ಬೆಂಗಳೂರು: ಕಾಫಿ ಬೋರ್ಡ್ನಲ್ಲಿ ಖಾಲಿ ಇರುವ ಗ್ರಾಫಿಕ್ ಡಿಸೈನರ್ ಮತ್ತು ಕಂಟೆಂಟ್ ಕ್ರಿಯೇಟರ್ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ. 11 ತಿಂಗಳ ಒಪ್ಪಂದದ ಅವಧಿಗೆ ಈ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಈ ಹುದ್ದೆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಹುದ್ದೆ ವಿವರ: ಒಂದು ಗ್ರಾಫಿಕ್ ಡಿಸೈನರ್, ಒಂದು ಕಂಟೆಟ್ ಕ್ರಿಯೆಟರ್
ವಿದ್ಯಾರ್ಹತೆ:
ಗ್ರಾಫಿಕ್ ಡಿಸೈನರ್: ಗ್ರಾಫಿಕ್ ಡಿಸೈನ್, ವಿಷುಯಲ್ ಕಮ್ಯೂನಿಕೇಷನ್, ಫೈನ್ ಆರ್ಟ್ಸ್ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಪದವಿ ಅಥವಾ ಡಿಪ್ಲೊಮಾ
ಕಂಟೆಂಟ್ ಕ್ರಿಯೇಟರ್ : ಅಭ್ಯರ್ಥಿಗಳು ಸಮೂಹ ಮಾಧ್ಯಮ, ಪತ್ರಿಕೋದ್ಯಮ, ಮಾರ್ಕೆಟಿಂಗ್, ಸಾರ್ವಜನಿಕ ಸಂಬಂಧದಲ್ಲಿ ಪದವಿಯನ್ನು ಹೊಂದಿರಬೇಕು.
ವೇತನ:ಮಾಸಿಕ 30 ಸಾವಿರ ವೇತನ ನಿಗದಿಸಲಾಗಿದೆ.
ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಎರಡು ವರ್ಷ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರಬೇಕು.
ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಇಮೇಲ್ ಅಧಿಸೂಚನೆಯಲ್ಲಿ ನೀಡಲಾಗಿರುವ ಗೂಗಲ್ ಲಿಂಕ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಕಡೇಯ ದಿನ ಸೆಪ್ಟೆಂಬರ್ 9 ಆಗಿದೆ. ಈ ಹುದ್ದೆಗಳಿಗೆ ಯಾವುದೇ ಅರ್ಜಿ ಶುಲ್ಕ ನಿಗದಿಸಿಲ್ಲ. ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು
ಈ ಹುದ್ದೆ ಕುರಿತ ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು coffeeboard.gov.inಇಲ್ಲಿಗೆ ಭೇಟಿ ನೀಡಬಹುದಾಗಿದೆ.
ಹೆದ್ದಾರಿ ಪ್ರಾಧಿಕಾರದಲ್ಲಿ ಹುದ್ದೆ:ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಖಾಲಿ ಇರುವ ಜನರಲ್ ಮ್ಯಾನೇರ್ ಮತ್ತು ಡೆಪ್ಯೂಟಿ ಜನರಲ್ ಮ್ಯಾನೇಜರ್ ಮತ್ತು ಮ್ಯಾನೇಜರ್ ಟೆಕ್ನಿಕಲ್ ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ಹುದ್ದೆಗಳನ್ನು ಡೆಪ್ಯೂಟೆಷನ್ (ನಿಯೋಜನೆ) ಮೇರೆಗೆ ಭರ್ತಿ ಮಾಡಲಾಗುತ್ತಿದ್ದು, ಅಭ್ಯರ್ಥಿಗಳು ರಾಜ್ಯ ಅಥವಾ ರಾಷ್ಟ್ರೀಯ ಹೆದ್ದಾರಿಯಲ್ಲಿ 9 ವರ್ಷ ಹುದ್ದೆ ನಿರ್ವಹಿಸಿದ ಅನುಭವ ಹೊಂದಿರಬೇಕು.
ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೇಯ ದಿನಾಂಕ ಸೆಪ್ಟೆಂಬರ್ 23 ಆಗಿದೆ. ಈ ಹುದ್ದೆ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆnhai.gov.in ಭೇಟಿ ನೀಡಿ.
ಇದನ್ನೂ ಓದಿ:RRB ನೇಮಕಾತಿ: 14,298 ತಾಂತ್ರಿಕ ಹುದ್ದೆಗಳ ಭರ್ತಿಗೆ ಅರ್ಜಿಗೆ ಆಹ್ವಾನ