ಕರ್ನಾಟಕ

karnataka

ETV Bharat / entertainment

ಶಿವಣ್ಣ​, ಉಪ್ಪಿ, ರಾಜ್​ ಶೆಟ್ರ '45' ಸಿನಿಮಾಗೆ ಸಿಕ್ತು ಆನಂದಪೀಠಾಧೀಶ್ವರ ಆಚಾರ್ಯ ಅಭಯಹಸ್ತ - Multi Starrer 45 Movie - MULTI STARRER 45 MOVIE

ಹ್ಯಾಟ್ರಿಕ್ ಹೀರೋ ಶಿವರಾಜ್​​ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ತೆರೆಹಂಚಿಕೊಂಡಿರುವ ಬಹುನಿರೀಕ್ಷಿರ ಚಿತ್ರಕ್ಕೆ '45'. ಚಿತ್ರೀಕರಣ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಬಿರುಸಿನಿಂದ ಸಾಗಿದೆ‌. ಶೂಟಿಂಗ್​ ಸ್ಪಾಟ್​ಗೆ ಆನಂದಪೀಠಾಧೀಶ್ವರ ಆಚಾರ್ಯ ಮಹಾಮಂಡಲೇಶ್ವರ ಅನಂತ ಶ್ರೀ ವಿಭೂಷಿತ ಶ್ರೀಬಾಲ್ಕಾನಂದ ಗಿರಿಜಿ ಮಹಾರಾಜ್ ಅವರು ಭೇಟಿ ನೀಡಿದ್ದರು.

45 shooting set
ಶಿವರಾಜ್​​ಕುಮಾರ್ ಜೊತೆ ಗುರೂಜಿ (ETV Bharat)

By ETV Bharat Karnataka Team

Published : Sep 25, 2024, 12:45 PM IST

ಕನ್ನಡ ಸಿನಿಮಾ ರಂಗದಲ್ಲಿ ವಿಭಿನ್ನ ಕಥೆ ಹಾಗೂ ಸದಭಿರುಚಿಯ ಸಿನಿಮಾಗಳನ್ನು ನಿರ್ಮಾಣ‌ ಮಾಡುವ ಮೂಲಕ ಪ್ಯಾಶನೇಟ್​​ ಪ್ರೊಡ್ಯೂಸರ್​ ಎಂಬ ಖ್ಯಾತಿ ಪಡೆದುಕೊಂಡಿರುವ ನಿರ್ಮಾಪಕ ರಮೇಶ್ ರೆಡ್ಡಿ. ಸದ್ಯ ಹ್ಯಾಟ್ರಿಕ್ ಹೀರೋ ಶಿವರಾಜ್​​ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಜೊತೆ ರಮೇಶ್ ರೆಡ್ಡಿ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿರುವುದು ನಿಮಗೆ ತಿಳಿದಿರುವ ವಿಚಾರವೇ. ಈ ಬಹುನಿರೀಕ್ಷಿರ ಚಿತ್ರಕ್ಕೆ '45' ಎಂಬ ಶೀರ್ಷಿಕೆ ಇಡಲಾಗಿದ್ದು, ಈಗಾಗಲೇ ಬಹುತೇಕ ಚಿತ್ರೀಕರಣ ನಡೆಸಲಾಗಿದೆ.

ಈಗಾಗಲೇ ಚಿತ್ರತಂಡ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಶಿವರಾಜ್​ಕುಮಾರ್ ಹಾಗೂ ಉಪೇಂದ್ರ ಅವರ ಫಸ್ಟ್ ಲುಕ್​​ಗಳನ್ನು ಅನಾವರಣಗೊಳಿಸಿದೆ. ಹಾಗೇ ಚಿತ್ರೀಕರಣ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಬಿರುಸಿನಿಂದ ಸಾಗಿದೆ‌. ಚಿತ್ರೀಕರಣ ಸ್ಥಳಕ್ಕೆ ಆನಂದಪೀಠಾಧೀಶ್ವರ ಆಚಾರ್ಯ ಮಹಾಮಂಡಲೇಶ್ವರ ಅನಂತ ಶ್ರೀ ವಿಭೂಷಿತ ಶ್ರೀಬಾಲ್ಕಾನಂದ ಗಿರಿಜಿ ಮಹಾರಾಜ್ ಅವರು ಭೇಟಿ ನೀಡಿದ್ದರು. ಈ ವೇಳೆ ಚಿತ್ರ ತಂಡದವರನ್ನು ಆಶೀರ್ವದಿಸಿ, ಚಿತ್ರದ ಯಶಸ್ಸಿಗೆ ಶುಭ ಕೋರಿದರು. ಈ ಸಂದರ್ಭ ಕರುನಾಡ ಚಕ್ರವರ್ತಿ ಶಿವರಾಜ್​​ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ರಾಜ್ ಬಿ ಶೆಟ್ಟಿ, ನಿರ್ದೇಶಕ ಅರ್ಜುನ್ ಜನ್ಯ, ನಿರ್ಮಾಪಕ ರಮೇಶ್‌ ರೆಡ್ಡಿ, ಸಾಹಸ ನಿರ್ದೇಶಕ ರವಿವರ್ಮ ಸೇರಿದಂತೆ ಚಿತ್ರತಂಡದ ಅನೇಕರು ಉಪಸ್ಥಿತರಿದ್ದರು.

ಶೂಟಿಂಗ್​ ಸೆಟ್​​ನಲ್ಲಿ ಗುರೂಜಿ (ETV Bharat)

ಇದನ್ನೂ ಓದಿ:ಮಗುವಿನೊಂದಿಗೆ ನಟಿ ದೀಪಿಕಾ ಪಡುಕೋಣೆ: ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿವೆ ಫ್ಯಾನ್​ ಮೇಡ್​​ ಫೋಟೋಗಳು - Deepika Padukone

ಭಾರತದಲ್ಲಿ ಒಬ್ಬ ವ್ಯಕ್ತಿಯೂ ಹಸಿವಿನಿಂದ ಇರಬಾರದು ಎಂಬ ಸಂಕಲ್ಪ ಮಾಡಿರುವ ಶ್ರೀಬಾಲ್ಕಾನಂದ ಗಿರಿಜಿ ಮಹಾರಾಜರು ತಮ್ಮ ಹರಿಧಾಮ ಸಾಯಿ ಟ್ರಸ್ಟ್ ಮೂಲಕ ಪ್ರತಿದಿನ ಸಾವಿರಾರು ಜನರಿಗೆ ಅನ್ನದಾನ ಮಾಡುತ್ತಿದ್ದಾರೆ. ಇಂಥ ಮಹಾತ್ಮರು, ಆಧ್ಯಾತ್ಮಿಕ ಚಿಂತಕರು ನಮ್ಮ "45" ಚಿತ್ರದ ಚಿತ್ರೀಕರಣ ಸ್ಥಳಕ್ಕೆ ಭೇಟಿ ನೀಡಿ ಆಶೀರ್ವದಿಸಿದ್ದು ಬಹಳ ಸಂತೋಷವಾಗಿದೆ‌. ಈ ಸಂದರ್ಭದಲ್ಲಿ ಅವರಿಗೆ ಅನಂತ ನಮಸ್ಕಾರಗಳೊಂದಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ನಿರ್ಮಾಪಕ ರಮೇಶ್ ರೆಡ್ಡಿ ತಿಳಿಸಿದ್ದಾರೆ.

ಶೂಟಿಂಗ್​ ಸೆಟ್​​ನಲ್ಲಿ ಗುರೂಜಿ (ETV Bharat)

ಇದನ್ನೂ ಓದಿ:"ಗೋಪಿಲೋಲ" ಟ್ರೇಲರ್ ರಿಲೀಸ್​​: ಅ.4ಕ್ಕೆ ಸಿನಿಮಾ ಬಿಡುಗಡೆ - Gopilola Trailer

ಶಿವಣ್ಣ, ಉಪ್ಪಿ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ "45" ಚಿತ್ರದ ನಾಯಕಿಯಾಗಿ ಕೌಸ್ತುಭ ಮಣಿ ಅಭಿನಯಿಸುತ್ತಿದ್ದಾರೆ‌. ಕನ್ನಡ ಚಿತ್ರರಂಗದ ಬಹುಬೇಡಿಕೆಯ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಈ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಈ ಸಿನಿಮಾ ಮೂಲಕ ಅರ್ಜುನ್ ಜನ್ಯ ನಿರ್ದೇಶಕನಾಗಿ ಭಡ್ತಿ ಪಡೆಯುತ್ತಿದ್ದಾರೆ. ಸಿನಿಮಾದ‌ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಹ ಶುರುವಾಗಿವೆ.

ABOUT THE AUTHOR

...view details