ಕರ್ನಾಟಕ

karnataka

ETV Bharat / education-and-career

ಹಟ್ಟಿ ಚಿನ್ನದ ಗಣಿಯಲ್ಲಿ 168 ಹುದ್ದೆಗಳ ಅರ್ಜಿ ಸಲ್ಲಿಕೆಗೆ ನಾಳೆಯೇ ಅಂತಿಮ ದಿನ - hatti gold mines 168 job post - HATTI GOLD MINES 168 JOB POST

ಪಿಯುಸಿ, ಐಟಿಐ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈ ಹುದ್ದೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

may 30 last day to apply hatti gold mines 168 job post
may 30 last day to apply hatti gold mines 168 job post (ಸಂಗ್ರಹ ಚಿತ್ರ)

By ETV Bharat Karnataka Team

Published : May 29, 2024, 2:42 PM IST

ಬೆಂಗಳೂರು: ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ರಾಜ್ಯ ಸರ್ಕಾರದ ಅಧೀನದ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದಲ್ಲಿ ಖಾಲಿ ಇರುವ 168 ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಕೆಗೆ ನಾಳೆ ಅಂತಿಮ ದಿನವಾಗಿದೆ. ಮಾರ್ಚ್​ 19ರಿಂದ ಅಧಿಸೂಚನೆ ಹೊರಡಿಸಿದ್ದ ಹುದ್ದೆಗೆ ಈ ಹಿಂದೆ ಮೇ 3 ಅಂತಿಮ ದಿನವಾಗಿತ್ತು. ಬಳಿಕ ಈ ಹುದ್ದೆ ವಿಸ್ತರಣೆ ನಡೆಸಲಾಗಿದ್ದು, ಅರ್ಜಿ ಸಲ್ಲಿಕೆಗೆ ಅಂತಿಮ ದಿನ ಮೇ 30 ಆಗಿದೆ.

ಹುದ್ದೆ ವಿಸ್ತರಣೆ ಅಧಿಸೂಚನೆ (ಹೆಚ್​ಜಿಎಂಎಲ್​ ವೆಬ್​ಸೈಟ್​​)

ಹುದ್ದೆ ವಿವರ:

  • ಸಹಾಯಕ ಫೋರ್ಮೆನ್​ (ಗಣಿ) - 16
  • ಸಹಾಯಕ ಫೋರ್ಮೆನ್ (ಲೋಹ ಶಾಸ್ತ್ರ) -7
  • ಲ್ಯಾಬ್​ ಸಹಾಯಕ- 1
  • ಸಹಾಯಕ ಫೋರ್ಮೆನ್​ (ಭೂ- ಗರ್ಭಶಾಸ್ತ್ರ) - 3
  • ಸಹಾಯಕ ಫೋರ್ಮೆನ್​ (ಡೈಮಂಡ್​ ಡ್ರಿಲ್ಲಿಂಗ್​​) -2
  • ಸಹಾಯಕ ಫೋರ್ಮೆನ್​​ (ಮೆಕಾನಿಕಲ್​) - 19
  • ಐಟಿಐ ಫಿಟ್ಟರ್​ ದರ್ಜೆ 2 (ಗಣಿ ವಿಭಾಗ)- 56
  • ಐಟಿಐ ಫಿಟ್ಟರ್​ ದರ್ಜೆ 2 (ಲೋಹ ವಿಭಾಗ) - 4
  • ಐಟಿಐ ಎಲೆಕ್ಟ್ರಿಕಲ್​ ದರ್ಜೆ 2 (ತಾಂತ್ರಿಕ ವಿಭಾಗ) -4
  • ಸಹಾಯಕ ಫೋರ್ಮೆನ್​​ (ಸಿವಿಲ್​) - 1
  • ಸಹಾಯಕ ಫೋರ್ಮೆನ್​ (ಎಲೆಕ್ಟ್ರಿಕಲ್ ) 1
  • ಸೆಕ್ಯೂರಿಟಿ ಇನ್ಸ್​ಪೆಕ್ಟರ್​​ - 6
  • ಐಟಿಐ ಫಿಟ್ಟರ್ (ಸರ್ವೆ) -2
  • ಸೆಕ್ಯೂರಿಟಿ ಗಾರ್ಡ್​​ - 24

ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಪ್ಲೊಮಾ, ಬಿಎಸ್ಸಿ, ಐಟಿಐ, ಪದವಿ, 12ನೇ ತರಗತಿ ವಿದ್ಯಾರ್ಹತೆ ಹೊಂದಿರಬೇಕು.

ವಯೋಮಿತಿ: ಅರ್ಜಿ ಸಲ್ಲಿಸುವ ಗರಿಷ್ಠ ವಯೋಮಿತಿ 35 ವರ್ಷ. ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಪ. ಜಾ, ಪ.ಪಂ, ಪ್ರವರ್ಗ 1, ನಿವೃತ್ತ ಸೇವಾ ನೌಕರರು, ವಿಕಲ ಚೇತನ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕು ಮತ್ತು ಪ್ರವರ್ಗ 2ಎ. 2ಬಿ, 3ಎ, 3 ಬಿ ಅಭ್ಯರ್ಥಿಗಳಿಗೆ 300 ರೂ. ಹಾಗೂ ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂ. ಅರ್ಜಿ ಶುಲ್ಕ ವಿಧಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಕಂಪ್ಯೂಟರ್​ ಆಧಾರಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಮೇ 30 ಆಗಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ huttigold.karnataka.gov.in ಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ: ITI ಅಭ್ಯರ್ಥಿಗಳಿಗೆ ಅವಕಾಶ: ಚೆನ್ನೈನ ಇಂಟೆಗ್ರಲ್​ ಕೋಚ್​ ಫ್ಯಾಕ್ಟರಿಯಲ್ಲಿದೆ ಉದ್ಯೋಗ

ABOUT THE AUTHOR

...view details