ಕರ್ನಾಟಕ

karnataka

ETV Bharat / education-and-career

ಇಸ್ರೋ ನೇಮಕಾತಿ; ಡ್ರೈವರ್​ ಡ್ರಾಫ್ಟ್​ಮಾನ್​ ಸೇರಿದಂತೆ 224 ಹುದ್ದೆಗಳಿಗೆ ಅರ್ಜಿ ಆಹ್ವಾನ

Job Alert: ಇಸ್ರೋದಲ್ಲಿ ಅಧಿಸೂಚನೆ ಹೊರಡಿಸಲಾಗಿರುವ ಹುದ್ದೆಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ISRO job notification for assistant and various post
ISRO job notification for assistant and various post

By ETV Bharat Karnataka Team

Published : Feb 14, 2024, 12:01 PM IST

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಇಂಜಿನಿಯರ್​, ತಾಂತ್ರಿಕ ಸಹಾಯಕರು, ಡ್ರಾಫ್ಟ್‌ಮ್ಯಾನ್, ಡ್ರೈವರ್​ ಸೇರಿದಂತೆ ಒಟ್ಟು 224 ಹುದ್ದೆಗಳ ನೇಮಕಾತಿ ನಡೆಯಲಿದೆ. ಈ ಹುದ್ದೆಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಧಿಸೂಚನೆ

ಹುದ್ದೆಗಳ ವಿವರ: ಇಸ್ರೋದಲ್ಲಿ ಅಧಿಸೂಚನೆ ಹೊರಡಿಸಿರುವ 224 ಹುದ್ದೆಗಳ ಮಾಹಿತಿ ಹೀಗಿದೆ.

  • ಸೈಂಟಿಸ್ಟ್​​ ಇಂಜಿನಿಯರ್​ -5
  • ಟೆಕ್ನಿಕಲ್​ ಸಹಾಯಕರು - 55
  • ಸೈಂಟಿಫಿಕ್​​ ಸಹಾಯಕರು - 6
  • ಲೈಬ್ರರಿ ಅಸಿಸ್ಟಂಟ್​ - 1
  • ಟೆಕ್ನಿಷಿಯನ್​ ಬಿ ಮತ್ತು ಡ್ರಾಫ್ಟ್​ ಮ್ಯಾನ್​ ಬಿ - 142
  • ಫೈರ್​​ ಮ್ಯಾನ್​ ಎ - 3
  • ಕುಕ್​​ - 4
  • ಡ್ರೈವರ್ -​ 8

ವಿದ್ಯಾರ್ಹತೆ

  • ಸೈಂಟಿಸ್ಟ್​​ ಇಂಜಿನಿಯರ್​ ಹುದ್ದೆಗೆ ಅಭ್ಯರ್ಥಿಗಳು ಬಿಇ, ಬಿಟೆಕ್​​, ಎಂಇ ಅಥವಾ ಎಂಟೆಕ್​, ಎಂಎಸ್ಸಿ ಪದವಿಯನ್ನು ಹೊಂದಿರಬೇಕು.
  • ಟೆಕ್ನಿಕಲ್​ ಸಹಾಯಕರ ಹುದ್ದೆಗೆ ಅಭ್ಯರ್ಥಿ ಇಂಜಿನಿಯರಿಂಗ್​ ಡಿಪ್ಲೊಮಾ ಪದವಿ ಹೊಂದಿರಬೇಕು.
  • ಸೈಂಟಿಫಿಕ್​​ ಸಹಾಯಕರ ಹುದ್ದೆಗೆ ಬಿಎಸ್​​​​​ಸಿ ಪದವಿ ಹೊಂದಿರಬೇಕು.
  • ಲೈಬ್ರರಿ ಸಹಾಯಕರ ಹುದ್ದೆಗೆ ಪದವಿ ಅಥವಾ ಸ್ನಾತಕೋತ್ತರ ಪದವಿ ಹೊಂದಿರಬೇಕು
  • ಟೆಕ್ನಿಷಿಯನ್​ ಬಿ ಮತ್ತು ಡ್ರಾಫ್ಟ್​ ಮ್ಯಾನ್​ ಬಿ, ಫೈರ್​​ ಮ್ಯಾನ್​ ಎ, ಕುಕ್​​, ಡ್ರೈವರ್​ ಹುದ್ದೆಗೆ ಅಭ್ಯರ್ಥಿಗಳು 10ನೇ ತರಗತಿ ಅಥವಾ ಐಟಿಐ ಉತ್ತೀರ್ಣರಾಗಿರಬೇಕು.

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ವಯೋಮಿತಿಯನ್ನು ಹೊಂದಿರಬೇಕು. ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ ಮತ್ತು ಅರ್ಜಿ ಶುಲ್ಕ: ಈ ಹುದ್ದೆಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಸೈಂಟಿಸ್ಟ್​​, ಇಂಜಿನಿಯರ್​​, ಟೆಕ್ನಿಕ್​ ಮತ್ತು ಸೈಂಟಿಫಿಕ್​ ಸಹಾಯಕರ ಹುದ್ದೆಗೆ ಅಭ್ಯರ್ಥಿಗಳು 250 ರೂ ಅರ್ಜಿ ಶುಲ್ಕ ಮತ್ತು 750 ರೂ ಪ್ರೊಸೆಸಿಂಗ್​ ಶುಲ್ಕವನ್ನು ಪಾವತಿಸಬೇಕು. ಉಳಿದ ಹುದ್ದೆಗೆ ಅರ್ಜಿ ಶುಲ್ಕ 100 ರೂ ಆಗಿದ್ದು, ಪ್ರೊಸೆಸಿಂಗ್​ ಶುಲ್ಕ 500 ರೂ ಆಗಿದೆ, ಮಹಿಳಾ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನರಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಆಯ್ಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ, ಕಂಪ್ಯೂಟರ್​​ ಆಧಾರಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಈ ಹುದ್ದೆಗೆ ಅಭ್ಯರ್ಥಿಗಳು ಫೆಬ್ರವರಿ 10ರಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಮಾರ್ಚ್​ 1 ಆಗಿದೆ. ಈ ಹುದ್ದೆ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಅಭ್ಯರ್ಥಿಗಳು isro.gov.in ಈ ವೆಬ್​ಸೈಟ್​​ಗೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ: ರಕ್ಷಣಾ ಇಲಾಖೆಯಲ್ಲಿ ನೇಮಕಾತಿ; ಎಸ್​ಎಸ್​ಎಲ್​ಸಿ ಪಾಸಾದವರಿಗೆ ಅವಕಾಶ

ABOUT THE AUTHOR

...view details