ಬೆಂಗಳೂರು:ಸ್ನಾತಕೋತ್ತರ ಆಯುಷ್-2024 ಕೋರ್ಸ್ಗಳ ಪ್ರವೇಶಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಅಕ್ಟೋಬರ್ 28ರಿಂದ 30ರವರೆಗೆ ದಾಖಲೆಗಳ ಪರಿಶೀಲನೆ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ತಿಳಿಸಿದೆ.
ಎಐಎಪಿಜಿಇಟಿ-24 ಅರ್ಹತೆಗೆ ಒಳಪಟ್ಟು, ಪ್ರಾಧಿಕಾರಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿರುವ ಅಭ್ಯರ್ಥಿಗಳು ಪರಿಶೀಲನೆಗಾಗಿ ಕೆಇಎ ಕಚೇರಿಗೆ ಖುದ್ದು ಭೇಟಿ ನೀಡಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅ.28ರಂದು ಬೆಳಗ್ಗೆ 10ರಿಂದ 12ರವರೆಗೆ 1ನೇ ರ್ಯಾಂಕ್ನಿಂದ ಕೊನೆಯ ರ‍್ಯಾಂಕ್ ಪಡೆದ ಬಿಹೆಚ್ಎಂಎಸ್, ಬಿಯುಎಂಎಸ್ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆಗೆ ಸಮಯ ನಿಗದಿ ಮಾಡಲಾಗಿದೆ. ಅ.28ರ ಮಧ್ಯಾಹ್ನ 12:30ರಿಂದ 3ರವರೆಗೆ 1ರಿಂದ 4,000 ರ‍್ಯಾಂಕ್ ಪಡೆದ ಬಿಎಎಂಎಸ್ ಅಭ್ಯರ್ಥಿಗಳಿಗೆ ಹಾಗೂ ಅದೇ ದಿನ ಮಧ್ಯಾಹ್ನ 3.15ರಿಂದ 4,001ರಿಂದ 8,000 ರ್ಯಾಂಕ್ವರೆಗಿನ ಬಿಎಎಂಎಸ್ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ನಡೆಸಲಾಗುವುದು.