ಸಿದ್ದಗಂಗಾ ಮಠಕ್ಕೆ ಧ್ರುವ ಸರ್ಜಾ ಭೇಟಿ (ETV Bharat) ತುಮಕೂರು: ಮುಂಬರುವ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿರುವ ನಟ ಧ್ರುವ ಸರ್ಜಾ ಅವರು ಇಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದಾರೆ. ಮುಂಬೈಗೆ ತೆರಳುವ ಮಾರ್ಗಮಧ್ಯೆ ಮಠಕ್ಕೆ ಆಗಮಿಸಿದ ಅವರು ಸಿದ್ದಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಇದಕ್ಕೂ ಮುನ್ನ, ಇದೇ ವೇಳೆ, ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದರು.
'ಮಾರ್ಟಿನ್' ಧ್ರುವ ಸರ್ಜಾ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಮುಂಬೈನಲ್ಲಿ ಟ್ರೇಲರ್ ರಿಲೀಸ್ ಆಗಲಿದೆ.
ನಟನ ನೋಡಲು ಅಭಿಮಾನಿಗಳ ದಂಡು:ನಟಮಠಕ್ಕೆ ಆಗಮಿಸುತ್ತಿರುವ ವಿಷಯ ತಿಳಿದ ಅಪಾರ ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದರು. ಮಠದ ಆವರಣದಲ್ಲಿ ಜಮಾಯಿಸಿದ ಹೆಚ್ಚಿನ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಂದಾದರು. ಈ ವೇಳೆ ನೂಕುನುಗ್ಗಲು ಕೂಡಾ ಉಂಟಾಯಿತು.
ಸ್ಟಾರ್ ನಟರ ಮುಂಬರುವ ಸಿನಿಮಾಗಳು: ಕೆಜಿಎಫ್, ವಿಕ್ರಾಂತ್ ರೋಣ, ಕಾಂತಾರದಂತಹ ಹಿಟ್ ಚಿತ್ರಗಳ ಮೂಲಕ ಭಾರತೀಯ ಚಿತ್ರರಂಗವನ್ನೇ ತನ್ನತ್ತ ಸೆಳೆದಿದ್ದ ಸ್ಯಾಂಡಲ್ವುಡ್ನಲ್ಲಿ ಕಳೆದ ಕೆಲ ತಿಂಗಳಿನಿಂದ ಯಾವುದೇ ಸ್ಟಾರ್ ಸಿನಿಮಾಗಳು ಬಿಡುಗಡೆ ಆಗಿಲ್ಲ. ಚಿತ್ರಮಂದಿರಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆಯೂ ಇಳಿಕೆ ಆಗುತ್ತಿದೆ. ಹೀಗಾಗಿ, ಸ್ಯಾಂಡಲ್ವುಡ್ ಬೆಳೆಯಬೇಕಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, 'ಮಾರ್ಟಿನ್' ಈ ಸಾಲಿನಲ್ಲಿ ತೆರೆಕಾಣಲಿರುವ ಸ್ಟಾರ್ ಸಿನಿಮಾ. ಎ.ಪಿ.ಅರ್ಜುನ್ ಆ್ಯಕ್ಷನ್ ಕಟ್ ಹೇಳಿರುವ 'ಮಾರ್ಟಿನ್' ಕನ್ನಡ ಮಾತ್ರವಲ್ಲದೇ ಬಹುಭಾಷೆಗಳಲ್ಲೂ ಸದ್ದು ಮಾಡಿದೆ. ಆಗಸ್ಟ್ 5ರಂದು ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಚಿತ್ರತಂಡ ಪ್ರಮೋಷನ್ ಮಾಡಲಿದೆ. ಸೋಮವಾರ ಚಿತ್ರದ ಟ್ರೇಲರ್ ಮುಂಬೈನಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ:ಕನ್ನಡದ ಹಾಡನ್ನು ಕನ್ನಡ ಚಿತ್ರಗಳಲ್ಲಿ ಬಳಸಬಾರದೇ?: ರಕ್ಷಿತ್ ಶೆಟ್ಟಿ - Rakshit Shetty
ಈ ಚಿತ್ರದಲ್ಲಿ ವೈಭವಿ ಶಾಂಡಿಲ್ಯ, ಅನ್ವೇಶಿ ಜೈನ್, ನಿಕಿತನ್ ಧೀರ್ ಸೇರಿದಂತೆ ಹಲವರು ನಟಿಸಿದ್ದಾರೆ. ಮಣಿಶರ್ಮಾ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ರವಿ ಬಸ್ರೂರ್ ಕೂಡಾ ಚಿತ್ರದ ಭಾಗವಾಗಿದ್ದಾರೆ. ಸತ್ಯ ಹೆಗಡೆ ಕ್ಯಾಮರಾ ಕೈಚಳಕ, ಮಹೇಶ್‌ರೆಡ್ಡಿ ಸಂಕಲನವಿರುವ ಈ ಸಿನಿಮಾಗೆ ಉದಯ್ ಮೆಹ್ತಾ ಬಂಡವಾಳ ಹೂಡಿದ್ದಾರೆ. ಅಕ್ಟೋಬರ್ 11ಕ್ಕೆ 'ಮಾರ್ಟಿನ್' ವಿಶ್ವಾದ್ಯಂತ ಬಿಡುಗಡೆ ಆಗಲಿದೆ.
ಇದನ್ನೂ ಓದಿ:ಮುಂಬೈನಲ್ಲಿ ಆ.5ರಂದು 'ಮಾರ್ಟಿನ್' ಸಿನಿಮಾದ ಟ್ರೈಲರ್ ರಿಲೀಸ್: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೇಳಿದ್ದೇನು? - Martin Movie update