ಬೆಂಗಳೂರು: ರಾಮನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಜಿಲ್ಲೆ ಮತ್ತು ತಾಲೂಕು ಕಾನೂನು ಸೇವಾ ಸಮಿತಿಗಳಲ್ಲಿ ಅರೆಕಾಲಿಕ ಕಾನೂನು ಸ್ವಯಂ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಧಿಸೂಚನೆ (ರಾಮನಗರದ ಕಾನೂನು ಸೇವಾ ಪ್ರಾಧಿಕಾರ) ಹುದ್ದೆ ವಿವರ: ಒಟ್ಟು 175 ಹುದ್ದೆಗಳು
- ರಾಮನಗರ- 100
- ಚನ್ನಪಟ್ಟಣ - 25
- ಕನಕಪುರ - 25
- ಮಾಗಡಿ - 25
ವಿದ್ಯಾರ್ಹತೆ: ಅಭ್ಯರ್ಥಿಗಳು ಕನಿಷ್ಠ ಎಸ್ಎಸ್ಎಲ್ಸಿ ಉತ್ತೀರ್ಣರಾಗಿರಬೇಕು. ವಸ್ತು ಸ್ಥಿತಿಯ ಮತ್ತು ಪರಿಸ್ಥಿತಿಯ ವಿಷಯಗಳನ್ನು ಉತ್ತಮವಾಗಿ ಅರ್ಥ ಮಾಡಿಕೊಳ್ಳುವವರಾಗಿರಬೇಕು. ಈ ಹುದ್ದೆಗೆ ನಿವೃತ್ತ ಶಿಕ್ಷಕರು, ನಿವೃತ್ತ ಸರ್ಕಾರಿ ನೌಕರರು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತರು, ಕಾನೂನು ವಿದ್ಯಾರ್ಥಿಗಳು, ರಾಜಕೀಯವಲ್ಲದ ಸಂಘಗಳ ಸದಸ್ಯರು. ಮಹಿಳಾ ಸ್ವಯಂ ಸಂಘಗಳ ಪ್ರತಿನಿಧಿಗಳು ಅರ್ಜಿ ಸಲ್ಲಿಸಬಹುದು
ಈ ಹುದ್ದೆಗಳನ್ನು ಮೂರು ವರ್ಷದ ಗುತ್ತಿಗೆ ಅವಧಿಗೆ ಗೌರವಧನದ ಆಧಾರದ ಮೇಲೆ ನೇಮಕಾತಿ ನಡೆಸಲಾಗುವುದು.
ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆಫ್ಲೈನ್ ಮೂಲಕ ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದು. ನಿಗದಿತ ಅರ್ಜಿ ಸಲ್ಲಿಕೆಯೊಂದಿಗೆ ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ, ಅಗತ್ಯ ವಿದ್ಯಾರ್ಹತೆ ದಾಖಲೆಯೊಂದಿಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಅರ್ಜಿ ಸಲ್ಲಿಸುವ ವಿಳಾಸ: ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಲಯದ ಆವರಣ, ರಾಮನಗರ- 562159. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕಡೇಯ ದಿನಾಂಕ ಜುಲೈ 20 ಆಗಿದೆ. ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಕುರಿತು ramanagara.dcourts.gov.in ಭೇಟಿ ನೀಡಿ.
ಧಾರವಾಡ ಕೃಷಿ ವಿವಿಯಲ್ಲಿ ನೇಮಕಾತಿ: ಇಲ್ಲಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ವಾಕ್ ಇನ್ ಇಂಟರ್ವ್ಯೂ ನಡೆಸಲಾಗುತ್ತದೆ. ವಿಜಯಪುರದಲ್ಲಿ ನೇಮಕಾತಿ ನಡೆಯಲಿದೆ. ಅಭ್ಯರ್ಥಿಗಳು ಎಂಎಸ್ಸಿ (ಕೃಷಿ) ಪದವಿ ಪಡೆದಿರಬೇಕು. ಮಾಸಿಕ 40 ರಿಂದ 45 ಸಾವಿರ ರೂ ವೇತನ ನಿಗದಿಸಲಾಗಿದೆ.
ನೇರ ಸಂದರ್ಶನವನ್ನು ಜುಲೈ 18ರಂದು ಬೆಳಗ್ಗೆ 11ಗಂಟೆಗೆ ವಿಜಯಪುರದಲ್ಲಿನ ಈ ಕೆಳಗಿನ ವಿಳಾಸದಲ್ಲಿ ನಡೆಸಲಾಗುತ್ತದೆ. ಸಂದರ್ಶನ ಕೊಠಡಿ, ಡೀನ್ (ಕೃಷಿ) ಕೃಷಿ ವಿವಿ, ವಿಜಯಪುರ. ಈ ಕುರಿತು ಹೆಚ್ಚಿನ ಮಾಹಿತಿಗೆ uasd.edu ಭೇಟಿ ನೀಡಿ.
ಇದನ್ನೂ ಓದಿ: ಇಂಡಿಯನ್ ಬ್ಯಾಂಕ್: 1,500 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ