ರಾಮನಗರ: ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆ ವತಿಯಿಂದ ರೆಗ್ಯುಲರ್ ಪ್ರೋಗ್ರಾಂ ಮತ್ತು ಟೊಯೋಟಾ ಕೌಶಲ್ಯ ಕಾರ್ಯಕ್ರಮಗಳಿಗೆ 2024ನೇ ಸಾಲಿನ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಗ್ರಾಮೀಣ ಪ್ರದೇಶದ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ದೊರೆಯಲಿದೆ. ತರಬೇತಿ ಬಳಿಕ ಗ್ರಾಮೀಣ ವಿದ್ಯಾರ್ಥಿಗಳು ನುರಿತ ತಂತ್ರಜ್ಞರಾಗಿ ವೃತ್ತಿಜೀವನ ಆರಂಭಿಸಬಹುದಾಗಿದೆ.
ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆ (ETV Bharat) ಟಿಟಿಟಿಐ (ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆ) ರೆಗ್ಯುಲರ್ ಪ್ರೋಗ್ರಾಂ ಮೂರು ವರ್ಷಗಳ ವಸತಿ ಕೋರ್ಸ್ ಮೂಲಕ ಸಮಗ್ರ ತರಬೇತಿಯನ್ನು ನೀಡುತ್ತದೆ. ಟೊಯೋಟಾ ಕೌಶಲ್ಯ ಕಾರ್ಯಕ್ರಮದ ಜೊತೆಗೆ ಕೌಶಲ್ಯ, ಜ್ಞಾನ ಮತ್ತು ನಡವಳಿಕೆ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಲಾಗಿದೆ. ಇದು ಉತ್ಪಾದನಾ ಉದ್ಯಮಕ್ಕೆ ನಿರ್ಣಾಯಕವಾದ ಕೌಶಲ್ಯಗಳೊಂದಿಗೆ ಯುವಕರನ್ನು ಸಜ್ಜುಗೊಳಿಸಲು ವಿನ್ಯಾಸಗೊಳಿಸಲಾದ ಎರಡು ವರ್ಷಗಳ ವಸತಿ ಕೋರ್ಸ್ ಇದಾಗಿದೆ.
ತರಬೇತಿಯಲ್ಲಿ ನಿರತರಾದ ಸಿಬ್ಬಂದಿ (ETV Bharat) ಟಿಕೆಎಂನ ಹಣಕಾಸು ಮತ್ತು ಆಡಳಿತದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಜಿ.ಶಂಕರ್ ಮಾತನಾಡಿ, ಟಿಟಿಟಿಐ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಗ್ರಾಮೀಣ ಯುವಕರನ್ನು ಅದರಲ್ಲೂ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ವಿಶ್ವದರ್ಜೆಯ ಸ್ಪರ್ಧಾತ್ಮಕ ತಂತ್ರಜ್ಞರನ್ನಾಗಿ ಈ ತರಬೇತಿ ರೂಪಿಸುತ್ತದೆ. ಇದರಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ಭಾರತ, ಜಪಾನ್ ಮತ್ತು ಮಧ್ಯಪ್ರಾಚ್ಯ ದೇಶಗಳು ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ರಾಷ್ಟ್ರೀಯ ಕೌಶಲ್ಯ ಸ್ಪರ್ಧೆ ಮತ್ತು ವಿಶ್ವ ಕೌಶಲ್ಯ ಸ್ಪರ್ಧೆಯಂತಹ ಪ್ರತಿಷ್ಠಿತ ಸ್ಪರ್ಧೆಗಳಲ್ಲಿ ಪ್ರಶಂಸನೀಯ ಸಾಧನೆಗಳನ್ನು ಮಾಡಿದ್ದಾರೆ ಎಂದರು.
ಟಿಟಿಟಿಐ ಇತ್ತೀಚೆಗೆ ತನ್ನ ದಾಖಲಾತಿ ಸಮಾರ್ಥ್ಯವನ್ನು 600 ರಿಂದ 1200ಕ್ಕೆ ದ್ವಿಗುಣಗೊಳಿಸಿದೆ. ಇದರಲ್ಲಿ 600 ಮಹಿಳಾ ವಿದ್ಯಾರ್ಥಿಗಳು ಸೇರಲಿದ್ದಾರೆ. ಅರ್ಜಿ ಸಲ್ಲಿಕೆ, ಅರ್ಜಿ ಸಲ್ಲಿಕೆ ಕೊನೆ ದಿನ, ಮಾನದಂಡ, ಕೋರ್ಸ್ ವಿವರ, ಪರೀಕ್ಷೆ ವಿಧಾನ, ಪರೀಕ್ಷಾ ಕೇಂದ್ರಗಳು, ವಿದ್ಯಾರ್ಹತೆ, ವಯೋಮಿತಿ ಸೇರಿದಂತೆ ಹೆಚ್ಚಿನ ಮಾಹಿತಿಗೆ https://forms.office.com/r/UxSGWqBcGU ಈ ಲಿಂಕ್ಗೆ ಭೇಟಿ ನೀಡಿ ಮತ್ತು ನಿಮ್ಮ ಹೆಸರನ್ನು ನೋಂದಾಯಿಸಬಹುದು.
ಇದನ್ನೂ ಓದಿ: ಮೇ 26ಕ್ಕೆ JEE Advanced: ಪ್ರವೇಶ ಪತ್ರ ಹೀಗೆ ಡೌನ್ಲೋಡ್ ಮಾಡಿ: ಈ ಬಾರಿ ಏನೆಲ್ಲಾ ನಿಯಮ, ಯಾವುದಕ್ಕೆಲ್ಲಾ ಇಲ್ಲ ಅವಕಾಶ? - How to download admit card