ಬೆಂಗಳೂರು: ಇಂಡಿಯನ್ ಮರ್ಚೆಂಟ್ ನೇವಿಯಲ್ಲಿ 1800 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. 10ನೇ ತರಗತಿ ವಿದ್ಯಾಭ್ಯಾಸ ಪೂರೈಸಿರುವ ಅಭ್ಯರ್ಥಿಗಳ ಅರ್ಹತೆ ಅನುಸಾರ ಹುದ್ದೆಗಳ ನೇಮಕಾತಿ ನಡೆಯಲಿದೆ.
ಹುದ್ದೆ ವಿವರ : ಒಟ್ಟು ಹುದ್ದೆ 1800 ಆಗಿದ್ದು, ಯಾವ್ಯಾವ ಹುದ್ದೆ ಎಂಬ ಮಾಹಿತಿ ಇಲ್ಲಿದೆ.
- ಡೆಕ್ ರೇಟಿಂಗ್- 399
- ಎಂಜಿನ್ ರೇಟಿಂಗ್- 201
- ಸೀಮ್ಯಾನ್ - 196
- ಎಲೆಕ್ಟ್ರಿಷಿಯನ್ - 290
- ವೆಲ್ಡರ್/ ಹೆಲ್ಪರ್ - 60
- ಮೆಸ್ ಬಾಯ್ - 188
- ಕುಕ್ - 466
ವಿದ್ಯಾಭ್ಯಾಸ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ, ಪಿಯುಸಿ ಅಥವಾ ಐಟಿಐ ಪೂರ್ಣಗೊಳಿಸಿರಬೇಕು.
ವಯೋಮಿತಿ: ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 17.5 ಆಗಿದ್ದು, ಗರಿಷ್ಠ 27 ವರ್ಷ ಆಗಿದೆ.