ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ ಐಐಟಿ, ಎನ್ಐಟಿ ಮತ್ತು ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ಸ್ಥಳೀಯ ಶಿಕ್ಷಣ ಸಂಸ್ಥೆಗಳು (ಆರ್ಐಇ) ಸೇರಿದಂತೆ ದೇಶದ 64 ಸಂಸ್ಥೆಗಳಲ್ಲಿ ನಾಲ್ಕು ವರ್ಷದ ಸಮಗ್ರ ಶಿಕ್ಷಕರ ತರಬೇತಿ ಕೋರ್ಸ್‌ಗಳನ್ನು ಅಭ್ಯರ್ಥಿಗಳಿಗೆ ಒದಗಿಸಲಾಗುತ್ತಿದೆ.
ಈ ಬಗ್ಗೆ ಮಾತನಾಡಿರುವ ಶಿಕ್ಷಣ ತಜ್ಞ ದೇವ್ ಶರ್ಮಾ, "ಎನ್ಇಪಿ 2020 ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಅನೇಕ ಬದಲಾವಣೆಗಳನ್ನು ತಂದಿದೆ. ಇದರಲ್ಲಿ ಐಪಿಇಪಿ ಕೂಡ ಒಂದು" ಎಂದರು.
ಯಾರು ಪರೀಕ್ಷೆ ಬರೆಯಬಹುದು?: ಐಟಿಇಪಿಯನ್ನು ರಾಷ್ಟ್ರೀಯ ಸಾಮಾನ್ಯ ಪ್ರವೇಶ ಪರೀಕ್ಷೆ (ಎನ್ಸಿಇಟಿ) ಮೂಲಕ ಎನ್ಟಿಎ ನಡೆಸುತ್ತದೆ. ಎನ್ಸಿಇಟಿ-2024 ಅನ್ನು ಜೂನ್ 12ರಂದು 13 ಭಾಷೆಗಳಲ್ಲಿ ನಡೆಸಲಾಗುತ್ತದೆ. ಈ ಪರೀಕ್ಷೆ ಸಂಪೂರ್ಣವಾಗಿ ಕಂಪ್ಯೂಟರ್ ಆಧಾರಿತ. ಅರ್ಜಿ ಸಲ್ಲಿಸಲು ಏಪ್ರಿಲ್ 30 ಕಡೇ ದಿನಾಂಕ. 12ನೇ ತರಗತಿ ಅಥವಾ ಪಿಯುಸಿ ಪಾಸ್ ಆಗಿರುವ ಅಥವಾ ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಪರೀಕ್ಷೆ ಎದುರಿಸಬಹುದು. ಬಹು ಆಯ್ಕೆ ಪ್ರಶ್ನೆಗಳು (ಎಂಸಿಕ್ಯೂ) ಮಾದರಿಯಲ್ಲಿ 3 ಗಂಟೆ ಪರೀಕ್ಷೆ ನಡೆಯಲಿದೆ.
ಪ್ರಶ್ನೆ ಪತ್ರಿಕೆ:ಪ್ರಶ್ನೆ ಪತ್ರಿಕೆಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಒಂದು ಭಾಷೆ, ವಿಷಯ, ಟೀಚಿಂಗ್ ಆಪ್ಟಿಟ್ಯೂಡ್ ಮತ್ತು ಸಾಮಾನ್ಯ ಪರೀಕ್ಷೆ.