ಸೋಷಿಯಲ್ ಮೀಡಿಯಾ ಓಪನ್ ಮಾಡಿದರೆ ಸಾಕು ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಹಾಗೂ ನಟ ಅಭಿಷೇಕ್ ಬಚ್ಚನ್ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ಪೋಸ್ಟರ್ಗಳು, ವದಂತಿಗಳು ಮೊಬೈಲ್ ಸ್ಕ್ರೋಲ್ ಮಾಡಿದಷ್ಟು ಬರುತ್ತಿದೆ. ಸ್ಟಾರ್ ನಟ-ನಟಿಯರು ಬೇರೆಯಾಗುವುದು ವಿಶೇಷವೇನಲ್ಲ. ಆದರೆ 16 ವರ್ಷಗಳಿಗೂ ಹೆಚ್ಚು ಕಾಲ ದಾಂಪತ್ಯ ಜೀವನ ನಡೆಸಿ, ಎದೆಯೆತ್ತರಕ್ಕೆ ಬೆಳೆದ ಮಗಳಿದ್ದಾಗ ಅಭಿಷೇಕ್ ಬಚ್ಚನ್ ದಂಪತಿಗೆ ಡಿವೋರ್ಸ್ ಯಾಕೆ? ಎಂಬ ಪ್ರಶ್ನೆ ನೆಟ್ಟಿಗರದ್ದು. ವಿಚ್ಛೇದನ ಬೇಕಾ-ಬೇಡ್ವಾ ಅದು ಅವರವರ ವೈಯಕ್ತಿಕ ವಿಚಾರ. ಒಂದು ವೇಳೆ ವದಂತಿಯಂತೆ ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ಡಿವೋರ್ಸ್ ಪಡೆದದ್ದೇ ಆದರೆ ಇವರೂ ಕೂಡ ಟ್ರೆಂಡ್ನಲ್ಲಿರುವ ಗ್ರೇ ಡಿವೋರ್ಸ್ಕ್ಯಾಟಗರಿಗೆ ಸೇರಲಿದ್ದಾರೆ.
ಏನಿದು ಗ್ರೇ ಡಿವೋರ್ಸ್:? ಇದು ನಮ್ಮ ದೇಶಕ್ಕೆ ಹೊಸ ಪದ. ತಲೆ ಕೂದಲು ಗ್ರೇ ಬಣ್ಣಕ್ಕೆ ತಿರುಗುವ ಸಂದರ್ಭದಲ್ಲಿ ದಂಪತಿಗಳು ವಿಚ್ಛೇದನ ಪಡೆದುಕೊಳ್ಳುವುದಕ್ಕೆ ಗ್ರೇ ಡಿವೋರ್ಸ್ ಎನ್ನುತ್ತಾರೆ. ಅಂದರೆ 10-30 ವರ್ಷ ಸಂಸಾರ ನಡೆಸಿ ಬಳಿಕ ಬೇರೆಯಾಗಲು ಮುಂದಾಗುವ ಜೋಡಿಗಳು. ಇತ್ತೀಚೆಗೆ ಗ್ರೇ ವಿಚ್ಛೇದನವು ಭಾರತದಲ್ಲಿ ಬೇರೂರಲು ಪ್ರಾರಂಭಿಸಿದೆ.
ಈ ಬಗ್ಗೆ ವೇದ ಪುನರ್ವಸತಿ ಮತ್ತು ಸ್ವಾಸ್ಥ್ಯದ ಹಿರಿಯ ಮನಶಾಸ್ತ್ರಜ್ಞ ಆಶಿ ತೋಮರ್ ವಿವರಿಸಿದ್ದಾರೆ. "ಭಾರತದಲ್ಲಿ ವಯಸ್ಸಾದ ದಂಪತಿಗಳಲ್ಲಿ ವಿಚ್ಛೇದನಗಳ ಹೆಚ್ಚಳವು ವಿಕಸನಗೊಳ್ಳುತ್ತಿರುವ ಸಮಾಜ ಮತ್ತು ಕೆಲವು ಸಾಂಸ್ಕೃತಿಕ ವಿಚಾರಧಾರೆಗಳಿಂದಾಗಿರಬಹುದು. ಇಷ್ಟಪಟ್ಟೇ ಮದುವೆಯಾದರೂ ಬಳಿಕ ಸ್ವತಂತ್ರವಾಗಿ ಬದುಕಲು ಇಚ್ಛಿಸಿ ಗಂಡ-ಹೆಂಡತಿ ಬೇರೆಯಾಗುತ್ತಾರೆ. ಈಗಿನ ಮಹಿಳೆಯರು ಆರ್ಥಿಕವಾಗಿ ಸದೃಢ ಮತ್ತು ಸ್ವತಂತ್ರರಾಗಿದ್ದಾರೆ. ಹೀಗಾಗಿ ವಿವಾಹ ಸಂಬಂಧಗಳನ್ನು ತೊರೆದು ಬರುತ್ತಾರೆ. ಇದು ಹಿಂದೆ ಕಷ್ಟಕರವಾಗಿತ್ತು, "ಎಂದು ತೋಮರ್ ಹೇಳುತ್ತಾರೆ.
ಇದುವರೆಗೆ ಗ್ರೇ ಡಿವೋರ್ಸ್ ಪಡೆದವರು ಯಾರ್ಯಾರು: