ಕರ್ನಾಟಕ

karnataka

ETV Bharat / education-and-career

JEE ಅಡ್ವಾನ್ಸ್ಡ್ ಯಶಸ್ಸಿನ ರಹಸ್ಯ ಏನು?; ಇಲ್ಲಿದೆ 2024ರ ಟಾಪರ್ ಸಕ್ಸಸ್​ ಮಂತ್ರ, ಹೀಗಿದೆ ಟಾಪರ್​ ಮನದಾಳದ ಮಾತು! - JEE ADVANCED TOPPER INTERVIEW

ಕಷ್ಟಪಟ್ಟು ಕೆಲಸ ಮಾಡಿದರೆ ಜೀವನದಲ್ಲಿ ಸಾಧಿಸಲು ಆಗದೇ ಇರುವುದು ಯಾವುದೂ ಇಲ್ಲ ಎನ್ನುವುದು ಜೆಇಇ ಅಡ್ವಾನ್ಸ್ಡ್ ಆಲ್ ಇಂಡಿಯಾ ಟಾಪರ್ ವೇದ್ ಲಹೋಟಿ ಮನದಾಳದ ಮಾತು. ಜೀವನದಲ್ಲಿ ದೊಡ್ಡ ಗುರಿ ಹೊಂದಬೇಕು ಎಂಬುದು ಲಹೋಟಿ ಸ್ಪಷ್ಟವಾದ ಮಾತು. ಇತ್ತೀಚೆಗೆ ಬಿಡುಗಡೆಯಾದ ಜೆಇಇ ಅಡ್ವಾನ್ಸ್‌ಡ್ ಫಲಿತಾಂಶದಲ್ಲಿ 360ಕ್ಕೆ 355 ಅಂಕ ಗಳಿಸಿದ ವೇದ್ ಅವರ ಯಶೋಗಾಥೆಯನ್ನು ನಾವು ಇಂದು ತಿಳಿಯೋಣ.

jee-advanced-topper-ved-lahoti-says-nothing-is-impossible-if-we-work-hard
ಮಾರ್ಕ್ಸ್​ ಕಡಿಮೆ ಬಂದರೆ ಅಜ್ಜನ ಜತೆ ಚರ್ಚೆ ಮಾಡ್ತಿದ್ದೆ: ಇದು ಜೆಇಇ ಅಡ್ವಾನ್ಸ್ಡ್ ಟಾಪರ್ ರಹಸ್ಯ! (ETV Bharat)

By ETV Bharat Karnataka Team

Published : Jun 11, 2024, 7:14 AM IST

Updated : Jun 11, 2024, 9:12 AM IST

ಹೈದರಾಬಾದ್​: ಜೀವನದಲ್ಲಿ ಯಾವುದೂ ಅಸಾಧ್ಯವಲ್ಲ. ಸಂಕಲ್ಪದಿಂದ ಎಲ್ಲವೂ ಸಾಧ್ಯ. ಜೀವನದಲ್ಲಿ ಗುರಿ ಇರಬೇಕು. ಅದು ದೊಡ್ಡದಾಗಿರಬೇಕು ಅಷ್ಟೇ. ಇವು ದೊಡ್ಡವರ ಮಾತುಗಳಲ್ಲ. ಜೆಇಇ ಅಡ್ವಾನ್ಸ್ಡ್ ಆಲ್ ಇಂಡಿಯಾ ಟಾಪರ್ ವೇದ್ ಲಹೋಟಿ ಅವರ ಮನದಾಳದ ಮಾತುಗಳಾಗಿವೆ. ಕಷ್ಟಪಟ್ಟು ದುಡಿದರೆ ಜೀವನದಲ್ಲಿ ಯಾವುದೂ ಅಸಾಧ್ಯವಲ್ಲ ಎಂದು ವೇದ್ ಲಹೋಟಿ ಅವರ ಖಚಿತ ನುಡಿಗಳಾಗಿವೆ. ಜೆಇಇ ಅಡ್ವಾನ್ಸ್‌ನಲ್ಲಿ ಆಲ್ ಇಂಡಿಯಾ ಟಾಪರ್ ಆದ ವೇದ್ ಲಹೋಟಿ ಅವರು ಈಟಿವಿ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಹಲವು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಟಾಪರ್​​ ವೇದ್​ ಅವರ ತಂದೆ ಯೋಗೇಶ್ ಲಹೋಟಿ ರಿಲಯನ್ಸ್ ಜಿಯೋದಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಜಯಾ ಗೃಹಿಣಿಯಾಗಿದ್ದಾರೆ. ವೇದ್ ಅವರ ಅಜ್ಜ ಆರ್.ಸಿ.ಸೋಮಾನಿ ನಿವೃತ್ತ ಇಂಜಿನಿಯರ್. ವೇದ್ 8ನೇ ತರಗತಿಯಲ್ಲಿ ಅಂತಾರಾಷ್ಟ್ರೀಯ ಜೂನಿಯರ್ ಸೈನ್ಸ್ ಒಲಿಂಪಿಯಾಡ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಅವರು 10 ನೇ ತರಗತಿಯಲ್ಲಿ 98.6 ಶೇಕಡಾ ಮತ್ತು 12 ನೇ ತರಗತಿಯಲ್ಲಿ 97.6 ಶೇಕಡಾ ಅಂಕಗಳನ್ನು ಪಡೆದುಕೊಂಡಿದ್ದಾರೆ. ಜೂನ್ 9 ರಂದು ಬಿಡುಗಡೆಯಾದ JEE ಅಡ್ವಾನ್ಸ್ಡ್ 2024 ಪರೀಕ್ಷೆಯಲ್ಲಿ ವೇದ್ 360 ಅಂಕಗಳಿಗೆ 355 ಅಂಕಗಳನ್ನು ಗಳಿಸಿ ಟಾಪರ್​ ಆಗಿದ್ದಾರೆ. ಅಂದರೆ ಶೇಕಡಾ 98.61 ಅಂಕಗಳು. 2024 ರ ಜೆಇಇ ಮೇನ್ಸ್‌ನಲ್ಲಿ ಅವರು 300 ಅಂಕಗಳಿಗೆ 295 ಅಂಕಗಳನ್ನು ಪಡೆದುಕೊಂಡಿದ್ದಾರೆ.

ಇನ್ನು ಅಖಿಲ ಭಾರತ ಮಟ್ಟದಲ್ಲಿ 119 ನೇ ರ‍್ಯಾಂಕ್ ಕೂಡಾ ಪಡೆದುಕೊಂಡಿದ್ದಾರೆ. ಶಾಲೆಯಲ್ಲಿ ಓದುವಾಗ ಯಾವುದೇ ವಿಷಯದಲ್ಲಿ ಅಂಕ ಕಡಿಮೆ ಬಂದರೆ ತಾತನ ಜೊತೆ ಮಾತನಾಡುತ್ತಿದ್ದೆ, ಆ ಬಗ್ಗೆ ಇದ್ದ ಸಂಶಯಗಳನ್ನು ಬಗೆ ಹರಿಸಿಕೊಳ್ಳುತ್ತಿದ್ದೆ, ಶಾಲೆಗೆ ತೆರಳಿ ಅಂಕ ಕಡಿಮೆ ಏಕೆ ಬಂದವು ಎಂದು ನನ್ನ ಅಜ್ಜ ಶಿಕ್ಷಕರನ್ನು ಪ್ರಶ್ನಿಸುತ್ತಿದ್ದರು ಎಂದಿದ್ದಾರೆ ವೇದ್​.

"ಅಖಿಲ ಭಾರತ ಮಟ್ಟದಲ್ಲಿ ಜೆಇಇ ಅಡ್ವಾನ್ಸ್‌ಡ್‌ನಲ್ಲಿ ಪ್ರಥಮ ರ‍್ಯಾಂಕ್ ಪಡೆದಿರುವುದು ಸಂತಸ ತಂದಿದೆ. ನನ್ನ ಶಿಕ್ಷಕರು ಮತ್ತು ಕುಟುಂಬದ ಸದಸ್ಯರ ಬೆಂಬಲದಿಂದ ಇದೆಲ್ಲವು ಸಾಧ್ಯವಾಗಿದೆ. ಜೆಇಇ ಮೇನ್ಸ್‌ ತುಂಬಾ ಸ್ಪರ್ಧಾತ್ಮಕವಾಗಿದೆ. ಒಂದು ಪ್ರಶ್ನೆಗೆ ತಪ್ಪಾಗಿ ಬರೆದರೆ ಅಖಿಲ ಭಾರತ ಮಟ್ಟದಲ್ಲಿ ಉತ್ತಮ ಶ್ರೇಣಿ ಪಡೆಯುವುದು ಕಷ್ಟವಾಗುತ್ತದೆ ಎಂದು ಅವರು ವಿವರಿಸಿದ್ದಾರೆ. ಇದೇ ವೇಳೆ ವೇದ್​, ಐಐಟಿ ಬಾಂಬೆಯಲ್ಲಿ ಸೀಟು ಪಡೆಯುವುದೇ ನನ್ನ ಗುರಿಯಾಗಿದೆ ಎಂದು ತಮ್ಮ ಮನದಿಂಗಿತ ವ್ಯಕ್ತಪಡಿಸಿದ್ದಾರೆ.

ಮಗ ವೇದ್ ದೇಶಕ್ಕೆ ಕೀರ್ತಿ ತಂದಿದ್ದಾನೆ ಎಂದು ತಂದೆ ಯೋಗೇಶ್ ಸಂತಸ ವ್ಯಕ್ತಪಡಿಸಿದರು. ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಒಂದೊಂದು ಅಂಕಕ್ಕೂ ಸ್ನೇಹಿತರ ನಡುವೆ ಪೈಪೋಟಿ ಏರ್ಪಡುತ್ತದೆ. ತರಗತಿಯಲ್ಲಿ ಗೆಳೆಯರೆಲ್ಲ ಸೇರಿ ಸಂದೇಹ ನಿವಾರಣೆ ಮಾಡಿಕೊಳ್ಳುತ್ತಿದ್ದರು ಎಂದು ಅವರು ಇದೇ ವೇಳೆ ನೆನಪು ಮಾಡಿಕೊಂಡರು.

ಇದನ್ನು ಓದಿ:ಅರ್ಹತೆ ಇದ್ದು ಕಷ್ಟಪಟ್ಟರೂ ನಿಮಿಷ್ಟದ ಕೆಲಸ ಸಿಗುತ್ತಿಲ್ವಾ; ಹಾಗಾದರೆ ಈ ಐದು ತಪ್ಪುಗಳನ್ನ ಸರಿ ಮಾಡಿಕೊಳ್ಳಿ - Failing to get job dont do these mistake

ಹಟ್ಟಿ ಚಿನ್ನದ ಗಣಿಯಲ್ಲಿ 168 ಹುದ್ದೆಗಳ ಅರ್ಜಿ ಸಲ್ಲಿಕೆಗೆ ನಾಳೆಯೇ ಅಂತಿಮ ದಿನ - hatti gold mines 168 job post

Last Updated : Jun 11, 2024, 9:12 AM IST

ABOUT THE AUTHOR

...view details