ಕರ್ನಾಟಕ

karnataka

ETV Bharat / entertainment

’ವೀರ ಮದಕರಿಯ ಕಿಚ್ಚನ ಮಗಳು‘ ಈಗ ನಾಯಕಿ: ಹೀರೋ ಯಾರು? ಸಿನಿಮಾ ಯಾವುದು ಗೊತ್ತಾ? - New heroine - NEW HEROINE

ನಿರ್ದೇಶಕ ಮಹೇಶ್ ಬಾಬು ಹೊಸ ಸಿನಿಮಾ ನಿರ್ಮಾಣ ಆರಂಭಿಸಿದ್ದು, ನಾಯಕಿಯಾಗಿ ನಟ ಸುದೀಪ್ ಅವರ ರೀಲ್​ ಮಗಳನ್ನು ಆಯ್ಕೆ ಮಾಡಿದ್ದಾರೆ.​

ಯುವ ನಟಿ ಜೆರುಶಾ
ಯುವ ನಟಿ ಜೆರುಶಾ

By ETV Bharat Karnataka Team

Published : Apr 22, 2024, 11:50 AM IST

ಕನ್ನಡ ಚಿತ್ರರಂಗದಲ್ಲಿ ಆಕಾಶ್, ಅರಸು, ಪರಮೇಶ ಪಾನ್​ವಾಲ ಹೀಗೆ ಸಾಕಷ್ಟು ಸ್ಟಾರ್ ಸಿನಿಮಾಗಳನ್ನು ಮಾಡಿ ಸಕ್ಸಸ್ ಕಂಡಿರುವ ನಿರ್ದೇಶಕ ಮಹೇಶ್ ಬಾಬು ಈಗ ಹೊಸ ನಾಯಕಿ ಜೊತೆಯಾಗಿ ಹೊಸ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ.

ಯುವ ನಟಿ ಜೆರುಶಾ

ಇತ್ತೀಚೆಗಷ್ಟೇ 'ಅಪರೂಪ' ಎಂಬ ಸಿನಿಮಾ ಮೂಲಕ ಯುವ ಪ್ರತಿಭೆಗಳನ್ನು ಸ್ಯಾಂಡಲ್​ವುಡ್​ಗೆ ಪರಿಚಯಿಸಿದ್ದ ಅವರು ಸ್ಮೈಲ್ ಗುರು ರಕ್ಷಿತ್​ನನ್ನು ನಾಯಕನಾಗಿ ಕನ್ನಡ ಸಿನಿಮಾ ಪ್ರೇಮಿಗಳ ಎದುರು ತರುತ್ತಿದ್ದಾರೆ. ಮಹೇಶ್ ಬಾಬು ಹಾಗೂ ರಕ್ಷಿತ್ ಹೊಸ ಸಿನಿಮಾ ಈಗಾಗಲೇ ಅನೌನ್ಸ್ ಆಗಿದೆ.

ಸ್ಮೈಲ್ ಗುರು ರಕ್ಷಿತ್​, ಯುವ ನಟಿ ಜೆರುಶಾ

ಇದರಲ್ಲಿ ಹೊಸ ಸಮಾಚಾರ ಏನೆಂದರೆ, ಈ ಚಿತ್ರದ ಮೂಲಕ ಮಹೇಶ್ ಮತ್ತೊಬ್ಬ ಯುವ ನಟಿ ಜೆರುಶಾರನ್ನು ತಮ್ಮ ಸಿನಿಮಾ ನಾಯಕಿಯಾಗಿ ಲಾಂಚ್ ಮಾಡುತ್ತಿದ್ದಾರೆ.

ಮೆರವಣಿಗೆ ಸಿನಿಮಾ ಮೂಲಕ ಐಂದ್ರಿತಾ ರೇ, ಚಿರು ಸಿನಿಮಾ ಮೂಲಕ ಕೃತಿ ಕರಬಂದ, ಅಜಿತ್ ಚಿತ್ರದ ಮೂಲಕ ನಿಕ್ಕಿ ಗಲ್ರಾನಿ, ಕ್ರೇಜಿ ಬಾಯ್ ಮೂಲಕ ಆಶಿಕಾ ರಂಗನಾಥ್ ಮತ್ತು ಅಪರೂಪ ಸಿನಿಮಾ ಮೂಲಕ ಹೃತಿಕಾ ಶ್ರೀನಿವಾಸ್​ ಹೀಗೆ ಹಲವಾರು ನಟಿಯರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿರುವ ನಿರ್ದೇಶಕ ಮಹೇಶ್ ಬಾಬು ಹೊಸ ಮುಖ ಜೆರುಶಾರನ್ನು ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪರಿಚಯಿಸುತ್ತಿದ್ದಾರೆ.

ಯುವ ನಟಿ ಜೆರುಶಾ

ಜೆರುಶಾಗೆ ಕ್ಯಾಮೆರಾ ಹೊಸದೇನಲ್ಲ. ಸೂಪರ್​ಹಿಟ್​ ಸುದೀಪ್ ಅಭಿನಯದ ವೀರ ಮದಕರಿ ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಜಾಹೀರಾತುಗಳು ಮತ್ತು ರಂಗಭೂಮಿ ಹಿನ್ನೆಲೆ ಇರುವ ಜೆರುಶಾ ಮಹೇಶ್ ಬಾಬು ನಿರ್ದೇಶನದ ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ.

ಇವರಿಗೆ ನಾಯಕನಾಗಿ ಸ್ಮೈಲ್ ಗುರು ರಕ್ಷಿತ್​ ಜೋಡಿಯಾಗಲಿದ್ದಾರೆ. ಜತೆಗೆ ಮಹೇಶ್ ಬಾಬು ಅವರು ಪ್ರಮುಖ ಪಾತ್ರವೊಂದಕ್ಕೆ ಮತ್ತೊಬ್ಬ ಪ್ರತಿಭಾವಂತ ನಟಿ ಆಯ್ಕೆಯಲ್ಲಿ ತೊಡಗಿದ್ದು, ಅದರ ವಿವರಗಳನ್ನು ಶೀಘ್ರದಲ್ಲೇ ಅನಾವರಣಗೊಳಿಸಲಿದ್ದಾರೆ. ಹಾಗೇ ಮಹೇಶ್ ಬಾಬು ಅವರ ಹೊಸ ಕಥೆಗೆ ಸದ್ಯ ಶೀರ್ಷಿಕೆ ಫೈನಲ್​ ಆಗಿಲ್ಲ. ಯೂತ್ಫುಲ್ ಎಂಟರ್ಟೈನರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಚೇತನ್ ಮತ್ತು ಅನುರಾಗ್ ಬಂಡವಾಳ ಹೂಡಲಿದ್ದಾರೆ.

ಚಿತ್ರಕ್ಕೆ ಅನೂಪ್ ಸೀಳಿನ್ ಅವರ ಸಂಗೀತ ಸಂಯೋಜನೆ ಮತ್ತು ಸತ್ಯ ಛಾಯಾಗ್ರಾಹಣ ಇರಲಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರಮುಖ ಸ್ಥಳಗಳಲ್ಲಿ ಮೇ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.

ಇದನ್ನೂ ಓದಿ:ಕಲ್ಕಿ 2898 AD ಟೀಸರ್ ಅನಾವರಣ: ಬಿಗ್ ಬಿ ಅಮಿತಾಬ್ ಬಚ್ಚನ್ ಅಶ್ವತ್ಥಾಮ ಲುಕ್​ಗೆ ಸಿನಿ ರಸಿಕರು ಫಿದಾ - Kalki 2898 AD Teaser

ABOUT THE AUTHOR

...view details