳಿಗೆ ಚುನಾವಣಾ ಆಯೋಗವು ಏಳು ಹಂತಗಳಲ್ಲಿ ಮತದಾನ ನಿಗದಿ ಮಾಡಿದೆ. ಈಗಾಗಲೇ ನಾಲ್ಕು ಹಂತಗಳಲ್ಲಿ ಚುನಾವಣೆ ಮುಗಿದಿದೆ. ಇದುವರೆಗೆ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 379 ಕ್ಷೇತ್ರಗಳಲ್ಲಿ ವೋಟಿಂಗ್​ ಮುಕ್ತಾಯವಾಗಿದೆ. ಈಗ ಐದನೇ ಹಂತದಲ್ಲಿ 49 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ.

ಯಾವ ರಾಜ್ಯದಲ್ಲಿ ಎಷ್ಟು ಕ್ಷೇತ್ರಗಳು:49 ಲೋಕಸಭಾ ಕ್ಷೇತ್ರಗಳ ಪೈಕಿ ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿ ಹೆಚ್ಚಿನ ಕ್ಷೇತ್ರಗಳಿವೆ. ಮಹಾರಾಷ್ಟ್ರ (13)- ಧುಲೆ, ದಿಂಡೋರಿ, ನಾಸಿಕ್, ಪಾಲ್ಘರ್, ಭಿವಂಡಿ, ಕಲ್ಯಾಣ್, ಥಾಣೆ, ಮುಂಬೈ ಉತ್ತರ, ಮುಂಬೈ ಉತ್ತರ - ಪಶ್ಚಿಮ, ಮುಂಬೈ ಉತ್ತರ-ಪೂರ್ವ, ಮುಂಬೈ ಉತ್ತರ ಕೇಂದ್ರ, ಮುಂಬೈ ದಕ್ಷಿಣ ಕೇಂದ್ರ, ಮುಂಬೈ ದಕ್ಷಿಣ ಕ್ಷೇತ್ರದಲ್ಲಿ ಮತನದಾನ ನಡೆಯುತ್ತಿದೆ.

ಇದನ್ನೂ ಓದಿ:5ನೇ ಹಂತದ ಲೋಕಸಮರ: ರಾಯ್ ಬರೇಲಿ, ಅಮೇಥಿ ಸೇರಿ 49 ಕ್ಷೇತ್ರಗಳಿಗೆ ಮತದಾನ - ಇಲ್ಲಿದೆ ಸಂಪೂರ್ಣ ವಿವರ - LOK SABHA ELECTION 2024

Last Updated : May 20, 2024, 11:24 AM IST

ABOUT THE AUTHOR

...view details