ಭಾರತೀಯ ಕ್ರಿಕೆಟಿಗ ಯಜುವೇಂದ್ರ ಚಹಾಲ್ ಅವರಿಂದ ವಿಚ್ಛೇದನ ಪಡೆಯಲಿದ್ದಾರೆಂಬ ವದಂತಿಗಳ ಬಗ್ಗೆ ಪತ್ನಿ, ನೃತ್ಯ ಸಂಯೋಜಕಿ ಮತ್ತು ನಟಿ ಧನಶ್ರೀ ವರ್ಮಾ ಪ್ರತಿಕ್ರಿಯಿಸಿದ್ದು, ಊಹಾಪೋಹಗಳನ್ನು "ಆಧಾರರಹಿತ" ಎಂದು ಕರೆದಿದ್ದಾರೆ.
ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ವದಂತಿಗಳ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲ ದಿನಗಳು ತಮಗೆ ಮತ್ತು ತಮ್ಮ ಕುಟುಂಬಕ್ಕೆ ಎಷ್ಟು ಕಠಿಣವಾಗಿದ್ದವು ಎಂಬುದರ ಅಸಮಾಧಾನವನ್ನು ಹೊರಹಾಕಿದ್ದಾರೆ.
"ಕಳೆದ ಕೆಲವು ದಿನಗಳು ನನ್ನ ಕುಟುಂಬ ಮತ್ತು ನನಗೆ ಬಹಳ ಕಠಿಣವಾಗಿದ್ದವು. ಸತ್ಯ ಪರಿಶೀಲಿಸದೇ ಆಧಾರರಹಿತ ಬರವಣಿಗೆ ಮತ್ತು ದ್ವೇಷವನ್ನು ಹರಡುವ ಟ್ರೋಲ್‌ಗಳಿಂದ ನನ್ನ ಖ್ಯಾತಿಗೆ ಧಕ್ಕೆಯಾಗಿದ್ದು, ನಿಜಕ್ಕೂ ಬೇಸರ ಉಂಟುಮಾಡಿದೆ" ಎಂದು ಬರೆದುಕೊಂಡಿದ್ದಾರೆ.
ಧನಶ್ರೀ ವರ್ಮಾ ಇನ್ಸ್ಟಾಗ್ರಾಮ್ ಸ್ಟೋರಿ (Photo: Instagram) ಮೌನ ದೌರ್ಬಲ್ಯವಲ್ಲ, ಬದಲಾಗಿ ತನ್ನ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂಬುದನ್ನೂ ಸಹ ಇಲ್ಲಿ ಒತ್ತಿ ಹೇಳಿದ್ದಾರೆ. "ಹೆಸರು ಸಂಪಾದಿಸಲು ಬಹಳ ವರ್ಷಗಳಿಂದ ಶ್ರಮಿಸಿದ್ದೇನೆ. ನನ್ನ ಮೌನ ದೌರ್ಬಲ್ಯದ ಸಂಕೇತವಲ್ಲ, ಅದು ಶಕ್ತಿಯ ಸಂಕೇತ. ಆನ್‌ಲೈನ್‌ನಲ್ಲಿ ನೆಗೆಟಿವಿಟಿ ಸುಲಭವಾಗಿ ಹರಡುತ್ತದೆ, ಆದ್ರೆ ಇತರರನ್ನು ಬೆಳೆಸಲು ಧೈರ್ಯ ಬೇಕು" ಎಂದಿದ್ದಾರೆ.
"ನಾನು ಸತ್ಯದ ಮೇಲೆ ನಂಬಿಕೆಯಿಡಲು ಮತ್ತು ನನ್ನ ಮೌಲ್ಯಗಳನ್ನು ಕಾಪಾಡಿಕೊಂಡು ಮುಂದುವರಿಯಲು ಇಚ್ಛಿಸುತ್ತೇನೆ. ಸತ್ಯ ಯಾವಾಗಲೂ ಮೇಲುಗೈ ಸಾಧಿಸುತ್ತದೆ, ಅದಕ್ಕೆ ಸಮರ್ಥನೆಯ ಅಗತ್ಯವಿಲ್ಲ. ಓಂ ನಮಃ ಶಿವಾಯ" ಎಂದು ತಮ್ಮ ಪೋಸ್ಟ್ ಪೂರ್ಣಗೊಳಿಸಿದ್ದಾರೆ.
ಚಹಾಲ್ ಮತ್ತು ಧನಶ್ರೀ ದಂಪತಿ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ ಬಳಿಕ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಊಹಾಪೋಹಗಳು ಎದ್ದವು. ಅದಕ್ಕೆ ಪೂರಕವಾಗಿ ಕ್ರಿಕೆಟರ್ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಅಕೌಂಟ್ಗಳಿಂದ ಧನಶ್ರೀ ಅವರ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆಂದು ವರದಿಯಾಗಿದೆ. ಆದಾಗ್ಯೂ, ಧನಶ್ರೀ ಅವರ ಅಕೌಂಟ್ನಲ್ಲಿ ಪತಿ ಜೊತೆಗಿನ ಕೆಲ ಫೋಟೋಗಳಿವೆ.
ಇದನ್ನೂ ಓದಿ:ಸ್ಟೋರಿ ಮುಖ್ಯ, ನಿರ್ದೇಶಕರು ಹೆಣ್ಣೋ ಗಂಡೆಂಬುದಲ್ಲ ಎಂದಿದ್ದ ಯಶ್ : ಟಾಕ್ಸಿಕ್ ಲೇಡಿ ಡೈರೆಕ್ಟರ್ ಬಗ್ಗೆ ತಿಳಿಯಬೇಕಾದ ಸಂಗತಿಗಳಿವು
ಇದಕ್ಕೂ ಮುನ್ನ, ಯಜುವೇಂದ್ರ ಅವರು ಇನ್‌ಸ್ಟಾಗ್ರಾಮ್‌ನಲ್ಲಿ "Silence is a profound melody, for those who can hear it above all the noise" ಎಂದು ತತ್ವಜ್ಞಾನಿ ಸಾಕ್ರಟೀಸ್ ಅವರನ್ನು ಉಲ್ಲೇಖಿಸಿ ಒಂದು ಪೋಸ್ಟ್ ಹಂಚಿಕೊಂಡಿದ್ದರು.
ಇದನ್ನೂ ಓದಿ:ಬಜೆಟ್‌ಗಿಂತ 6 ಪಟ್ಟು ಲಾಭ, ಚಿತ್ರಮಂದಿರಗಳಲ್ಲಿ 200 ದಿನ ಓಡಿದ ಯಶ್ ಸಿನಿಮಾ; 2014ರ ಹಿಟ್ ಚಿತ್ರವಿದು
2020ರ ಡಿಸೆಂಬರ್ 22ರಂದು ಗುರುಗ್ರಾಮದಲ್ಲಿ ನಡೆದ ಆತ್ಮೀಯ ಸಮಾರಂಭದಲ್ಲಿ ದಾಂಪತ್ಯ ಜೀವನ ಆರಂಭಿಸಿದ ಜೋಡಿ ಅಭಿಮಾನಿಗಳಿಂದ ಸಾಕಷ್ಟು ಪ್ರೀತಿ ಗಳಿಸಿತ್ತು. ಇಬ್ಬರೂ ಇನ್ಸ್ಟಾ ರೀಲ್ ಮೂಲಕ ಅಭಿಮಾನಿಗಳನ್ನು ಮನೋರಂಜಿಸಿದ್ದರು. ಆದ್ರೀಗ ಡಿವೊರ್ಸ್ ವದಂತಿ ಉಲ್ಭಣಗೊಂಡಿದೆ.
ಇದನ್ನೂ ಓದಿ:ಭಾರತೀಯ ಕ್ರಿಕೆಟರ್ ದಾಂಪತ್ಯದಲ್ಲಿ ಬಿರುಕು: ಇನ್ಸ್ಸ್ಟಾದಿಂದ ಪತ್ನಿ ಫೋಟೋ ಡಿಲೀಟ್, ವಿಚ್ಛೇದನಕ್ಕೆ ಮುಂದಾದರೇ ಸ್ಟಾರ್ ಪ್ಲೇಯರ್?