ಕರ್ನಾಟಕ

karnataka

ETV Bharat / entertainment

ದರ್ಶನ್ ಪ್ರಕರಣದ ಬಗ್ಗೆ ಜಾಣ್ಮೆಯ ಉತ್ತರ ಕೊಟ್ಟ ನಟ ರಮೇಶ್ ಅರವಿಂದ್: ವಿಡಿಯೋ ನೋಡಿ - Ramesh Aravind on Darshan - RAMESH ARAVIND ON DARSHAN

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ಬಗ್ಗೆ ನಟ ರಮೇಶ್​ ಅರವಿಂದ್​​ ಮಾತನಾಡಿದ್ದಾರೆ.

Actor Ramesh Aravind
ನಟ ರಮೇಶ್ ಅರವಿಂದ್ (ETV Bharat)

By ETV Bharat Karnataka Team

Published : Sep 10, 2024, 8:07 PM IST

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ಬಗ್ಗೆ ಕನ್ನಡದ ಖ್ಯಾತ ನಟ, ನಿರ್ದೇಶಕ, ನಿರೂಪಕ ರಮೇಶ್ ಅರವಿಂದ್ ಜಾಣ್ಮೆಯ ಉತ್ತರ ಕೊಟ್ಟಿದ್ದಾರೆ. ರಮೇಶ್ ಅರವಿಂದ್ 60ನೇ ಜನ್ಮದಿನ ಹಿನ್ನೆಲೆ ಭೈರಾದೇವಿ ಚಿತ್ರತಂಡ ನಟನಿಗೆ ಶುಭಾಶಯ ತಿಳಿಸಿದೆ. ಈ ಸಮಯದಲ್ಲಿ ಬನಶಂಕರಿಯ ನಿವಾಸದಲ್ಲಿ ಮಾತನಾಡಿರೋ ರಮೇಶ್ ಅರವಿಂದ್, ದರ್ಶನ್ ಅಂದಾಕ್ಷಣ ನನಗೆ ಸೂಪರ್ ಸ್ಟಾರ್ ದರ್ಶನ್, ವೀಕೆಂಡ್ ವಿಥ್ ರಮೇಶ್ ವೇದಿಕೆ ಮೇಲೆ ಕುಳಿತಿದ್ದ ದರ್ಶನ್ ನೆನಪಾಗುತ್ತಾರೆ ಎಂದು ತಿಳಿಸಿದರು.

ನಟ ರಮೇಶ್ ಅರವಿಂದ್ (ETV Bharat)

ನನಗೆ ಮೂವರು ದರ್ಶನ್ ಕಾಣುತ್ತಾರೆ. ಓರ್ವರು ಅಪಾರ ಮನರಂಜನೆ ಕೊಟ್ಟವರು. ಸೂಪರ್​ ಸ್ಟಾರ್​​. ಸೂಪರ್​ ಹಿಟ್​ ಸಿನಿಮಾಗಳನ್ನು ಕೊಟ್ಟವರು. ಇನ್ನೂ ಇವತ್ತಿನ ದರ್ಶನ್ ಓರ್ವರು. ಹೌದು, ಘಟನೆಯಿಂದ ಎಲ್ಲರಿಗೂ ನೋವಾಗಿದೆ. ಒಂದು ದೊಡ್ಡ ತಪ್ಪಾಗಿದೆ. ತಪ್ಪು ಯಾರು ಮಾಡಿದ್ದಾರೋ ಆ ವ್ಯಕ್ತಿಗೆ ಶಿಕ್ಷೆ ಆಗಲೇಬೇಕು. ಕಾನೂನು ಪ್ರಕಾರ ಎಲ್ಲವೂ ನಡೆಯಲಿದೆ. ಎಲ್ಲದಕ್ಕಿನ್ನ ಹೆಚ್ಚಾಗಿ ಮತ್ತೋರ್ವ ದರ್ಶನ್​​, ನಾಳೆಯ ದರ್ಶನ್ ಅವರನ್ನು ನಾವು ನೋಡಬೇಕಿದೆ. ಹೊರಗೆ ಬಂದ ಬಳಿಕ ಹೊಸ ದರ್ಶನ್ ಅವರನ್ನು ನೋಡುತ್ತೇವೆ​​​‌. ಅದು ಬಹಳ ಇಂಟ್ರೆಸ್ಟಿಂಗ್​ ಆಗಿರಲಿದೆ. ನೋ ಯೂ ಟರ್ನ್ ಅನ್ನೋ ಬೋರ್ಡ್​​ ಇರೋದು ರಸ್ತೆಯಲ್ಲಿ ಮಾತ್ರ. ಬದುಕಲ್ಲಿ ಅಲ್ಲ. ಯಾವಾಗ ಬೇಕಾದ್ರೂ ಯೂ ಟರ್ನ್ ಮಾಡಿ ಗೆಲ್ಲಬಹುದು. ಹಳೆಯ ಸೂಪರ್ ಸ್ಟಾರ್ ದರ್ಶನ್ ಆಗಿ ನೋಡಬೇಕು ಅನ್ನೋದು ನಮ್ಮ ಆಸೆ, ಕಾದು ನೋಡೋಣ ಎಂದು ಜಾಣ್ಮೆಯ ಉತ್ತರಗಳನ್ನು ಕೊಟ್ಟರು.

ಇದನ್ನೂ ಓದಿ:'ರೇಣುಕಾಸ್ವಾಮಿಯಿಂದ ಯಾವುದೇ ಮೆಸೇಜ್ ಬಂದಿಲ್ಲ': ರಾಗಿಣಿ ದ್ವಿವೇದಿ, ಶುಭಾ ಪೂಂಜಾ ಸ್ಪಷ್ಟನೆ - Renukaswamy Messages to Actress

ಇನ್ನು ರಮೇಶ್ ಅರವಿಂದ್ ದೈಜಿ ಎಂಬ ಥ್ರಿಲ್ಲರ್ - ಹಾರರ್ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಅವರ 106ನೇ ಚಿತ್ರವಾಗಿದ್ದು, ಈ ಹಿಂದೆ ಶಿವಾಜಿ ಸುರತ್ಕಲ್ 1 ಮತ್ತು 2 ಸಿನಿಮಾಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ಆಕಾಶ್ ಶ್ರೀವತ್ಸ ಅವರು ಮೂರನೇ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ:ರಮೇಶ್​ ಅರವಿಂದ್​​​ಗೆ ವಯಸ್ಸು 60 ಅಂದ್ರೆ ನಂಬ್ತೀರಾ?: ಅರವತ್ತರಲ್ಲೂ 30ರ ಚಾರ್ಮ್​ - ಹ್ಯಾಂಡ್ಸಂ ಲುಕ್​​ಗೆ ಫ್ಯಾನ್​ ಫಿದಾ - Ramesh Aravind

ABOUT THE AUTHOR

...view details