ಕರ್ನಾಟಕ

karnataka

ETV Bharat / education-and-career

ಅಂಗವೈಕಲ್ಯ ಮೆಟ್ಟಿನಿಂತು ಸಾಧನೆ; ಜೆಇಇ ಮೇನ್ಸ್​ನಲ್ಲಿ ವಿಕಲಚೇತನ ವರ್ಗದಲ್ಲಿ ದೇಶಕ್ಕೆ ಹಿಮನೇಶ ಟಾಪರ್​ - TOPPER SRISAI HIMINESH

ಸಾಧನೆಗೆ ಯಾವುದೇ ಸಮಸ್ಯೆಗಳು ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಸಾಕ್ಷಿಯಾಗಿ ನಿಂತಿದ್ದಾರೆ ಶ್ರೀಸಾಯಿ ಹಿಮನೇಶ್.

practiced-12-hours-daily-to-achieve-this-jee-main-pwbd-topper-srisai-himinesh
ಶ್ರೀಸಾಯಿ ಹಿಮನೇಶ್​ (ಈಟಿವಿ ಭಾರತ್​)

By ETV Bharat Karnataka Team

Published : Feb 24, 2025, 1:11 PM IST

ಗೋದಾವರಿ (ಆಂಧ್ರಪ್ರದೇಶ):ಯಶಸ್ಸಿನ ಹಿಂದೆ ಕಠಿಣ ಶ್ರಮ, ದೃಢ ಮನಸ್ಸು ಬೇಕು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ಶ್ರೀಸಾಯಿ ಹಿಮನೇಶ. ಜೆಇಇ ಮೇನ್ಸ್​ ಬಿಆರ್ಕ್​ ಮತ್ತು ಬಿಪ್ಲಾನಿಂಗ್​ನಲ್ಲಿ ವಿಕಲಚೇತನ ವರ್ಗದಲ್ಲಿ ದೇಶಕ್ಕೆ ಟಾಪರ್​ (ಶೇ99.53) ಆಗಿ ಅವರು ಹೊರ ಹೊಮ್ಮಿದ್ದಾರೆ. ತಮ್ಮ ಈ ಯಶಸ್ಸಿಗೆ ಅವಿರತ ಕಠಿಣ ಶ್ರಮ ಹಾಗೂ ನಿತ್ಯ 12 ಗಂಟೆಗಳ ಅಭ್ಯಾಸವೇ ಕಾರಣ ಎಂದಿದ್ದಾರೆ ಶ್ರೀ ಸಾಯಿ. ಪೂರ್ವ ಗೋಧಾವರಿಯ ರಾಜಮಹೇಂದ್ರ ವರ್ಮ ಎಂಬ ಊರಿನ ಇವರ ಸಾಧನೆಗೆ ಇಡೀ ಕುಟುಂಬ ಮತ್ತು ಸಮುದಾಯ ಸಂಭ್ರಮಪಟ್ಟಿದೆ.

ಸಾಧನೆಯ ಖುಷಿ ಹಂಚಿಕೊಂಡ ಹಿಮನೇಶ್:ನಾನು ರಾಷ್ಟ್ರೀಯ ಮಟ್ಟದಲ್ಲಿ ಅತಿ ಹೆಚ್ಚಿನ ಅಂಕ ಗಳಿಸಿರುವುದಕ್ಕೆ ಸಂತಸಗೊಂಡಿದ್ದೇನೆ. ಇದು ಕೇವಲ ನನ್ನ ಸಾಧನೆಯಲ್ಲ. ಇದು ನನ್ನ ತಂದೆಯ ಸಮರ್ಪಣೆಯ ಫಲಿತಾಂಶ. ಅವರು ನನ್ನ ಮತ್ತು ನನ್ನ ತಮ್ಮನಿಗೆ ಶಿಕ್ಷಣ ಕೊಡಿಸಲು ನಿರಂತರವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಈಟಿವಿ ಭಾರತದೊಂದಿಗೆ ತಮ್ಮ ಖುಷಿ ಹಂಚಿಕೊಂಡರು.

ರಾಜಮಹೇಂದ್ರವರ್ಮದಲ್ಲಿನ ಶ್ರೀ ಶಿರಡಿ ಸಾಯಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಯಾಗಿರುವ ಹಿಮನೇಶ ಕನಸು ದೇಶದ ಪ್ರಮುಖ ಐಐಟಿಗಳಲ್ಲಿ ಪ್ರವೇಶ ಪಡೆಯುವುದಾಗಿದೆ. ಕೃತಕ ಬುದ್ಧಿಮತ್ತೆಯಲ್ಲಿ ಹೊಸ ಅವಿಷ್ಕಾರ ಮಾಡಬೇಕು ಎಂಬುದು ದೀರ್ಘಕಾಲದ ಗುರಿಯಾಗಿದೆ ಎಂದು ತಮ್ಮ ಮನದಾಸೆ ಬಿಚ್ಚಿಟ್ಟರು.

ತಂದೆ ಚಾಕೋಲೆಟ್​​​ ಹೋಲ್​​ಸೇಲ್ ಸಣ್ಣ​​​​ ಉದ್ಯಮಿ:ಹಿಮನೇಶ್​​ ಅವರ ತಂದೆ ಚಾಕೋಲೆಟ್​ ಹೋಲ್​ಸೇಲ್​ ಉದ್ಯಮ ಹೊಂದಿದ್ದರೆ, ಅವರ ತಾಯಿ ಗೃಹಿಣಿ. ಹಿಮನೇಶ್​ ಮತ್ತು ಆತನಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂಬುದಕ್ಕೆ ಪೋಷಕರು ಸದಾ ಒತ್ತು ನೀಡಿದ್ದಾರೆ. ಅದರಂತೆ ಸಹೋದರರು ಕೂಡ ನಿರಂತರವಾಗಿ ಓದಿನಲ್ಲಿ ಮುಂದಿದ್ದು, ತರಗತಿಗಳಲ್ಲಿ ಟಾಪ್​ ಕ್ಲಾಸ್​ನಲ್ಲಿ ಉತ್ತೀರ್ಣರಾಗುತ್ತಿದ್ದಾರೆ.

ಹಿಮನೇಶ್​ ಸಾಧನೆಯಿಂದ ಕುಟುಂಬ ವರ್ಗದಲ್ಲಿ ಸಂತಸದ ವಾತಾವರಣ:ಇದೀಗ ಹಿಮನೇಶ್​ ಜೆಇಇ ಮೇನ್ಸ್​ನಲ್ಲಿ ಟಾಪರ್​ ಆಗಿ ಹೊರ ಹೊಮ್ಮಿರುವ ಸುದ್ದಿ ಕೇಳುತ್ತಿದ್ದಂತೆ ಕುಟುಂಬ ಸದಸ್ಯರು, ಸ್ನೇಹಿತರು, ನೆರೆ ಹೊರೆಯವರು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರ ಕುಟುಂಬದ ಸ್ನೇಹಿತರು, ಇದು ನಮ್ಮೆಲ್ಲರಿಗೂ ಹೆಮ್ಮಯ ಸಂಗತಿ. ಭವಿಷ್ಯದ ಬಗ್ಗೆ ಸ್ಪಷ್ಟ ದೃಷ್ಟಿ ಮತ್ತು ಸಮರ್ಪಣೆಯಿಂದ ಶ್ರೀ ಸಾಯಿ ಹಿಮನೇಶ್​​ ಅನೇಕರಿಗೆ ಸ್ಪೂರ್ತಿಯಾಗಿದ್ದಾರೆ. ಎಲ್ಲಾ ಕಷ್ಟ ತೊಂದರೆಗಳ ಹೊರತಾಗಿ ತಮ್ಮ ಶಿಕ್ಷಣದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯುವುದು ಹೇಗೆ? ಕೈಬರಹ ಸುಧಾರಣೆಗೆ ತಜ್ಞರ ಸಲಹೆಗಳು

ಇದನ್ನೂ ಓದಿ: ವಿದೇಶದಲ್ಲಿ ಉನ್ನತ ಶಿಕ್ಷಣದ ಕನಸಿಗೆ ಇದು ಸಕಾಲ: ಅಮೆರಿಕದ ಕಠಿಣ ನೀತಿಯ ನಡುವೆ ಗಮನಿಸಬೇಕಾದ ಅಂಶಗಳಿವು!

ABOUT THE AUTHOR

...view details