ಕರ್ನಾಟಕ

karnataka

ETV Bharat / entertainment

ಟೀಸರ್​​ಗೂ ಮುನ್ನ ಮತ್ತೊಂದು ಪವರ್​ಫುಲ್ ಪೋಸ್ಟರ್ ಅನಾವರಣಗೊಳಿಸಿದ 'ಪುಷ್ಪ 2' ತಂಡ - Pushpa 2 - PUSHPA 2

Allu Arjun's Poster: 'ಪುಷ್ಪ 2: ದಿ ರೂಲ್‌' ಚಿತ್ರದಿಂದ ಅಲ್ಲು ಅರ್ಜುನ್ ಅವರ ಪವರ್​ಫುಲ್​ ಪೋಸ್ಟರ್ ಅನಾವರಣಗೊಂಡಿದೆ.

Allu Arjun's Poster
ಅಲ್ಲು ಅರ್ಜುನ್ ಪೋಸ್ಟರ್

By ETV Bharat Karnataka Team

Published : Apr 6, 2024, 3:06 PM IST

Updated : Apr 6, 2024, 4:00 PM IST

2024ರ ಬಹುನಿರೀಕ್ಷಿತ ಚಿತ್ರ 'ಪುಷ್ಪ 2: ದಿ ರೂಲ್‌'ನ ಟೀಸರ್​​ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ನಿರ್ಮಾಪಕರು ಚಿತ್ರದಿಂದ ಕುತೂಹಲಕಾರಿ ಪೋಸ್ಟರ್ ಅನ್ನು ಅನಾವರಣಗೊಳಿಸಿದ್ದಾರೆ. ಅಲ್ಲು ಅರ್ಜುನ್ ಮುಖ್ಯಭೂಮಿಕೆಯ ಚಿತ್ರದ ಟೀಸರ್ ಸೋಮವಾರ ಬಿಡುಗಡೆ ಆಗಲಿದ್ದು, ಇದೀಗ ರಿವೀಲ್​ ಆಗಿರೋ ಪೋಸ್ಟರ್ ಅಭಿಮಾನಿಗಳ ಉತ್ಸಾಹ ಹೆಚ್ಚಿಸಿದೆ. ಕನ್ನಡತಿ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರ ನಿರ್ವಹಿಸಿರುವ 'ಪುಷ್ಪ 2: ದಿ ರೂಲ್‌'ನ ಟೀಸರ್ ಅನ್ನು ಏಪ್ರಿಲ್ 8ರಂದು ನಾಯಕ ನಟ ಅಲ್ಲು ಅರ್ಜುನ್ ಅವರ 42ನೇ ಜನ್ಮದಿನದಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಪುಷ್ಪ ಸೀಕ್ವೆಲ್​​ ಹಿಂದಿರುವ ದಕ್ಷಿಣದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್, ಸಾಮಾಜಿಕ ಮಾಧ್ಯಮದಲ್ಲಿ ಚಿತ್ರದ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದೆ. ಪೋಸ್ಟ್​​ಗೆ, "ಪುಷ್ಪ 2: ದಿ ರೂಲ್​ ಟೀಸರ್ ಏಪ್ರಿಲ್ 8ರಂದು ರಿಲೀಸ್ ಆಗಲಿದೆ. ಕೇವಲ 3 ದಿನಗಳಷ್ಟೇ ಬಾಕಿ. ರೋಮಾಂಚನಗೊಳ್ಳಲು ಸಿದ್ಧರಾಗಿ, ಪುಷ್ಪ ಮಾಸ್ ಜಾತ್ರಾ, ವಿಶ್ವದಾದ್ಯಂತ ಆಗಸ್ಟ್ 15ರಂದು ಸಿನಿಮಾ ಬಿಡುಗಡೆ ಆಗಲಿದೆ" ಎಂದು ಕ್ಯಾಪ್ಷನ್​​ ಕೊಟ್ಟಿದ್ದಾರೆ.

ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್ ಶಂಖ ಊದುತ್ತಿರುವಂತೆ ಹಾಗೂ ತ್ರಿಶೂಲ ಹಿಡಿದಿರುವಂತೆ ಪವರ್​ಫುಲ್​​ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ ನಟನ ಸಂಪೂರ್ಣ ಮುಖ ಕಾಣಿಸಿಕೊಂಡಿಲ್ಲ. ಕೆಂಪು ಮತ್ತು ಹಳದಿ ಬಣ್ಣ ಪೋಸ್ಟರ್​ನ ತೀವ್ರತೆ ಹೆಚ್ಚಿಸಿದೆ.

ಇದಕ್ಕೂ ಮೊದಲು, ನಾಯಕ ನಟಿ ರಶ್ಮಿಕಾ ಮಂದಣ್ಣ ಅವರ ಜನ್ಮದಿನದ ಸಲುವಾಗಿ ನಿನ್ನೆ ಶ್ರೀವಲ್ಲಿ ಪೋಸ್ಟರ್ ಅನಾವರಣಗೊಂಡಿತ್ತು. ಚಿತ್ರ ನಿರ್ಮಾಪಕರು ನಟಿಯ ಪಾತ್ರವನ್ನಾಧರಿಸಿದ ಪೋಸ್ಟರ್ ಬಿಡುಗಡೆ ಮಾಡಿ, ನಟಿಗೆ ವಿಶೇಷವಾಗಿ ಶುಭಕೋರಿತ್ತು. ಸಾಂಪ್ರದಾಯಿಕ ಸೀರೆಯನ್ನುಟ್ಟ ಶ್ರೀವಲ್ಲಿ ಹಣೆ ಮೇಲೆ ಸಿಂಧೂರವನ್ನಿಟ್ಟಿದ್ದರು. ಖಡಕ್​ ನೋಟವನ್ನೊಳಗೊಂಡ ಈ ಪೋಸ್ಟರ್​​ಗೆ ಅಪಾರ ಸಂಖ್ಯೆಯಲ್ಲಿ ಮೆಚ್ಚುಗೆ ವ್ಯಕ್ತವಾಯಿತು.

ಇದನ್ನೂ ಓದಿ:ಸೀರೆಗೆ ತಕ್ಕ ಆಭರಣ ತೊಟ್ಟು ಖಡಕ್ ಲುಕ್ ಕೊಟ್ಟ ಶ್ರೀವಲ್ಲಿ: ಪುಷ್ಪ 2ರ ರಶ್ಮಿಕಾ ಪೋಸ್ಟರ್ ನೋಡಿ - Rashmika Srivalli Look

''ಪುಷ್ಪ 2: ದಿ ರೂಲ್'' ಇದೇ ಸಾಲಿನ ಆಗಸ್ಟ್ 15ರಂದು ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಈ ಚಿತ್ರವನ್ನು ಸುಕುಮಾರ್ ನಿರ್ದೇಶಿಸಿದ್ದು, ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೊತೆ ಫಹಾದ್ ಫಾಸಿಲ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 2021ರ ಕೊನೆಗೆ ತೆರೆಕಂಡು ಧೂಳೆಬ್ಬಿಸಿದ ಪುಷ್ಪ 1ರಲ್ಲಿನ ಅತ್ಯುತ್ತಮ ನಟನೆಗಾಗಿ ಅಲ್ಲು ಅರ್ಜುನ್ ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇದನ್ನೂ ಓದಿ:8 ದಿನದಲ್ಲಿ ₹100 ಕೋಟಿ ದಾಟಿದ ಮೊದಲ ಮಲಯಾಳಂ ಸಿನಿಮಾ 'ಆಡುಜೀವಿತಂ' - The Goat Life

Last Updated : Apr 6, 2024, 4:00 PM IST

For All Latest Updates

ABOUT THE AUTHOR

...view details