ಕರ್ನಾಟಕ

karnataka

ETV Bharat / education-and-career

ಕೋಸ್ಟ್​ ಗಾರ್ಡ್​ ನೇಮಕಾತಿ: ನಾವಿಕ್​, ಮೆಕಾನಿಕ್​ ಹುದ್ದೆಗೆ ಅರ್ಜಿ ದಿನಾಂಕ ವಿಸ್ತರಣೆ - Indian Coast Guard Recruitment - INDIAN COAST GUARD RECRUITMENT

ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಜುಲೈ 3 ಕಡೇಯ ದಿನವಾಗಿತ್ತು. ಇದೀಗ ಜುಲೈ 10ರವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ.

Indian Coast Guard Recruitment date extended till july 10
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Jul 9, 2024, 2:33 PM IST

ಬೆಂಗಳೂರು: ಭಾರತದ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಡಿಯನ್ ಕೋಸ್ಟ್ ಗಾರ್ಡ್​​ ನಾವಿಕ್​ ಮತ್ತು ಮೆಕಾನಿಕಲ್​ ಹುದ್ದೆಗಳ ಅರ್ಜಿ ಸಲ್ಲಿಕೆಗೆ ದಿನಾಂಕ ವಿಸ್ತರಿಸಲಾಗಿದೆ. ಇದೀಗ ಜುಲೈ 10ರವರೆಗೆ ಅರ್ಜಿ ಸಲ್ಲಿಕೆ ಮಾಡಬಹುದು.

ಹುದ್ದೆಗಳ ವಿವರ:

ನಾವಿಕ್ (ಸಾಮಾನ್ಯ ಕರ್ತವ್ಯ): 260 ಹುದ್ದೆ

ಪ್ರದೇಶ/ವಲಯವಾರು ಹುದ್ದೆಗಳ ವಿವರಗಳು: ಉತ್ತರ- 77; ಪಶ್ಚಿಮ- 66; ಈಶಾನ್ಯ- 68; ಪೂರ್ವ- 34; ವಾಯುವ್ಯ- 12, ಅಂಡಮಾನ್ ಮತ್ತು ನಿಕೋಬಾರ್- 03.

ಮೆಕ್ಯಾನಿಕ್ : 60 ಹುದ್ದೆಗಳು

ಮೆಕ್ಯಾನಿಕಲ್/ ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್/ ದೂರಸಂಪರ್ಕ (ರೇಡಿಯೋ/ ಪವರ್)

ವಿದ್ಯಾರ್ಹತೆ:ನಾವಿಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12ನೇ ತರಗತಿ (ಗಣಿತ/ಭೌತಶಾಸ್ತ್ರ) ತೇರ್ಗಡೆಯಾಗಿರಬೇಕು.

ಮೆಕ್ಯಾನಿಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾ ವಿಭಾಗದಲ್ಲಿ ಡಿಪ್ಲೊಮಾ ಜೊತೆಗೆ 10ನೇ ತರಗತಿ, 12ನೇ ತರಗತಿ ಉತ್ತೀರ್ಣರಾಗಿರಬೇಕು.

ವಯೋಮಿತಿ: ಅಭ್ಯರ್ಥಿಗಳ ವಯಸ್ಸು 18 ರಿಂದ 22 ವರ್ಷಗಳ ನಡುವೆ ಇರಬೇಕು. ನಿಖರವಾಗಿ ಹೇಳುವುದಾದರೆ, ಅವರು ಮಾರ್ಚ್ 1, 2003 ಮತ್ತು ಫೆಬ್ರವರಿ 28, 2007 ರ ನಡುವೆ ಜನಿಸಿರಬೇಕು. ಆದರೆ ಸರ್ಕಾರದ ನಿಯಮಗಳ ಪ್ರಕಾರ, ಒಬಿಸಿ ವರ್ಗದವರಿಗೆ 3 ವರ್ಷ ಮತ್ತು ಎಸ್‌ಟಿ ಮತ್ತು ಎಸ್‌ಸಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.

ಅರ್ಜಿ ಶುಲ್ಕ: ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ರೂ.300 ಪಾವತಿಸಬೇಕು. ಎಸ್‌ಟಿ ಮತ್ತು ಎಸ್‌ಸಿ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

ವೇತನ:ನಾವಿಕ್ ಹುದ್ದೆಗಳಿಗೆ ಮಾಸಿಕ ರೂ.21,700 ವೇತನ. ಮೆಕ್ಯಾನಿಕ್ ಹುದ್ದೆಗಳಿಗೆ ಮಾಸಿಕ ರೂ.29,200 ವೇತನ ನಿಗದಿಸಲಾಗಿದೆ

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳಿಗೆ ಮೊದಲು ಹಂತ-1, ಹಂತ-2, ಹಂತ-3, ಹಂತ-4 ಪರೀಕ್ಷೆಗಳನ್ನು ನಡೆಸಲಾಗುವುದು. ಇವುಗಳಲ್ಲಿ ಉತ್ತೀರ್ಣರಾದವರಿಗೆ ದೈಹಿಕ ಸಹಿಷ್ಣುತೆ ಪರೀಕ್ಷೆಗಳು ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ನಂತರ ಪ್ರಮಾಣಪತ್ರಗಳನ್ನು ಪರಿಶೀಲಿಸಿ ಅರ್ಹ ಅಭ್ಯರ್ಥಿಗಳನ್ನು ನಾವಿಕ್ ಮತ್ತು ಮೆಕ್ಯಾನಿಕ್ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

ಈ ಕುರಿತ ಹೆಚ್ಚಿನ ಮಾಹಿತಿಗೆ indiancoastguard.gov.inಭೇಟಿ ನೀಡಿ.

ಇದನ್ನೂ ಓದಿ: ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದಲ್ಲಿ ನೇಮಕಾತಿ: ಬಿಇ ಪದವೀಧರರಿಗೆ ಉದ್ಯೋಗಾವಕಾಶ

ABOUT THE AUTHOR

...view details