ಕರ್ನಾಟಕ

karnataka

ETV Bharat / education-and-career

3 ವರ್ಷ ವಯೋಮಿತಿ ಸಡಿಲಿಸಿ ಗ್ರಾಮ ಲೆಕ್ಕಿಗ ಹುದ್ದೆಗೆ ಪರಿಷ್ಕೃತ ಅಧಿಸೂಚನೆ - Village Accountant Recruitment

ರಾಜ್ಯ ಸಚಿವ ಸಂಪುಟ ಸಭೆಯ ನಿರ್ಧಾರದಂತೆ ಇದೀಗ ಮೂರು ವರ್ಷ ವಯೋಮಿತಿ ಸಡಿಲಿಸಿ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಕೆಇಎ
ಕೆಇಎ (ETV Bharat)

By ETV Bharat Karnataka Team

Published : Sep 20, 2024, 11:57 AM IST

Updated : Sep 20, 2024, 12:08 PM IST

ಬೆಂಗಳೂರು: ವಿವಿಧ ಗ್ರೂಪ್​ ಬಿ ಮತ್ತು ಗ್ರೂಪ್​ ಸಿ ಹುದ್ದೆಗಳಿಗೆ ಒಂದು ಬಾರಿಗೆ ವಯೋಮಿತಿ ಸಡಿಲಿಕೆ ಮಾಡಿ ಕಳೆದ ತಿಂಗಳು ರಾಜ್ಯ ಸರ್ಕಾರದ ತೀರ್ಮಾನ ಕೈಗೊಂಡಿತ್ತು. ಅದರಂತೆ ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗಳ ಭರ್ತಿಗೆ ಮತ್ತೆ ಅರ್ಜಿ ಆಹ್ವಾನಿಸಿದೆ. ಪರಿಷ್ಕೃತ ಅಧಿಸೂಚನೆಯಲ್ಲಿ ಎಲ್ಲ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಹುದ್ದೆಗಳು: ಒಟ್ಟು 1,000 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳು.

ವಿದ್ಯಾರ್ಹತೆ: ಪಿಯುಸಿ, ಡಿಪ್ಲೋಮಾ/ಎರಡು ವರ್ಷದ ಐಟಿಐ/ಎರಡು ವರ್ಷದ ಜೆಒಸಿ, ಜೆಒಡಿಸಿ, ಜೆಎಲ್​ಡಿಸಿ ಪೂರೈಸಿರಬೇಕು.

ವೇತನ: ಮಾಸಿಕ ₹21,400 - ₹42,000

ವಯೋಮಿತಿ: ಕನಿಷ್ಠ 18. ಗರಿಷ್ಠ 38 ವರ್ಷ. ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 3 ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಆಯ್ಕೆ ಪ್ರಕ್ರಿಯೆ: ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ. ಪರೀಕ್ಷೆ ಎರಡು ಪತ್ರಿಕೆಯನ್ನೊಳಗೊಂಡಿದ್ದು, ತಲಾ 200 ಅಂಕಗಳಿರುತ್ತದೆ.

ಅರ್ಜಿ ಸಲ್ಲಿಕೆ: ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಮತ್ತು ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 750 ರೂ. ಮತ್ತು ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ, ಪ್ರವರ್ಗ-1, ವಿಶೇಷಚೇತನ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು 500 ರೂ. ಅರ್ಜಿ ಶುಲ್ಕ ಪಾವತಿಸಬೇಕಿದೆ.

ಸೆಪ್ಟೆಂಬರ್​ 19ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಅಕ್ಟೋಬರ್​​ 28 ಕಡೇಯ ದಿನ. ಅರ್ಜಿ ಶುಲ್ಕ ಪಾವತಿಗೆ ಕಡೇಯ ದಿನ ಅಕ್ಟೋಬರ್​ 29. ಈ ಕುರಿತು ವಿವರವಾದ ಮಾಹಿತಿಗೆ kea.kar.nic.in ಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ: ಪಿಡಿಒ ಹುದ್ದೆಗೆ ಪರಿಷ್ಕೃತ ಅರ್ಜಿ ಆಹ್ವಾನ: 3 ವರ್ಷ ವಯೋಮಿತಿ ಸಡಿಲಿಕೆ

Last Updated : Sep 20, 2024, 12:08 PM IST

ABOUT THE AUTHOR

...view details