ಬೆಂಗಳೂರು: ಸೇನೆ ಸೇರಿ ರಕ್ಷಣಾ ಇಲಾಖೆಯಲ್ಲಿ ಸೇವೆ ಸಲ್ಲಿಕೆ ಮಾಡಲು ಪ್ರತಿಯೊಬ್ಬ ನಾಗರಿಕರಿಗೆ ಅವಕಾಶ ನೀಡುವ ಉದ್ದೇಶದಿಂದ ಅಗ್ನಿಪಥ್ ಎಂಬ ವಿಶೇಷ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಅಗ್ನಿಪಥ್ ಯೋಜನೆ ಮೂಲಕ ಭಾರತೀಯ ನೌಕಪಡೆಯಲ್ಲಿ ಅಗ್ನಿ ವೀರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಆಯ್ಕೆಯಾಗುವ ಮೂಲಕ ಅಭ್ಯರ್ಥಿಗಳು ನೌಕಪಡೆಯಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಕೆ, ವೇತನ, ಆಯ್ಕೆ ಪ್ರಕ್ರಿಯೆ ಕುರಿತ ಸಂಪೂರ್ಣ ಡಿಟೇಲ್ಸ್ ಈ ಕೆಳ ಕಂಡಂತಿದೆ
ಹುದ್ದೆಗಳ ವಿವರ: ಅವಿವಾಹಿತ ಯುವಕ/ಯುವತಿಯರು ಅಗ್ನಿವೀರ್ ಹುದ್ದೆಯ ನೇಮಕಾತಿಯಲ್ಲಿ ಪಾಲ್ಗೊಳ್ಳಬಹುದು. ಎಷ್ಟು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂಬ ನಿರ್ದಿಷ್ಟ ಸಂಖ್ಯೆಯನ್ನು ಅಧಿಸೂಚನೆಯಲ್ಲಿ ತಿಳಿಸಿಲ್ಲ.
ವಿದ್ಯಾರ್ಹತೆ: ಪಿಯುಸಿ (ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲಿಷ್)ವಿಷಯಗಳಲ್ಲಿ ಅಧ್ಯಯನ ನಡೆಸಿರಬೇಕು. ಅಥವಾ ಮೂರು ವರ್ಷಗಳ ಡಿಪ್ಲೊಮಾ ಪದವಿ ಪಡೆದಿರಬೇಕು. ಪಿಯುಸಿ ಫಲಿತಾಂಶ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ವಯೋಮಿತಿ: ಅಭ್ಯರ್ಥಿಗಳು 2003 ನವೆಂಬರ್ 1 ಮತ್ತು 30 ಏಪ್ರಿಲ್ 2007ರ ನಡುವಿನಲ್ಲಿ ಜನಿಸಿರಬೇಕು.
ವೇತನ: ಈ ಹುದ್ದೆಗಳಿಗೆ ಮೊದಲ ವರ್ಷ 30,000, ಎರಡನೇ ವರ್ಷದಲ್ಲಿ 33,000, ಮೂರನೇ ವರ್ಷದಲ್ಲಿ 36,500 ನಾಲ್ಕನೇ ವರ್ಷ 40,000 ರೂ. ವೇತನವಿದೆ.