ಕರ್ನಾಟಕ

karnataka

ETV Bharat / education-and-career

KPTCL ನೇಮಕಾತಿ: 2,975 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಕಿರಿಯ ಸ್ಟೇಷನ್​ ಪರಿಚಾರಕರು ಹಾಗೂ ಕಿರಿಯ ಪವರ್‌ಮ್ಯಾನ್​ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

KPTCL job Notification For 2975 post
ನೇಮಕಾತಿ (ಈಟಿವಿ ಭಾರತ್​)

By ETV Bharat Karnataka Team

Published : Oct 15, 2024, 2:54 PM IST

ಬೆಂಗಳೂರು: ಕರ್ನಾಟಕ ವಿದ್ಯುತ್​ ಪ್ರಸರಣ ನಿಗಮ ನಿಯಮಿತ(ಕೆಪಿಟಿಸಿಎಲ್) ಸೇರಿದಂತೆ ವಿವಿಧ ನಿಗಮಗಳಲ್ಲಿರುವ 2,975 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಕಿರಿಯ ಸ್ಟೇಷನ್​ ಪರಿಚಾರಕ ಹಾಗೂ ಕಿರಿಯ ಪವರ್‌ಮ್ಯಾನ್​ ಹುದ್ದೆಗಳ ನೇಮಕಾತಿ ನಡೆಯಲಿದೆ.

ಹುದ್ದೆಗಳ ವಿವರ: ಒಟ್ಟು 2,975 ಹುದ್ದೆಗಳಿದ್ದು, 215 ಹುದ್ದೆಗಳನ್ನು ಕಲ್ಯಾಣ ಕರ್ನಾಟಕಕ್ಕೆ ಮೀಸಲಿಡಲಾಗಿದೆ.

ಕಿರಿಯ ಸ್ಟೇಷನ್​ ಪರಿಚಾರಕ ಹುದ್ದೆಗಳು - 433

ಕಿರಿಯ ಪವರ್‌ಮ್ಯಾನ್‌​ - 2547

ಯಾವ್ಯಾವ ನಿಗಮದಲ್ಲಿ ಎಷ್ಟು ಹುದ್ದೆಗಳಿವೆ?

ನಿಗಮ ಕಿರಿಯ ಸ್ಟೇಷನ್​ ಪರಿಚಾರಕರು ಕಿರಿಯ ಪವರ್​ ಮ್ಯಾನ್
ಕೆಪಿಟಿಸಿಎಲ್​ (ಕಲ್ಯಾಣ ಕರ್ನಾಟಕ ಸೇರಿದಂತೆ) 475 48
ಬೆಸ್ಕಾಂ (ಕಲ್ಯಾಣ ಕರ್ನಾಟಕ ಸೇರಿದಂತೆ) 640 295
ಜೆಸ್ಕಾಂ (ಕಲ್ಯಾಣ ಕರ್ನಾಟಕ ಸೇರಿದಂತೆ) 100 99
ಸೆಸ್ಕ್​ ಮೈಸೂರು 270 39
ಮೆಸ್ಕಾಂ 415 34
ಹೆಸ್ಕಾಂ 500 60

ವಿದ್ಯಾರ್ಹತೆ: 10ನೇ ತರಗತಿ ಉತ್ತೀರ್ಣ.

ವಯೋಮಿತಿ: ಕನಿಷ್ಠ 18, ಗರಿಷ್ಠ 35. ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 38 ವರ್ಷ, ಪ.ಜಾ ಮತ್ತು ಪ.ಪಂ ಹಾಗೂ ಪ್ರವರ್ಗ ಅಭ್ಯರ್ಥಿಗಳಿಗೆ 40 ವರ್ಷ.

ಅಧಿಸೂಚನೆ (KPTCL)

ಅರ್ಜಿ ಸಲ್ಲಿಕೆ: ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ವಿಶೇಷಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ. ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 378, ಸಾಮಾನ್ಯ, ಪ್ರವರ್ಗ 1, 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 614 ರೂ ಅರ್ಜಿ ಶುಲ್ಕವಿದೆ.

ಆಯ್ಕೆ ಪ್ರಕ್ರಿಯೆ: ಮೆರಿಟ್​, ಸಹನ ಶಕ್ತಿ ಪರಿಶೀಲನೆ ಮೂಲಕ ಆಯ್ಕೆ ನಡೆಯುತ್ತದೆ. ಅಕ್ಟೋಬರ್​ 21ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ನವೆಂಬರ್ 20 ಕಡೇಯ ದಿನ. ಅರ್ಜಿ ಶುಲ್ಕ ಪಾವತಿಗೆ ನವೆಂಬರ್​ 25 ಕಡೇಯ ದಿನ.

ವಿಶೇಷ ಸೂಚನೆ: ಅಭ್ಯರ್ಥಿಗಳು ಕರ್ನಾಟಕ ವಿದ್ಯುತ್​ ಪ್ರಸರಣ ನಿಗಮ ನಿಯಮಿತ ಅಥವಾ ವಿದ್ಯುತ್​ ಸರಬರಾಜು ಕಂಪನಿಯಲ್ಲಿ ಯಾವುದಾದರು ಒಂದಕ್ಕೆ ಮಾತ್ರ ಅರ್ಜಿ ಸಲ್ಲಿಸಬೇಕು. ಬೆಸ್ಕಾಂ, ಮೆಸ್ಕಾಂ, ಸೆಸ್ಕ್​, ಹೆಸ್ಕಾಂ ಮತ್ತು ಜೆಸ್ಕಾಂನ ಅಧಿಕೃತ ತಾಣದಲ್ಲಿ ಅರ್ಜಿ ಸಲ್ಲಿಸಬಹುದು.

ಈ ಕುರಿತು ಹೆಚ್ಚಿನ ಮಾಹಿತಿಗೆ kptcl.karnataka.gov.inಗೆ ಭೇಟಿ ನೀಡಿ.

ಇದನ್ನೂ ಓದಿ: ವಿಜಯಪುರ: ಅಂಗನವಾಡಿ ಕಾರ್ಯಕರ್ತರು, ಸಹಾಯಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ABOUT THE AUTHOR

...view details