ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಕೆಇಎ) ಪ್ರೋಗ್ರಾಮರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ ಈ ಹುದ್ದೆಗಳ ಭರ್ತಿ ನಡೆಸಲಾಗುವುದು. ಒಂದು ವರ್ಷದ ಅವಧಿಗೆ ಈ ಹುದ್ದೆ ನೇಮಕಾತಿ ನಡೆಸಲಾಗುವುದು. ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧಾರದ ಮೇಲೆ ಈ ಹುದ್ದೆ ವಿಸ್ತರಣೆ ನಡೆಸಲಾಗುವುದು.
ಹುದ್ದೆ ವಿವರ:
- ಸೀನಿಯರ್ ಪ್ರೋಗ್ರಾಮರ್ - 4
- ಪ್ರೋಗ್ರಾಮರ್ - 1
- ಜೂನಿಯರ್ ಪ್ರೋಗ್ರಾಮರ್ - 5
ವಿದ್ಯಾರ್ಹತೆ: ಸೀನಿಯರ್ ಪ್ರೋಗ್ರಾಮರ್ ಹುದ್ದೆಗೆ ಅಭ್ಯರ್ಥಿಗಳು ಸಿಎಸ್ ಅಥವಾ ಐಟಿಯಲ್ಲಿ ಬಿಇ ಬಿ.ಟೆಕ್ ಪದವಿಯನ್ನು ಪಡೆದಿರಬೇಕು. 5 ರಿಂದ 10 ವರ್ಷದ ಹುದ್ದೆ ಅನುಭವ ಹೊಂದಿರಬೇಕು.
ಪ್ರೋಗ್ರಾಮರ್ ಅಥವಾ ಜೂನಿಯರ್ ಪ್ರೋಗ್ರಾಮರ್ ಹುದ್ದೆಗೆ ಅಭ್ಯರ್ಥಿಗಳು ಸಿಎಸ್, ಐಟಿಯಲ್ಲಿ ಎಂಸಿಎ, ಎಂಟೆಕ್, ಬಿಇ, ಬಿ.ಟೆಕ್ ಪದವಿಯನ್ನು ಪಡೆದಿರಬೇಕು.
ಅಭ್ಯರ್ಥಿಗಳು ಸರಾಗವಾಗಿ ಕನ್ನಡವನ್ನು ಬರೆಯುವ ಮತ್ತು ಮಾತನಾಡುವ ಸಾಮರ್ಥ್ಯವನ್ನು ಹೊಂದಿರಬೇಕು.
ವೇತನ:
- ಸೀನಿಯರ್ ಪ್ರೋಗ್ರಾಮರ್ - 1,00,000 -2,00,000
- ಪ್ರೋಗ್ರಾಮರ್ - 45,000
- ಜೂನಿಯರ್ ಪ್ರೋಗ್ರಾಮರ್ - 25,000
ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಈ ಹುದ್ದೆಗೆ ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. keaopportunities@gmail.com ಈ ಇಮೇಲ್ ವಿಳಾಸಕ್ಕೆ ಅಭ್ಯರ್ಥಿಗಳು ತಮ್ಮ ರೆಸ್ಯೂಮ್ ವಿವರಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಇ-ಮೇಲ್ ಮೂಲಕ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಲು ಸೂಚಿಸಲಾಗುವುದು.
ಈ ಹುದ್ದೆಗೆ ಮಾರ್ಚ್ 3 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಮಾರ್ಚ್ 12 ಆಗಿದೆ.
ಈ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ kea.kar.nic.inಇಲ್ಲಿಗೆ ಭೇಟಿ ನೀಡಿ.
ಬಿಇಎಲ್ನಲ್ಲಿ ಸಹಾಯಕ ಇಂಜಿನಿಯರ್ ಹುದ್ದೆ;ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ನಲ್ಲಿ 24 ಹಿರಿಯ ಸಹಾಯಕ ಇಂಜಿನಿಯರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ವಿಶಾಖಪಟ್ಟಣಂ, ಕಾರವಾರ, ಕೊಚ್ಚಿ, ಗುವಾಹಟಿ ಕಚೇರಿಗೆ ನೇಮಕಾತಿ ನಡೆಯಲಿದೆ. ಡಿಪ್ಲೊಮಾ ಪದವೀಧರರು ಅರ್ಜಿ ಸಲ್ಲಿಸಬಹುದು. ಗರಿಷ್ಠ 50 ವರ್ಷ ವಯೋಮಿತಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಬಿಇಎಲ್ ವೆಬ್ಸೈಟ್ನಲ್ಲಿ ಸಿಗುವ ನಿಗದಿತ ಅರ್ಜಿ ತುಂಬಿ, ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕಿದೆ.
ಅಸಿಸ್ಟೆಂಟ್ ಮ್ಯಾನೇಜರ್, ಎಚ್ಆರ್, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಮಿಲಿಟರಿ ಕಮ್ಯೂನಿಕೇಷನ್ ಮತ್ತು ಎನ್ಡಬ್ಲ್ಯೂಸಿಎಸ್-ಎಸ್ಬಿಯು, ಜಾಲಹಳ್ಳಿ ಪೋಸ್ಟ್, ಬೆಂಗಳೂರು-560013.
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕಡೆಯ ದಿನ ಮಾರ್ಚ್ 20. ಹೆಚ್ಚಿನ ಮಾಹಿತಿಗೆ bel-india.in ಇಲ್ಲಿಗೆ ಭೇಟಿ ನೀಡಿ.
ಇದನ್ನೂ ಓದಿ: ಬಿಡಿಎಯಲ್ಲಿ ಉದ್ಯೋಗಾವಕಾಶ: ಎಫ್ಡಿಎ, ಎಸ್ಡಿಎ ಹುದ್ದೆಗಳ ಭರ್ತಿಗೆ KEA ಅಧಿಸೂಚನೆ