ಕನ್ನಡ ಚಿತ್ರರಂಗದ ಯುವ ಸಾಮ್ರಾಟ್ ಆಗಿ ಬೆಳ್ಳಿ ತೆರೆ ಮೇಲೆ ವಿಜೃಂಭಿಸಿದ ನಟ ಚಿರಂಜೀವಿ ಸರ್ಜಾ ಇಹಲೋಕ ತ್ಯಜಿಸಿ ಇಂದಿಗೆ ನಾಲ್ಕು ವರ್ಷ. ಇಂದು ಪುಣ್ಯಸ್ಮರಣೆ ನಿಮಿತ್ತ ಚಿರು ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಸಿದರು.
ಕನಕಪುರ ರಸ್ತೆಯ ನೆಲಗುಳಿಯ ಧ್ರುವ ಫಾರ್ಮ್ ಹೌಸ್ನಲ್ಲಿರುವ ಸಮಾಧಿಗೆ ಪತ್ನಿ ಮೇಘನಾ ರಾಜ್, ಸಹೋದರ ಧ್ರುವ ಸರ್ಜಾ, ಪತ್ನಿ ಪ್ರೇರಣಾ, ಚಿರು ಪುತ್ರ ರಾಯನ್ ಸರ್ಜಾ, ಸುಂದರ ರಾಜ್, ಪ್ರಮೀಳಾ ಜೋಷಾಯ್, ಚಿರು ತಂದೆ ವಿಜಯ್, ತಾಯಿ ಅಮ್ಮಾಜಿ ಸೇರಿದಂತೆ ಮೇಘನಾ ರಾಜ್ ಹಾಗೂ ಧ್ರುವ ಸರ್ಜಾ ಕುಟುಂಬದವರು ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಚಿರು ಪತ್ನಿ ಮೇಘನಾ ರಾಜ್ ಭಾವುಕರಾದರು.