ಕರ್ನಾಟಕ

karnataka

ETV Bharat / education-and-career

'10ನೇ' ಕ್ಲಾಸ್​​ ಪಾಸ್​ ಆದವರಿಗೆ ಗುಡ್ ನ್ಯೂಸ್: ಶಿಷ್ಯವೇತನಕ್ಕೆ ಈಗಲೇ ಅರ್ಜಿ ಹಾಕಿ - Vidyadhan Scholarship Apply Process

Vidyadhan Scholarship: ಈಗ ಓದುವುದು ದುಬಾರಿಯಾಗಿ ಬಿಟ್ಟಿದೆ. ಬಡ ಮತ್ತು ಮಧ್ಯಮ ವರ್ಗದ ಜನರು ಕಾರ್ಪೊರೇಟ್ ಶಿಕ್ಷಣದಿಂದ ದೂರ ಉಳಿಯಬೇಕಾದ ಪರಿಸ್ಥಿತಿ ಬಂದಿದೆ. ಈ ಕ್ರಮದಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳಿಗೆ ವಿದ್ಯಾದಾನ ಶಿಷ್ಯವೇತನ ಪರಿಹಾರವಾಗಿ ನಿಂತಿದೆ. ಸಂಪೂರ್ಣ ವಿವರಗಳನ್ನು ನೋಡೋಣ ಬನ್ನಿ..

SCHOLARSHIP AMOUNT  REQUIRED DOCUMENTS  SELECTION PROCESS  APPLY FOR VIDYADHAN SCHOLARSHIP
ಶಿಷ್ಯವೇತನಕ್ಕೆ ಅರ್ಜಿ ಹಾಕಿ (ಕೃಪೆ: ETV Bharat Telugu)

By ETV Bharat Karnataka Team

Published : May 25, 2024, 6:34 PM IST

How to Apply for Vidyadhan Scholarship:ಎಷ್ಟೇ ಪ್ರತಿಭಾವಂತರಾದರೂ ಆರ್ಥಿಕ ಸ್ಥಿತಿ ಹದಗೆಟ್ಟ ಮೇಲೆ ಅನೇಕ ವಿದ್ಯಾರ್ಥಿಗಳು ಶಿಕ್ಷಣವನ್ನು ಮಧ್ಯದಲ್ಲಿಯೇ ನಿಲ್ಲಿಸುತ್ತಾರೆ. ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಯಲ್ಲಿರಬೇಕು ಎಂಬ ಹಂಬಲವಿದ್ದರೂ ಅವರಿಗೆ ಬಡತನ ಅಡ್ಡಿಯಾಗಿರುತ್ತದೆ. ಅಂತಹವರಿಗೆ ಸರೋಜಿನಿ ದಾಮೋದರನ್ ಸಂಸ್ಥೆ ವಿದ್ಯಾರ್ಥಿ ವೇತನವನ್ನು ನೀಡುವುದಲ್ಲದೇ ಉನ್ನತ ವ್ಯಾಸಂಗ ಮಾಡಲು ಪ್ರೋತ್ಸಾಹಿಸುತ್ತದೆ. ಪ್ರತಿ ವರ್ಷ 10ನೇ ತರಗತಿಯಲ್ಲಿ ಅತ್ಯುತ್ತಮ ಪ್ರತಿಭೆ ತೋರಿದ ವಿದ್ಯಾರ್ಥಿಗಳಿಗೆ “ವಿದ್ಯಾದಾನ” ಹೆಸರಿನಲ್ಲಿ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿದೆ. ಇಂಟರ್ ಜೊತೆಗೆ ಉನ್ನತ ವ್ಯಾಸಂಗಕ್ಕೆ ಹೋಗುವ ವಿದ್ಯಾರ್ಥಿಗಳ ಮೆರಿಟ್ ಮತ್ತು ಕೋರ್ಸ್ ಆಧಾರದ ಮೇಲೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ವಿವಿಧ ರಾಜ್ಯಗಳ ವಿದ್ಯಾರ್ಥಿಗಳಿಗೆ:ಈ ಫೌಂಡೇಶನ್‌ನ ವಿದ್ಯಾದಾನ ಕಾರ್ಯಕ್ರಮದ ಮೂಲಕ, ಕರ್ನಾಟಕ ರಾಜ್ಯದ ಜೊತೆಗೆ ತೆಲುಗು ರಾಜ್ಯಗಳು, ಕೇರಳ, ತಮಿಳುನಾಡು, ಒಡಿಶಾ, ಗುಜರಾತ್, ಗೋವಾ, ಮಹಾರಾಷ್ಟ್ರ, ಲಡಾಖ್, ಪುದುಚೇರಿ, ದೆಹಲಿ, ಬಿಹಾರ, ಪಂಜಾಬ್, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಇತ್ಯಾದಿ ರಾಜ್ಯಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಒದಗಿಸುತ್ತದೆ. ಪ್ರಸ್ತುತ 8 ಸಾವಿರ ಮಂದಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.

ಅರ್ಹತೆಗಳು:

  • 10ನೇ ತರಗತಿಯಲ್ಲಿ ಶೇ.90 ಅಂಕ ಅಥವಾ 9 ಜಿಪಿಎ ಗ್ರೇಡ್​ನಲ್ಲಿ ತೇರ್ಗಡೆಯಾದವರು ಇವುಗಳನ್ನು ಪಡೆಯಲು ಅರ್ಹರು.
  • ಅಂಗವಿಕಲರಿಗೆ ಶೇ.75 ರಷ್ಟು ಅಂಕಗಳು ಅಥವಾ 7.5 GPA ಸಾಕು.
  • ಅಭ್ಯರ್ಥಿಗಳ ಕುಟುಂಬದ ಆದಾಯ ರೂ.2 ಲಕ್ಷಕ್ಕಿಂತ ಕಡಿಮೆ ಇರಬೇಕು.

ವಿದ್ಯಾರ್ಥಿವೇತನದ ಮೊತ್ತ:ಆಯ್ಕೆಯಾದ ಅಭ್ಯರ್ಥಿಗಳಿಗೆ ವರ್ಷಕ್ಕೆ ರೂ.10,000/- ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಅಲ್ಲದೇ, ಪ್ರತಿಭೆ ತೋರಿ ಉನ್ನತ ವ್ಯಾಸಂಗಕ್ಕೆ ಹೋಗುವ ಅಭ್ಯರ್ಥಿಗಳಿಗೆ ವರ್ಷಕ್ಕೆ ರೂ.10,000 ದಿಂದ ರೂ.75,000 ವರೆಗೂ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ: ಸ್ಕಾಲರ್‌ಶಿಪ್ ಅರ್ಜಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತದೆ ಮತ್ತು ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಮಾತ್ರ ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳಿಗೆ ಇ-ಮೇಲ್/SMS ಮೂಲಕ ಪರೀಕ್ಷಾ ಕೇಂದ್ರಗಳ ಬಗ್ಗೆ ತಿಳಿಸಲಾಗುವುದು.

ಪ್ರಮುಖ ದಿನಾಂಕಗಳು:

ಕರ್ನಾಟಕ: ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನಾಂಕವಾಗಿದೆ. ಜುಲೈ 28 ರಂದು ಸ್ಕ್ರೀನಿಂಗ್ ಟೆಸ್ಟ್ ನಡೆಯಲಿದೆ. ಬಳಿಕ 4ನೇ ಆಗಸ್ಟ್‌ನಿಂದ 31ನೇ ಆಗಸ್ಟ್ 2024ರ ವರೆಗೆ ಸಂದರ್ಶನ/ಪರೀಕ್ಷೆಗಳನ್ನು ನಿಗದಿಪಡಿಸಲಾಗುತ್ತದೆ. ಶಾರ್ಟ್‌ಲಿಸ್ಟ್ ಮಾಡಿದ ಪ್ರತಿಯೊಬ್ಬ ಅಭ್ಯರ್ಥಿಗೆ ನಿಖರವಾದ ದಿನಾಂಕ ಮತ್ತು ಸ್ಥಳವನ್ನು ತಿಳಿಸಲಾಗುತ್ತದೆ.

ತೆಲಂಗಾಣ:ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಜೂನ್ 15 ಕೊನೆಯ ದಿನಾಂಕವಾಗಿದೆ. ಜುಲೈ 7 ರಂದು ಆನ್‌ಲೈನ್ ಪರೀಕ್ಷೆಯೂ ನಡೆಯಲಿದೆ. ಆಯ್ಕೆಯಾದವರಿಗೆ ಆಗಸ್ಟ್ ಮೊದಲ ವಾರದಲ್ಲಿ ಸಂದರ್ಶನ ನಡೆಯಲಿದೆ.

ಆಂಧ್ರಪ್ರದೇಶ:ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಜೂನ್ 7 ಕೊನೆಯ ದಿನಾಂಕವಾಗಿದೆ. ಅಲ್ಲದೇ ಜೂನ್ 23 ರಂದು ಆನ್‌ಲೈನ್ ಪರೀಕ್ಷೆಯನ್ನು ನಡೆಸಲಾಗುವುದು. ಜುಲೈ ತಿಂಗಳಲ್ಲಿ ಆಯ್ಕೆಯಾದವರಿಗೆ ಸಂದರ್ಶನ ನಡೆಸಲಾಗುವುದು. ಇಂಟರ್​ ಕಾಲೇಜು ವಿವರಗಳು

ಅಪ್ಲಿಕೇಶನ್ ಸಲ್ಲಿಸುವ ವಿಧಾನ:

  • ವಿದ್ಯಾರ್ಥಿವೇತನಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ. ಅಲ್ಲದೆ ಅಭ್ಯರ್ಥಿಗಳು ವೈಯಕ್ತಿಕ ಇಮೇಲ್ ಐಡಿ ಹೊಂದಿರಬೇಕು.
  • ಮೊದಲಿಗೆ, ಪ್ರತಿಷ್ಠಾನದ ವೆಬ್‌ಸೈಟ್ www.vidyadhan.orgತೆರೆಯಬೇಕು.
  • ಹೋಮ್ ಪೇಜ್​ನಲ್ಲಿ Apply for Scholarships ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಹೊಸ ಪುಟ ತೆರೆದುಕೊಳ್ಳುತ್ತದೆ.
  • ಬಲಭಾಗದ ಕಾಲಂನಲ್ಲಿ ಈಗಾಗಲೇ ನೋಂದಾಯಿಸಲಾಗಿದೆ/ಲಾಗಿನ್ ಆಯ್ಕೆಯನ್ನು ಕ್ಲಿಕ್ ಮಾಡಿ.
  • ನೀವು ಈಗಾಗಲೇ ನೋಂದಾಯಿಸಿಕೊಂಡಿದ್ದರೆ ಆ ವಿವರಗಳೊಂದಿಗೆ ಲಾಗಿನ್ ಮಾಡಿ. ಇಲ್ಲದಿದ್ದರೆ ನೀವು ಹೊಸದಾಗಿ ಅರ್ಜಿ ಸಲ್ಲಿಸುವ ಬದಲು ರಿಜಿಸ್ಟರ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
  • ನಂತರ ರಿಜಿಸ್ಟರ್ ಆಸ್ ಸ್ಟೂಡೆಂಟ್ ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ರಿಜಿಸ್ಟರ್ ಆಯ್ಕೆಯನ್ನು ಕ್ಲಿಕ್ ಮಾಡಿ.
  • ನಂತರ ನಿಮ್ಮ ಹೆಸರು, ಇಮೇಲ್, ಪಾಸ್‌ವರ್ಡ್‌ನಂತಹ ವಿವರಗಳನ್ನು ನಮೂದಿಸಿ ಮತ್ತು ರಿಜಿಸ್ಟರ್ ಬಟನ್ ಕ್ಲಿಕ್ ಮಾಡಿ. ನಿಮ್ಮ ನೋಂದಣಿ ಪೂರ್ಣಗೊಂಡಿದೆ ಎಂದು ಸಂದೇಶ ಬರುತ್ತದೆ. ನಂತರ ಆ ವಿವರಗಳೊಂದಿಗೆ ಲಾಗಿನ್ ಮಾಡಿ.
  • ಆ ನಂತರ 10ನೇ ತರಗತಿಯ ಅಂಕಪಟ್ಟಿಯಂತೆ ಆಯಾ ಕಾಲಂಗಳಲ್ಲಿ ಹೆಸರು ಮತ್ತು ವಿಳಾಸ ತುಂಬಿ Apply Now ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದರೆ ಖಾತೆ ಆಕ್ಟಿವೇಟ್ ಆಗುತ್ತದೆ. ಲಿಂಕ್ ಅನ್ನು ನಿಮ್ಮ ವೈಯಕ್ತಿಕ ಇಮೇಲ್ ವಿಳಾಸಕ್ಕೆ ಕಳುಹಿಸಲಾಗುತ್ತದೆ.
  • ನಂತರ ಅಲ್ಲಿ ನೀಡಲಾದ ಸೂಚನೆಗಳ ಪ್ರಕಾರ ಅರ್ಜಿಯನ್ನು ಪೂರ್ಣಗೊಳಿಸಿ. ದಾಖಲೆಗಳು ಮತ್ತು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಅಪ್‌ಲೋಡ್ ಮಾಡಿ. ಎಡಿಟ್​ ಆಯ್ಕೆಯೂ ಇದೆ. ಅಂತಿಮವಾಗಿ, ನೀವು Submitಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಅಪ್ಲಿಕೇಶನ್ ಪೂರ್ಣಗೊಂಡಿದೆ ಎಂಬ ಅರ್ಥ.
  • ವಿದ್ಯಾದಾನ ವಿವರಗಳನ್ನು ಇ-ಮೇಲ್‌ಗೆ ಕಳುಹಿಸಲಾಗುವುದು. ಆದ್ದರಿಂದ ಅಭ್ಯರ್ಥಿಗಳು ನಿಯಮಿತವಾಗಿ ಮೇಲ್ ಅನ್ನು ಪರಿಶೀಲಿಸಬೇಕು.

ಓದಿ:ತೆಲುಗು ರಾಜ್ಯಗಳಲ್ಲಿ ಸಂಚಲನ ಮೂಡಿಸಿದ ಬೆಂಗಳೂರು ರೇವ್​ ಪಾರ್ಟಿ!; ನಮ್ಮ ರಾಜಧಾನಿಯೇ ಕೇಂದ್ರವಾಗಿದ್ದೇಕೆ? - Bengaluru Rave Party Case

ABOUT THE AUTHOR

...view details