ಕರ್ನಾಟಕ

karnataka

ETV Bharat / education-and-career

ಕೊಂಕಣ್​ ರೈಲ್ವೆಯಲ್ಲಿದೆ ಉದ್ಯೋಗಾವಕಾಶ: ಈಗಲೇ ವಾಕ್​ ಇನ್​ನಲ್ಲಿ ಭಾಗಿಯಾಗಿ - Konkan Railway Recruitment - KONKAN RAILWAY RECRUITMENT

ವಾಕ್​ ಇನ್​ ಸಂದರ್ಶನದ ಮೂಲಕ ಈ ಹುದ್ದೆಗಳ ನೇಮಕಾತಿ ನಡೆಯಲಿದ್ದು, ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Konkan Railway Corporation Limited Recruitment for Technician Post
ಸಾಂದರ್ಭಿಕ ಚಿತ್ರ (ಸಂಗ್ರಹ ಚಿತ್ರ)

By ETV Bharat Karnataka Team

Published : Sep 24, 2024, 5:33 PM IST

ಬೆಂಗಳೂರು: ಕೊಂಕಣ್​ ರೈಲ್ವೆಯಲ್ಲಿ ಖಾಲಿ ಇರುವ ತಾಂತ್ರಿಕ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಮೆಕಾನಿಕಲ್​ ಅಥವಾ ಯೋಜನೆ ವಿಭಾಗದಲ್ಲಿ ಗುತ್ತಿಗೆ ಆಧಾರದ ಮೇಲೆ ಈ ಹುದ್ದೆಗಳ ಭರ್ತಿ ನಡೆಸಲಾಗುವುದು. ವಾಕ್​ ಇನ್​ ಸಂದರ್ಶನದ ಮೂಲಕ ಈ ಹುದ್ದೆಗಳ ನೇಮಕಾತಿ ನಡೆಯಲಿದ್ದು, ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಹುದ್ದೆ ವಿವರ: ಒಟ್ಟು ಹುದ್ದೆಗಳ ಸಂಖ್ಯೆ 33

ಜೂ. ಟೆಕ್ನಿಕಲ್​ ಅಸಿಸ್ಟಂಟ್​ (ಮೆಕಾನಿಕಲ್​) - 10

ಟೆಕ್ನಿಶಿಯನ್​ (ಮೆಕಾನಿಕಲ್​) - 23

ವಿದ್ಯಾರ್ಹತೆ: ಜೂ ಟೆಕ್ನಿಕಲ್​ ಅಸಿಸ್ಟಂಟ್​ ಹುದ್ದೆಗೆ ಅಭ್ಯರ್ಥಿಗಳು ಡಿಪ್ಲೊಮಾ ಪದವಿ ಪೂರ್ಣಗೊಳಿಸಿರಬೇಕು. ಟೆಕ್ನಿಷಿಯನ್​ ಹುದ್ದೆಗೆ ಅಭ್ಯರ್ಥಿಗೆ ಐಟಿಐ ಪದವಿಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ: ಅಭ್ಯರ್ಥಿಗಳು ಕನಿಷ್ಠ 18 ಗರಿಷ್ಠ 35 ವರ್ಷ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅಧಿಸೂಚನೆ (ಕೊಂಕಣ್​ ರೈಲ್ವೆ)

ವೇತನ:ಜೂ. ಟೆಕ್ನಿಕಲ್​ ಅಸಿಸ್ಟಂಟ್​ (ಮೆಕಾನಿಕಲ್​) - 35,400 ರೂ ಮಾಸಿಕ

ಟೆಕ್ನಿಶಿಯನ್​ (ಮೆಕಾನಿಕಲ್​) - 25,500 ರೂ ಮಾಸಿಕ

ಆಯ್ಕೆ : ನೇರ ಸಂದರ್ಶನದಲ್ಲಿ ಗುಂಪು ಚರ್ಚೆ ಮತ್ತು ಸಂದರ್ಶನ

ವಾಕ್​ ಇನ್​ ನಡೆಯುವ ದಿನಾಂಕ ಮತ್ತು ಸ್ಥಳ: ಅಕ್ಟೋಬರ್​ 3 ಮತ್ತು 8 ರಂದು ನೇರ ಸಂದರ್ಶನ ನಡೆಯಲಿದೆ.

ಅಭ್ಯರ್ಥಿಗಳು ಅಗತ್ಯ ದಾಖಲೆ, ಪ್ರಮಾಣ ಪತ್ರದೊಂದಿಗೆ ಈ ವಿಳಾಸಕ್ಕೆ ಸಂದರ್ಶನಕ್ಕೆ ಹಾಜರಾಗಬೇಕು. ಎಕ್ಸಿಕ್ಯೂಟಿವ್​ ಕ್ಲಬ್​, ಕೊಂಕಣ್​ ರೈಲ್​ ವಿಹಾರ್​, ಕೊಂಕಣ್​ ರೈಲ್ವೆ ಕಾರ್ಪೊರೇಷನ್​ ಲಿಮಿಟೆಡ್​, ಸೀವುಡ್ಸ್​ ರೈಲ್ವೆ ಸ್ಟೇಷನ್​ ಬಳಿ, ಸೆಕ್ಟರ್​ 40, ಸೀವುಡ್ಸ್​​ (ಪಶ್ಚಿಮ), ನವಿ ಮುಂಬೈ.

ಈ ಹುದ್ದೆ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು konkanrailway.com ಭೇಟಿ ನೀಡಿ.

ಇದನ್ನೂ ಓದಿ: ನಿಮ್ಮದು ಡಿಗ್ರಿ ಆಗಿದೆಯಾ? ಹಾಗಿದ್ದರೆ ರೈಲ್ವೆಯಲ್ಲಿ ಉದ್ಯೋಗಾವಕಾಶ: ಇನ್ನೇಕೆ ತಡ, ಶೀಘ್ರವೇ ಅರ್ಜಿ ಸಲ್ಲಿಸಿ!

ABOUT THE AUTHOR

...view details