ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಅವರ ಐಷಾರಾಮಿ ಅಪಾರ್ಟ್ಮೆಂಟ್ ಪಾಳು ಬಿದ್ದಿತ್ತು. ಈ ಅಪಾರ್ಟ್ಮೆಂಟ್ನಲ್ಲಿ 'ದಿ ಕೇರಳ ಸ್ಟೋರಿ' ಖ್ಯಾತಿಯ ನಟಿ ಅದಾ ಶರ್ಮಾ ವಾಸಿಸಲಿದ್ದಾರೆ ಎಂಬ ಊಹಾ ಪೋಹಾಗಳು ಕೆಲವು ದಿನದ ಹಿಂದೆ ಹಬ್ಬಿತು. ಇದೀಗ ಈ ಕುರಿತು ದೃಢೀಕರಣ ಸಿಕ್ಕಿದ್ದು, ನಟ ಸುಶಾಂತ್ ಮೆಚ್ಚಿನ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿರುವುದಾಗಿ ತಿಳಿಸಿದ್ದಾರೆ.
ಮಾಧ್ಯಮಗಳ ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ, ಕಳೆದ ನಾಲ್ಕು ತಿಂಗಳ ಹಿಂದೆಯೇ ಬಾಂದ್ರಾದಲ್ಲಿರುವ ಸುಶಾಂತ್ ರಜಪೂತ್ ಅವರ ಅಪಾರ್ಟ್ಮೆಂಟ್ಗೆ ಗೃಹ ಪ್ರವೇಶ ಮಾಡಿದ್ದು, ಅಲ್ಲಿಗೆ ಶಿಫ್ಟ್ ಆಗಿರುವುದಾಗಿ ತಿಳಿಸಿದ್ದಾರೆ. ನಾಲ್ಕು ತಿಂಗಳ ಹಿಂದೆಯೇ ಮನೆಗೆ ಪ್ರವೇಶಿಸಿದ್ದರೂ ಕೆಲವು ಪ್ರಾಜೆಕ್ಟ್ನಿಂದಾಗಿ ಅಲ್ಲಿ ಹೆಚ್ಚಿನ ಸಮಯ ಕಳೆಯಲಿಲ್ಲ. ಇದೀಗ ಕಳೆದ ಕೆಲವು ದಿನದಿಂದ ಆ ಮನೆಯಲ್ಲಿ ನೆಲೆ ಇದ್ದು, ಅಲ್ಲಿ ಸಕಾರಾತ್ಮಕ ವೈಬ್ಸ್ಗಳಿವೆ ಎಂದು ತಿಳಿಸಿದ್ದಾರೆ.
ಅನೇಕ ಮಂದಿ ಈ ಮನೆಯನ್ನು ಕೊಳ್ಳಲು ಹೆದರಿದ್ದರು. ಆದರೆ, ನಾನು ಜನರು ಮಾತಿಗೆ ಕಿವಿಗೊಡದೇ ನನ್ನ ಮನಸಿನ ಮಾತು ಆಲಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಇದೇ ರೀತಿ ನನ್ನ ವೃತ್ತಿ ಜೀವನದ ಆರಂಭದ ಹಾರಾರ್ ಸಿನಿಮಾದ ಬಗ್ಗೆ ಕೂಡ ಹೆದರಿಸಿದ್ದರು. ಆದರೆ, ನನ್ನ ನಗುವಿನ ಮೂಲಕ ಅವರಿಗೆ ಉತ್ತರಿಸಿದೆ ಎಂದಿದ್ದಾರೆ