ಬೆಂಗಳೂರು: ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ತಾತ್ಕಾಲಿಕ ಗುತ್ತಿಗೆ ಆಧಾರದ ಮೇಲೆ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಕೇಂದ್ರ ಪುರಸ್ಕೃತ ಮಿಷನ್ ಶಕ್ತಿ ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯ ಮಹಿಳಾ ಸಬಲೀಕರಣ ಘಟಕ ಪ್ರಾರಂಭಿಸಲು ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ: ಒಟ್ಟು 6 ಹುದ್ದೆಗಳಿವೆ
- ರಾಜ್ಯ ಯೋಜನಾ ಸಂಯೋಜಕರು 1
- ಲಿಂಗ ತಜ್ಞರು 1
- ಪಿಎಂಎಂವಿವೈ- ರಾಜ್ಯ ಸಂಯೋಜಕರು 1
- ಸಂಶೋಧನೆ ಮತ್ತು ತರಬೇತಿ ತಜ್ಞರು 1
- ಲೆಕ್ಕ ಸಹಾಯಕರು 1
- ಕಚೇರಿ ಸಹಾಯಕರು 1
ವಿದ್ಯಾರ್ಹತೆ:ರಾಜ್ಯ ಯೋಜನಾ ಸಂಯೋಜಕರು- ಸಮಾಜ ವಿಜ್ಞಾನ, ಜೀವ ವಿಜ್ಞಾನ, ಸೋಷಿಯಲ್ ವರ್ಕ್, ರೂರಲ್ ಮ್ಯಾನೇಜ್ಮೆಂಟ್ನಲ್ಲಿ ಸ್ನಾತಕೋತ್ತರ ಪದವಿ. ಮೂರು ವರ್ಷ ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಯಲ್ಲಿ ನಿರ್ದಿಷ್ಟ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ.
- ಲಿಂಗ ತಜ್ಞರು: ಸೋಷಿಯಲ್ ವರ್ಕ್ಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ಮೂರು ವರ್ಷ ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಯಲ್ಲಿ ನಿರ್ದಿಷ್ಟ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ
- ಪಿಎಂಎಂವಿವೈ- ರಾಜ್ಯ ಸಂಯೋಜಕರು: ಸಮಾಜ ವಿಜ್ಞಾನ, ಜೀವ ವಿಜ್ಞಾನ, ಸೋಷಿಯಲ್ ವರ್ಕ್, ರೂರಲ್ ಮ್ಯಾನೇಜ್ಮೆಂಟ್ನಲ್ಲಿ ಸ್ನಾತಕೋತ್ತರ ಪದವಿ. ಮೂರು ವರ್ಷ ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಯಲ್ಲಿ ನಿರ್ದಿಷ್ಟ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ.
- ಸಂಶೋಧನೆ ಮತ್ತು ತರಬೇತಿ ತಜ್ಞರು: ಸೋಷಿಯಲ್ ವರ್ಕ್ನಲ್ಲಿ ಪದವಿ ಜೊತೆಗೆ ಮೂರು ವರ್ಷ ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಯಲ್ಲಿ ನಿರ್ದಿಷ್ಟ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ.
- ಲೆಕ್ಕ ಸಹಾಯಕರು: ಅಕೌಂಟ್ಸ್ನಲ್ಲಿ ಪದವಿ ಅಥವಾ ಡಿಪ್ಲೊಮಾದೊಂದಿಗೆ ಮೂರು ವರ್ಷ ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಯಲ್ಲಿ ನಿರ್ದಿಷ್ಟ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ.
- ಕಚೇರಿ ಸಹಾಯಕರು: ಕಂಪ್ಯೂಟರ್ ಅಥವಾ ಐಟಿಯಲ್ಲಿ ಪದವಿ, ಡಾಟಾ ಮ್ಯಾನೇಜ್ಮೆಂಟ್, ಪ್ರೊಸೆಸ್ ಡಾಕ್ಯುಮೆಂಟೇಷನ್, ವೆಬ್ ಬೇಸ್ಡ್ ವರದಿಯಲ್ಲಿ ಮೂರು ವರ್ಷ ಕೆಲಸ ಮಾಡಿದ ಅನುಭವ.
ವಿಶೇಷ ಸೂಚನೆ:ಈ ಹುದ್ದೆಗಳನ್ನು 11 ತಿಂಗಳ ಅವಧಿಗೆ ಗುತ್ತಿಗೆ ಆಧಾರದಡಿ ನೇಮಕಾತಿ ನಡೆಯಲಿದ್ದು, ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧಾರದ ಮೇಲೆ ಹುದ್ದೆಗಳ ವಿಸ್ತರಣೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಕನ್ನಡ, ಇಂಗ್ಲಿಷ್ ಭಾಷೆಯಲ್ಲಿ ಬರೆಯುವ, ಮಾತನಾಡುವ ಮತ್ತು ಓದುವ, ಸಂಪೂರ್ಣವಾಗಿ ವ್ಯವಹರಿಸುವ ಜ್ಞಾನ ಹೊಂದಿರಬೇಕು.