ಕರ್ನಾಟಕ

karnataka

ETV Bharat / entertainment

ಚಿತ್ರೀಕರಣ ವೇಳೆ ಗಾಯಗೊಂಡ ನಟ ವಿಕ್ಕಿ ಕೌಶಲ್​​: ವಿಡಿಯೋ ನೋಡಿದ ಅಭಿಮಾನಿಗಳಲ್ಲಿ ಆತಂಕ - ವಿಕ್ಕಿ ಕೌಶಲ್ ಸಿನಿಮಾಗಳು

ಎಡಗೈ ಪೆಟ್ಟು ಮಾಡಿಕೊಂಡಿರುವ ನಟ ವಿಕ್ಕಿ ಕೌಶಲ್ ಅವರ ವಿಡಿಯೋ ಸೋಷಿಯಲ್​​ ಮೀಡಿಯಾಗಳಲ್ಲಿ ವೈರಲ್​ ಆಗುತ್ತಿದೆ.

Vicky Kaushal injured
ಗಾಯಗೊಂಡ ವಿಕ್ಕಿ ಕೌಶಲ್

By ETV Bharat Karnataka Team

Published : Feb 8, 2024, 4:01 PM IST

ಬಾಲಿವುಡ್​ನ ಬಹುಬೇಡಿಕೆಯ ನಟ ವಿಕ್ಕಿ ಕೌಶಲ್​ ಅವರ ಮುಂಬರುವ ಬಹುನಿರೀಕ್ಷಿತ ಸಿನಿಮಾ 'ಚಾವಾ'. ಪೀರಿಯಾಡಿಕಲ್​ ಡ್ರಾಮಾದ ಚಿತ್ರೀಕರಣದಲ್ಲಿ ನಟ ಬ್ಯುಸಿಯಾಗಿದ್ದಾರೆ. ಆದ್ರೆ, ಚಿತ್ರೀಕರಣದ ವೇಳೆ ಅವರು ಗಾಯಗೊಂಡಿದ್ದು, ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ನಟ ಮುಂಬೈನ ತಮ್ಮ ನಿವಾಸದ ಎದುರು ಕಾಣಿಸಿಕೊಂಡಿದ್ದಾರೆ. ಪಾಪರಾಜಿಗಳು ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾ ಖಾತೆಗಳಲ್ಲಿ ಸ್ಯಾಮ್​ ಬಹದ್ದೂರ್ ನಟನ ವಿಡಿಯೋ ಹಂಚಿಕೊಂಡಿದ್ದು, ಎಡಗೈಗೆ ಪೆಟ್ಟಾಗಿರೋದನ್ನು ಈ ವಿಡಿಯೋಗಳಲ್ಲಿ ಕಾಣಬಹುದು. ವಿಡಿಯೋ ಇಂಟರ್​​ನೆಟ್​ನಲ್ಲಿ ವೈರಲ್​ ಆಗಿದ್ದು, ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪಾಪರಾಜಿಯೋರ್ವರು ಹಂಚಿಕೊಂಡಿರುವ ವಿಡಿಯೋದಲ್ಲಿ, ವಿಕ್ಕಿ ಕೌಶಲ್​​ ಕ್ಯಾಶುಯಲ್ ವೇರ್​​ನಲ್ಲಿ ಕಾಣಿಸಿಕೊಂಡರು. ತಮ್ಮ ಕಾರಿನಿಂದ ಹೊರಬಂದಾಗ ಪಾಪರಾಜಿಗಳತ್ತ ಕೈ ಬೀಸಿದರು. ಈ ವೇಳೆ ನಟನ ಎಡಗೈಗೆ ಪೆಟ್ಟಾಗಿರುವುದು ಗೊತ್ತಾಗುತ್ತದೆ. ಈ ವಿಡಿಯೋ ಕಂಡು ಕಳವಳಗೊಂಡ ಅಭಿಮಾನಿಗಳು ತಮ್ಮ ಮೆಚ್ಚಿನ ನಟ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿ ಸೋಷಿಯಲ್​ ಮೀಡಿಯಾಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಕೊನೆಯದಾಗಿ ಸ್ಯಾಮ್ ಬಹದ್ದೂರ್ ಚಿತ್ರದಲ್ಲಿ ಕಾಣಿಸಿಕೊಂಡಿರುವ ವಿಕ್ಕಿ ಕೌಶಲ್, ಸೋಷಿಯಲ್​ ಮೀಡಿಯಾಗಳಲ್ಲಿ ಇತ್ತೀಚೆಗೆ ಚಾವಾ ಚಿತ್ರದ ತೆರೆಮರೆಯ ಫೋಟೋಗಳನ್ನು ಹಂಚಿಕೊಂಡಿದ್ದರು. ನಟನ ಮುಂದಿನ ಪ್ರಾಜೆಕ್ಟ್ 'ಚಾವಾ' ಛತ್ರಪತಿ ಸಂಭಾಜಿ ಮಹಾರಾಜರ ಜೀವನಾಧಾರಿತ ಐತಿಹಾಸಿಕ ನಾಟಕ. ಛತ್ರಪತಿ ಸಂಭಾಜಿ ಮಹಾರಾಜರ ಪಾತ್ರಕ್ಕೆ ವಿಕ್ಕಿ ಕೌಶಲ್ ಜೀವ ತುಂಬಿದ್ದರೆ, ರಶ್ಮಿಕಾ ಮಂದಣ್ಣ ಅವರ ಪತ್ನಿ ಯೇಸುಬಾಯಿ ಭೋನ್ಸಾಲೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರದಲ್ಲಿ ಅಕ್ಷಯ್ ಖನ್ನಾ, ಅಶುತೋಷ್ ರಾಣಾ, ದಿವ್ಯಾ ದತ್ತಾ ಮತ್ತು ನೀಲ್ ಭೂಪಾಲಂ ಕೂಡ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇದೊಂದು ಹಿಸ್ಟಾರಿಕಲ್​ ಡ್ರಾಮಾ ಆದ ಹಿನ್ನೆಲೆ ಸಾಕಷ್ಟು ನಿರೀಕ್ಷೆಗಳಿವೆ. ಅಲ್ಲದೇ ತಮ್ಮ ಪಾತ್ರಗಳ ಮೇಲಿನ ಕೌಶಲ್ ಬದ್ಧತೆ ಈಗಾಗಲೇ ಈ ಹಿಂದಿನ ಚಿತ್ರಗಳಲ್ಲಿ ಸಾಬೀತಾಗಿದ್ದು, 'ಚಾವಾ' ನಟನೆ ಮೇಲೂ ಸಾಕಷ್ಟು ನಿರೀಕ್ಷೆಗಳಿವೆ.

ಇದನ್ನೂ ಓದಿ:ದೀಪಿಕಾ ಪಡುಕೋಣೆ ಸಹೋದರಿ ಹೇಗಿದ್ದಾರೆ? ಮುಂಬೈ ಏರ್ಪೋರ್ಟ್‌ನಲ್ಲಿ ಸೆರೆಯಾದ ದೃಶ್ಯ

'ಚಾವಾ' ಅಲ್ಲದೇ ಸಂಜಯ್ ಲೀಲಾ ಬನ್ಸಾಲಿ ಅವರ 'ಲವ್ ಆ್ಯಂಡ್ ವಾರ್' ಸಿನಿಮಾದಲ್ಲೂ ವಿಕ್ಕಿ ಕೌಶಲ್​​ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ವಿಕ್ಕಿ ಕೌಶಲ್​ ಜೊತೆ ಆಲಿಯಾ ಭಟ್​ ಹಾಗೂ ರಣ್​ಬೀರ್​ ಕಪೂರ್​ ಮುಖ್ಯಭೂಮಿಕೆಯಲ್ಲಿರಲಿದ್ದಾರೆ.

ಇದನ್ನೂ ಓದಿ:'ಗಾಡ್ ಪ್ರಾಮಿಸ್' ನಿರ್ದೇಶಿಸಲಿದ್ದಾರೆ 'ಕಾಂತಾರ'ದ ಫಾರೆಸ್ಟ್ ಗಾರ್ಡ್

ಆನಂದ್ ತಿವಾರ್ ಅವರ ಹೆಸರಿಡದ ಚಿತ್ರವೂ ಬಿಡುಗಡೆಗೆ ಸಿದ್ಧವಾಗಿದೆ. ಕರಣ್ ಜೋಹರ್ ನಿರ್ಮಾಣದ ಈ ಚಿತ್ರದಲ್ಲಿ ವಿಕ್ಕಿ ಜೊತೆಗೆ ತೃಪ್ತಿ ಡಿಮ್ರಿ ನಟಿಸಿದ್ದಾರೆ. ಈ ಮೊದಲು ಫೆಬ್ರವರಿ 23 ರಂದು ಸಿನಿಮಾ ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ತಿಳಿಸಿತ್ತು. ಅದಾಗ್ಯೂ, ಸದ್ಯ ಸಿನಿಮಾದ ಬಗ್ಗೆ ಯಾವುದೇ ಸುದ್ದಿಯಿಲ್ಲ. ಚಿತ್ರ ಬಿಡುಗಡೆ ಮುಂದೂಡಿಕೆಯಾಗುವ ಸಾಧ್ಯತೆಗಳಿವೆ. ಅಧಿಕೃತ ಅಪ್​ಡೇಟ್ಸ್ ಕೊಡುವಂತೆ ಸಿನಿಪ್ರಿಯರು ಬೇಡಿಕೆ ಇಡುತ್ತಿದ್ದಾರೆ.

ABOUT THE AUTHOR

...view details