ಕರ್ನಾಟಕ

karnataka

ETV Bharat / entertainment

ಬಂದೇ ಬಿಟ್ಟ ಪುಷ್ಪರಾಜ್: ಪುಷ್ಪ ಸೀಕ್ವೆಲ್​​ನ ಮೊದಲ ಹಾಡಿಗೆ ಫ್ಯಾನ್ಸ್ ಫಿದಾ - Pushpa 2 - PUSHPA 2

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ 'ಪುಷ್ಪ 2: ದಿ ರೂಲ್'ನ 'ಪುಷ್ಪ ಪುಷ್ಪ' ಹಾಡು ಅನಾವರಣಗೊಂಡಿದೆ.

Pushpa 2
'ಪುಷ್ಪ 2

By ETV Bharat Karnataka Team

Published : May 2, 2024, 1:19 PM IST

ಸೌತ್ ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಮಟ್ಟದಲ್ಲಿ ಕುತೂಹಲ ಕೆರಳಿಸಿರುವ 'ಪುಷ್ಪ 2' ಸಿನಿಮಾದ ಮೊದಲ ಹಾಡನ್ನು ಕಾರ್ಮಿಕರ ದಿನದ ಅಂಗವಾಗಿ ಬಿಡುಗಡೆ ಮಾಡಲಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್​​ ಮುಖ್ಯಭೂಮಿಕೆಯ 'ಪುಷ್ಪ:ದಿ ರೂಲ್​​'ನ ಟೈಟಲ್​ ಟ್ರ್ಯಾಕ್​​ ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ ಹಾಗೂ ಬೆಂಗಾಲಿ ಸೇರಿ 6 ಭಾಷೆಗಳಲ್ಲಿ ರಿಲೀಸ್ ಆಗಿದೆ. ಸಾಮಾನ್ಯ ಕಾರ್ಮಿಕ ಪುಷ್ಪರಾಜ್ ಶ್ರೀಮಂತನಾಗಿ ಬೆಳೆದ ರೀತಿಯನ್ನು ಹಾಡಿನಲ್ಲಿ ಕಟ್ಟಿಕೊಡಲಾಗಿದೆ.

ಪುಷ್ಪ ಪುಷ್ಪ ಅಂತಾ ಶುರುವಾಗುವ ಹಾಡಿಗೆ ಖ್ಯಾತ ಗಾಯಕ ದೇವಿಶ್ರೀ ಪ್ರಸಾದ್ ಸಂಗೀತ ಒದಗಿಸಿದ್ದಾರೆ. ತೆಲುಗು ಹಾಡಿಗೆ ಚಂದ್ರಬೋಸ್ ಸಾಹಿತ್ಯ ಬರೆದಿದ್ದು, ನಕಾಶ್ ಅಜೀಜ್, ದೀಪಕ್ ಬ್ಲೂ ದನಿಯಾಗಿದ್ದಾರೆ. ಕನ್ನಡ ಹಾಡಿಗೆ ವರದರಾಜು ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್ ಕಂಠಸಿರಿಯಲ್ಲಿ ಹಾಡು ಮೂಡಿಬಂದಿದೆ.

ಚಿತ್ರದ ಮುಖ್ಯಭೂಮಿಕೆಯಲ್ಲಿರುವ ಅಲ್ಲು ಅರ್ಜುನ್ ಅವರ ಪುಷ್ಪರಾಜ್ ಜೋಡಿ ಶ್ರೀವಲ್ಲಿ ಪಾತ್ರದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಫಹದ್ ಫಾಸಿಲ್, ಡಾಲಿ ಧನಂಜಯ್ ಸೇರಿದಂತೆ ಹಲವರು ತಾರಾ ಬಳಗದಲ್ಲಿದ್ದಾರೆ. 'ಪುಷ್ಪ'ನಿಗೆ ಸುಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದು, ಈ ಹಾಡಿನಲ್ಲಿ ಅಲ್ಲು ಅರ್ಜುನ್ ಜಭರ್ದಸ್ತ್ ಆಗಿ ಕುಣಿದು ಕುಪ್ಪಳಿಸಿದ್ದಾರೆ ಅನ್ನೋದು ಕೆಲವೆಡೆ ಗೊತ್ತಾಗುತ್ತದೆ. ಲಿರಿಕಲ್​​ ಸಾಂಗ್​ ರಿಲೀಸ್​ ಆಗಿದ್ದು, ಸಂಪೂರ್ಣ ವಿಡಿಯೋ ಸಾಂಗ್​​ ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ. ಅಲ್ಲು ಅವರ ತಗ್ಗೋದೇ ಇಲ್ಲ ಎಂಬ ಡೈಲಾಗ್ ಫ್ಯಾನ್ಸ್​​​ಗೆ ಕಿಕ್ ಕೊಡ್ತಿದೆ. ಮೈತ್ರಿ ಮೂವಿ‌ ಮೇಕರ್ಸ್ ಬಿಗ್​​ ಬಜೆಟ್​ನಲ್ಲಿ ಚಿತ್ರ ನಿರ್ಮಾಣ ಮಾಡಿದೆ. ಪ್ಯಾನ್ ಇಂಡಿಯಾ ಮಾತ್ರವಲ್ಲದೇ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ 'ಪುಷ್ಪ 2: ದಿ ರೂಲ್' ಆಗಸ್ಟ್ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ:'ವೀರ್' ಆಗಿ ಜೆ.ಕೆ: ಯುವ ನಿರ್ದೇಶಕನ ಜೊತೆ ಕೈ ಜೋಡಿಸಿದ ಕಾರ್ತಿಕ್ ಜಯರಾಮ್ - The Veer

ಚಿತ್ರದ ಟೀಸರ್, ಪೋಸ್ಟರ್​​ಗಳು ಈಗಾಗಲೇ ಪ್ರೇಕ್ಷಕರ ಕುತೂಹಲ ಕೆರಳಿಸಿದೆ. ಟಾಲಿವುಡ್ ಸ್ಟೈಲಿಷ್ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಅಲ್ಲು ಅರ್ಜುನ್ ಏಪ್ರಿಲ್​ 8ರಂದು ಜನ್ಮದಿನ ಆಚರಿಸಿಕೊಂಡರು. ಅಂದು ಸಿನಿಮಾದ ಟೀಸರ್ ಅನಾವರಣಗೊಂಡಿತ್ತು. ಪಕ್ಕಾ ಮಾಸ್ ಶೈಲಿಯಲ್ಲಿದ್ದ ಟೀಸರ್​ನಲ್ಲಿ ಅಲ್ಲು ಅರ್ಜುನ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಮಹಿಳೆಯ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾ ಸುತ್ತಲಿನ ಕುತೂಹಲ ಹೆಚ್ಚಿಸಿತ್ತು.

ಇದನ್ನೂ ಓದಿ:ದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್​​ನಲ್ಲಿ ಕನ್ನಡದ 'ಕೆಂಡ': ನಿರ್ದೇಶಕ ಸಹದೇವ್ ಕೆಲವಡಿಗೆ ಪ್ರಶಸ್ತಿ - Sahadev Kelavadi

ಸೀರೆ ಧರಿಸಿ, ಕೊರಳಲ್ಲಿ ನಿಂಬೆ, ಹೂವಿನ ಹಾರವಿತ್ತು. ಕಾಲಿಗೆ ಗೆಜ್ಜೆ ಕಟ್ಟಿಕೊಂಡು, ತ್ರಿಶೂಲ ಹಿಡಿದು ಫೈಟ್ ಮಾಡಿದ್ದರು. ಜಾತ್ರೆಯಂತೆ ತೋರುವ ಬ್ಯಾಗ್ರೌಂಡ್‌ನಲ್ಲಿ ಟೀಸರ್ ಮೂಡಿಬಂದಿತ್ತು. ಅಲ್ಲು ಅರ್ಜುನ್​ ಅಲ್ಲದೇ ಶ್ರೀವಲ್ಲಿ ರಶ್ಮಿಕಾ ಮಂದಣ್ಣ ಅವರ ಪೋಸ್ಟರ್​ ಕೂಡ ಗಮನ ಸೆಳೆದಿದೆ. ಇದೀಗ 'ಪುಷ್ಪ....ಪುಷ್ಪ' ಹಾಡು ಸಖತ್​ ಸದ್ದು ಮಾಡುತ್ತಿದೆ.

ABOUT THE AUTHOR

...view details