ಬೆಂಗಳೂರು: ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (ಕೆಆರ್ಸಿಎಲ್)ನಿಂದ ಟೆಕ್ನಿಷಿಯನ್ ಮತ್ತು ಪಾಯಿಂಟ್ಸ್‌ಮ್ಯಾನ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 190 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ:
- ಸೀನಿಯರ್ ಸೆಕ್ಷನ್ ಇಂಜಿನಿಯರ್ - 10
- ಟೆಕ್ನಿಶಿಯನ್ -3 - 35
- ಅಸಿಸ್ಟೆಂಟ್ ಲೋಕೊ ಪೈಲಟ್ - 15
- ಟ್ರಾಕ್ ಮೈನ್ಟೇನರ್ -35
- ಸ್ಟೇಷನ್ ಮಾಸ್ಟರ್ - 10
- ಗೂಡ್ಸ್ ಟ್ರೈನ್ ಮ್ಯಾನೇಜರ್ - 5
- ಪಾಯಿಂಟ್ಸ್ ಮ್ಯಾನ್- 60
- ಇಎಸ್ಟಿಎಂ - 3 - 15
- ಕಮರ್ಷಿಯಲ್ ಸೂಪರ್ವೈಸರ್ -5
ವಿದ್ಯಾರ್ಹತೆ: ಸೀನಿಯರ್ ಸೆಕ್ಷನ್ ಇಂಜಿನಿಯರ್ ಮತ್ತು ಕಮರ್ಷಿಯಲ್ ಸೂಪರ್ ವೈಸರ್, ಸ್ಟೇಷನ್ ಮಾಸ್ಟರ್, ಗೂಡ್ಸ್ ಟ್ರೈನ್ ಮ್ಯಾನೇಜರ್ ಹುದ್ದೆಗಳಿಗೆ ಪದವಿ ಪೂರ್ಣಗೊಳಿಸರಬೇಕು. ಇನ್ನುಳಿದ ಹುದ್ದೆಗಳಿಗೆ ಎಸ್ಎಸ್ಎಲ್ಸಿ, ಐಟಿಐ ಪೂರ್ಣಗೊಳಿಸಿರಬೇಕು.
ವಯೋಮಿತಿ: ಕನಿಷ್ಠ 18, ಗರಿಷ್ಠ 36 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 3, ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ಅರ್ಜಿ ಸಲ್ಲಿಕೆ: ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಎಲ್ಲಾ ಅಭ್ಯರ್ಥಿಗಳಿಗೆ 885 ರೂ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಕಂಪ್ಯೂಟರ್ ಆಧರಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ. ಸೆಪ್ಟೆಂಬರ್ 16ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಲಿದ್ದು, ಅರ್ಜಿ ಸಲ್ಲಿಸಲು ಕಡೇಯ ದಿನಾಂಕ ಅಕ್ಟೋಬರ್ 6. ಈ ಕುರಿತು ಹೆಚ್ಚಿನ ಮಾಹಿತಿಗೆ konkanrailway.com ಭೇಟಿ ನೀಡಿ.
HAL ನಲ್ಲಿ166 ಟೆಕ್ನಿಶಿಯನ್ ಹುದ್ದೆ:ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನಲ್ಲಿ 166 ಟೆಕ್ನಿಶಿಯನ್ ಹುದ್ದೆಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಡಿಪ್ಲೊಮಾ ಟೆಕ್ನಿಶಿಯನ್ 43, ಟೆಕ್ನಿಶಿಯನ್ 123 ಹುದ್ದೆಗಳಿವೆ. ಡಿಪ್ಲೊಮಾ ಟೆಕ್ನಿಶಿಯನ್ ಹುದ್ದೆಗೆ ಡಿಪ್ಲೊಮಾ ಮತ್ತು ಟೆಕ್ನಿಶಿಯನ್ ಹುದ್ದೆಗೆ ಐಟಿಐ ಪದವಿ ಹೊಂದಿರಬೇಕು.