ಕರ್ನಾಟಕ

karnataka

ETV Bharat / education-and-career

PGCIL ನೇಮಕಾತಿ: 1,031 ಅಪ್ರೆಂಟಿಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನ - PGCIL Apprentice Recruitment

ಈ ಪೈಕಿ ಕರ್ನಾಟಕಕ್ಕೆ 101 ಹುದ್ದೆಗಳನ್ನು ಮೀಸಲಿರಿಸಲಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ರಾಜ್ಯದ ವಿವಿಧ ಸಂಸ್ಥೆಗಳಲ್ಲಿ ತರಬೇತಿ ನಡೆಯಲಿದೆ.

Power Grid Corporation of India Limited Apprentice Recruitment
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Aug 22, 2024, 4:15 PM IST

ಬೆಂಗಳೂರು: ಪವರ್​ ಗ್ರೀಡ್​ ಕಾರ್ಪೊರೇಷನ್​ ಆಫ್​ ಇಂಡಿಯಾ ಲಿಮಿಟೆಡ್​​ (ಪಿಜಿಸಿಐಎಲ್​) ಒಂದು ವರ್ಷದ ಅಪ್ರೆಂಟಿಸ್​ ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 1,031 ಹುದ್ದೆಗಳಿವೆ. ಇದರಲ್ಲಿ ಕರ್ನಾಟಕಕ್ಕೆ 101 ಹುದ್ದೆಗಳನ್ನು ಮೀಸಲಿಡಲಾಗಿದೆ.

ಹುದ್ದೆಗಳ ವಿವರ:

  • ಐಟಿಐ (ಅಪ್ರೆಂಟಿಸ್​)
  • ಡಿಪ್ಲೊಮಾ (ಎಲೆಕ್ಟ್ರಿಕಲ್​)
  • ಗ್ರಾಜ್ಯುಯೆಟ್​ (ಸಿವಿಲ್​)
  • ಗ್ರಾಜ್ಯುಯೆಟ್​ (ಎಲೆಕ್ಟ್ರಿಕಲ್​)
  • ಗ್ರಾಜ್ಯುಯೆಟ್​ (ಕಂಪ್ಯೂಟರ್​ ಸೈನ್ಸ್​)
  • ಸಿಎಸ್​ಆರ್​ ಎಕ್ಸಿಕ್ಯೂಟಿವ್​
  • ಲಾ ಎಕ್ಸಿಕ್ಯೂಟಿವ್​
  • ಪಿಆರ್​ ಅಸಿಸ್ಟೆಂಟ್​
  • ರಾಜಭಾಷಾ ಅಸಿಸ್ಟೆಂಟ್​
  • ಎಚ್​ಆರ್​ ಎಕ್ಸ್‌ಕ್ಯೂಟಿವ್​

ವಿದ್ಯಾರ್ಹತೆ: ಹುದ್ದೆಗೆ ಅನುಗುಣವಾಗಿ ಐಟಿಐ, ಬಿಇ ಪದವಿ ಪೂರ್ಣಗೊಳಿಸಿರಬೇಕು.

ಕರ್ನಾಟಕದಲ್ಲಿ ಎಲ್ಲೆಲ್ಲಿ ತರಬೇತಿ?: ಬಿಡದಿ, ಹಾಸನ, ಹಿರಿಯೂರು, ಕೋಲಾರ ಎಚ್​ವಿಡಿಸಿ, ಮೈಸೂರು, ಪಾವಗಡ, ಸೋಮನಹಳ್ಳಿ, ಯಲಹಂಕ ಮತ್ತು ಬೆಂಗಳೂರು.

ಆಯ್ಕೆ ಪ್ರಕ್ರಿಯೆ: ಮೆರಿಟ್​ ಮೂಲಕ ಆಯ್ಕೆ.

ಅರ್ಜಿ ಸಲ್ಲಿಕೆ: ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಹುದು. ಅರ್ಜಿ ಶುಲ್ಕವಿಲ್ಲ.

ಅಧಿಸೂಚನೆ (PGCIL)

ಅಭ್ಯರ್ಥಿಗಳು ಮೊದಲಿಗೆ ಕೇಂದ್ರ ಸರ್ಕಾರದ ಎನ್​ಎಪಿಎಸ್ apprenticeshipinida.gov.in​ ಮತ್ತು ಎನ್​ಟಿಎಸ್​ಎ nats.education.gov.in ಇಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಇದಾದ ಬಳಿಕ powergrid.in ಅಧಿಕೃತ ಜಾಲತಾಣದಲ್ಲಿ ಉದ್ಯೋಗ ವಿಭಾಗದಲ್ಲಿ ಅರ್ಜಿ ಸಲ್ಲಿಸಬೇಕು.

ಆಗಸ್ಟ್​ 20ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ. ಸೆಪ್ಟೆಂಬರ್​ 8 ಕಡೇಯ ದಿನಾಂಕ. ಈ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆpowergridindia.com ಭೇಟಿ ನೀಡಿ.

ಇದನ್ನೂ ಓದಿ: ಬಾಗಲಕೋಟೆ: ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗೆ ಅರ್ಜಿ ಆಹ್ವಾನ

ABOUT THE AUTHOR

...view details