ಹೈದರಾಬಾದ್: ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಬೇಕು ಎಂಬುದು ಅನೇಕ ಭಾರತೀಯ ವಿದ್ಯಾರ್ಥಿಗಳ ಕನಸಾಗಿರುತ್ತದೆ. ಇದಕ್ಕೆ ಪ್ರಮುಖ ಆಯ್ಕೆ ಸ್ಥಾನವಾಗಿರುವುದು ಅಮೆರಿಕ. ಆದರೆ, ಇತ್ತೀಚಿನ ರಾಜಕೀಯ ಬದಲಾವಣೆ ಮತ್ತು ವಲಸೆ ನೀತಿಗಳು ವೀಸಾ ನಿಯಮಾವಳಿ, ಉದ್ಯೋಗ ಅವಕಾಶ ಮತ್ತು ಅರೆಕಾಲಿಕ ಕೆಲಸದ ಬಗ್ಗೆ ಕಾಳಜಿ ಮೂಡಿಸಿದೆ. ಈ ಎಲ್ಲ ಅನಿಶ್ಚಿತತೆ ಹೊರತಾಗಿ ವಿದೇಶದಲ್ಲಿ ಓದಲು ಇದು ಸೂಕ್ತ ಸಮಯ ಎನ್ನುತ್ತಾರೆ ತಜ್ಞರು.
ಅನುಮಾನಗಳಿಗೆ ತೆರೆ: ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವಧಿಯಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಅಲ್ಲಿ ಪೂರೈಸಲು ಸವಾಲು ಎದುರಿಸಬಹುದು. ಅವರ ವೀಸಾ ಮತ್ತು ಉದ್ಯೋಗದಲ್ಲಿ ಮಿತಿಗಳು ಎದುರಿಸಬಹುದು ಎಂಬ ಊಹಾಪೋಹ ಹರಡಿದೆ. ನಿಯಮಗಳು ಬಿಗಿಯಾಗಿರುವುದು ಸಹಜ. ಸರಿಯಾದ ದಾಖಲೀಕರಣವಿಲ್ಲದೇ ಇರುವವರು ಪ್ರಾಥಮಿಕವಾಗಿ ಸಮಸ್ಯೆ ಎದುರಿಸಬಹುದು. ಆದರೆ, ಸರಿಯಾದ ವೀಸಾ ಮತ್ತು ಕಾನೂನಾತ್ಮಕ ಅನುಮತಿಗಳಿದ್ದವರಿಗೆ ಯಾವ ಸಮಸ್ಯೆ ಅಥವಾ ತೊಂದರೆ ಎದುರಾಗುವುದಿಲ್ಲ.
ಸರ್ಕಾರಿ ದತ್ತಾಂಶದ ಪ್ರಕಾರ, ಕಳೆದ ಐದು ವರ್ಷದಲ್ಲಿ ಭಾರತದಿಂದ ವಿದೇಶಕ್ಕೆ ಶಿಕ್ಷಣ ಪಡೆಯುವ ಉದ್ದೇಶದಿಂದ ಹೋಗುವವರ ಸಂಖ್ಯೆ ಶೇ 50ರಷ್ಟು ಹೆಚ್ಚಿದೆ. 2024ರಲ್ಲಿ ಸರಿಸುಮಾರು 9 ಲಕ್ಷ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ವಿದೇಶ ಪ್ರಯಾಣ ಬೆಳೆಸಿದ್ದಾರೆ. ಇದರಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ ನಂತರದ ಸ್ಥಾನದಲ್ಲಿ ಕೆನಡಾ, ಯುಕೆ ಮತ್ತು ಆಸ್ಟ್ರೇಲಿಯಾ ಇದೆ.
ವಿದೇಶದಲ್ಲಿ ಓದು ಏಕೆ?
- ಜಾಗತಿಕ ವೇದಿಕೆ ಜೊತೆಗೆ ಉದ್ಯೋಗಾವಕಾಶ
- ಮೌಲ್ಯಯುತ ಔದ್ಯೋಗಿಕ ನೆಟ್ವರ್ಕ್
- ಭಾಷಾ ಸುಲಲಿತತೆ ವೃದ್ದಿ
- ಹೊಸ ಪರಿಸರ ಅಳವಡಿಕೆಗೆ ಅನುಕೂಲ
- ಗಳಿಕ ಸಾಮರ್ಥ್ಯದ ಹೆಚ್ಚುವಿಕೆ
ಎದುರಾಗುವ ಸವಾಲುಗಳು ಯಾವುವು?
- ಹೆಚ್ಚಿನ ಟ್ಯೂಷನ್ ಶುಲ್ಕ ಮತ್ತು ಜೀವನ ವೆಚ್ಚ
- ಭಾಷಾ ತೊಡಕು
- ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹೊಂದಾಣಿಕೆ
ಅರೆಕಾಲಿಕ ಉದ್ಯೋಗದ ನೈಜತೆ: ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ವಿದೇಶಿ ನೆಲದಲ್ಲಿ ತಮ್ಮ ಶೈಕ್ಷಣಿಕ ಜೀವನದ ಜೊತೆಗೆ ಅಲ್ಲಿನ ಜೀವನ ಶೈಲಿ ವೆಚ್ಚಕ್ಕೆ ಹೊಂದಾಣಿಕೆಗಾಗಿ ಚಿಲ್ಲರೆ, ಅತಿಥ್ಯ, ಶಿಕ್ಷಣ, ಗ್ರಾಹಕ ಸೇವೆ ಮತ್ತು ಡೆಲಿವರಿ ಸೇವೆಯಲ್ಲಿ ಅರೆಕಾಲಿಕ ಉದ್ಯೋಗ ನಿರ್ವಹಣೆ ಮಾಡುತ್ತಾರೆ. ಆದರೆ, ಇದೀಗ ವಲಸಿಗ ನೀತಿಯಲ್ಲಿ ಕಟ್ಟುನಿಟ್ಟಾದ ಕ್ರಮ ತೆಗೆದುಕೊಂಡಿರುವುದರಿಂದ ಈ ಅರೆಕಾಲಿಕ ಉದ್ಯೋಗ ನಿರ್ವಹಣೆ ಸವಾಲಿನಿಂದ ಕೂಡಿರುವ ಸಾಧ್ಯತೆ ಇದೆ.
ಈ ಅಂಶದ ಬಗ್ಗೆ ಇರಲಿ ಗಮನ
ಶಿಕ್ಷಣಕ್ಕೆ ಆದ್ಯತೆ: ಈ ಹಿಂದೆ ಪದವಿ ಪಡೆಯುವ ವೇಳೆ ವಲಸಿಗ ವಿದ್ಯಾರ್ಥಿಗಳು ಅರೆಕಾಲಿಕ ಉದ್ಯೋಗ ನಿರ್ವಹಣೆ ಮಾಡುತ್ತಿದ್ದರು. ಆದಾಗ್ಯೂ, ಇದೀಗ ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಜಾರಿಯಾಗಿದ್ದು, ವಿದ್ಯಾರ್ಥಿಗಳು ತಮ್ಮ ಕೋರ್ಸ್ ಮೇಲೆ ಹೆಚ್ಚಿನ ಗಮನ ಹರಿಸಬೇಕಿದೆ. ಇದರಿಂದಾಗಿ ಅವರು ಶೈಕ್ಷಣಿಕ ಜೀವನದಲ್ಲಿ ಉತ್ತಮ ಪ್ರದರ್ಶನ ನೀಡಿ ಪದವಿ ಬಳಿಕ ಒಳ್ಳೆಯ ಉದ್ಯೋಗಾವಕಾಶ ಪಡೆಯಬಹುದು