ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹವಾಮಾನ ಕ್ರಿಯಾ ಯೋಜನೆಗೆ ಫೇಲೋಶಿಪ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಒಂದು ವರ್ಷದ ಅವಧಿಗೆ ಈ ಹುದ್ದೆ ನೇಮಕಾತಿ ನಡೆಸಲಾಗುವುದು. ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಹುದ್ದೆ ವಿವರ: ಒಟ್ಟು 8 ಜೂನಿಯರ್ ಫೇಲೋ ಭರ್ತಿಗೆ ಕ್ರಮ
- ಪಾರ್ಟನರ್ ಎಂಗೇಜ್ಮೆಂಟ್ ಅಂಡ್ ಸೆಲ್ ಕೊರ್ಡಿನೇಷನ್ -1
- ಕಮ್ಯೂನಿಕೇಷನ್ ಅಂಡ್ ಔಟ್ರೀಚ್ - 1
- ಡೇಟಾ ಇನ್ನೊವೇಷನ್ -1
- ಲೋಕಲ್ ಕ್ಲೈಮೇಟ್ ಆಕ್ಷನ್ ಅಂಡ್ ಸಿವಿಲ್ ಎಂಗೇಜ್ಮೆಂಟ್ - 4
- ಸಿನೀಯರ್ ಫೇಲೋ- ಎಂಇಆರ್ ಬಡ್ಜೇಟಿಂಗ್ ಅಂಡ್ ಪ್ರಾಜೆಕ್ಟ್ ಪ್ರಿಪರೇಷನ್ - 1
ವಿದ್ಯಾರ್ಹತೆ: ಅಭ್ಯರ್ಥಿಗಳು ನಗರ ಯೋಜನೆ, ಆಡಳಿತ ಅಥವಾ ನಿರ್ವಹಣೆ, ಸಂವಹನ ಮತ್ತು ಪತ್ರಿಕೋದ್ಯಮ, ಸಾರ್ವಜನಿಕ ಸಂಪರ್ಕ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಹಾಗೂ ಬಿಬಿಎಂಪಿ ನಿಗದಿತ ಕಾರ್ಯಾನುಭವಗಳನ್ನು ಹೊಂದಿರಬೇಕು.
ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. https://apps.bbmpgov.in/bcap ಇಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಆಯ್ಕೆ ಪ್ರಕ್ರಿಯೆ: ಸ್ಪೆಷಲ್ ಕಮಿಷನರ್ (ಫಾರೆಸ್ಟ್, ಎನ್ವಿರಾನ್ಮೆಂಟ್ ಅಂಡ್ ಕ್ಲೈಮೇಟ್ ಚೇಂಜ್) ಒಳಗೊಂಡ ಪ್ಯಾನೆಲ್ ಈ ನೇಮಕಾತಿ ನಡೆಸಲಿದೆ. ಮೊದಲ ಸುತ್ತಿನಲ್ಲಿ ಅರ್ಹತಾ ಮಾನದಂಡಗಳ ಆಧಾರದಲ್ಲಿ ಅರ್ಹತೆಗಳ ಮೇಲೆ ಆಯ್ಕೆ ನಡೆಸಲಾಗುವುದು. ಎರಡನೇ ಸುತ್ತಿನಲ್ಲಿ ಟೆಕ್ನಿಕಲ್ ಮತ್ತು ಭಾಷಾ ಕೌಶಲ್ಯದ ಕುರಿತು ಪರೀಕ್ಷೆ ಇರಲಿದೆ. ಅಂತಿಮ ಸುತ್ತಿನಲ್ಲಿ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.
ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಕಡೇಯ ದಿನಾಂಕ ಆಗಸ್ಟ್ 6 ಆಗಿದೆ. ಅಭ್ಯರ್ಥಿಗಳು ಈ ಹುದ್ದೆ ನೇಮಕಾತಿ ಅಥವಾ ಅರ್ಜಿ ಸಲ್ಲಿಕೆ ಸಂಬಂಧ ಹೆಚ್ಚಿನ ಮಾಹಿತಿಗೆ specialcommissionerfeccbbmp@gmail.com ಇಮೇಲ್ಗೆ ಸಂಪರ್ಕಿಸಬಹುದಾಗಿದೆ.
ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ನೇಮಕಾತಿ; ಅರ್ಜಿ ಸಲ್ಲಿಸಲು ಇನ್ನೆರಡೇ ದಿನ ಬಾಕಿ