ನವದೆಹಲಿ:ಹೂಡಿಕೆ ವಿಚಾರದಲ್ಲಿ ಮಹಿಳೆಯರು ಹಿಂದೆ ಎಂಬ ಮಾತು ಇದೀಗ ಹಳತಾಗಿದೆ. ಇದೀಗ ಹೂಡಿಕೆ, ಷೇರುಗಳಲ್ಲಿ ಮಹಿಳಾ ಹೂಡಿಕೆದಾರರು ಸಕ್ರಿಯವಾಗಿ ತೊಡಗಿಕೊಳ್ಳುತ್ತಿದ್ದು, ವರ್ಷದಿಂದ ವರ್ಷಕ್ಕೆ ಅವರ ಬೆಳವಣಿಗೆಯಲ್ಲಿ ಏರಿಕೆ ಕಂಡಿದೆ. ಸಣ್ಣ ನಗರ ಮತ್ತು ಟೌನ್ಗಳಲ್ಲಿ ಕೂಡ ಮಹಿಳೆಯರು ಷೇರು ಮತ್ತು ಮ್ಯೂಚುವಲ್ ಫಂಡ್ ಹೂಡಿಕೆಗೆ ಮುಂದಾಗಿದ್ದು, ವರ್ಷದಿಂದ ವರ್ಷಕ್ಕೆ ಹೋಲಿಕೆ ಮಾಡಿದಾಗ 2024ರಲ್ಲಿ ಶೇ 2.5ರಷ್ಟು ಬೆಳವಣಿಗೆ ಕಂಡಿದೆ.
ನಗರ ಪ್ರದೇಶ ಸೇರಿದಂತೆ ಟೈರ್ 4 ಸಿಟಿಗಳಲ್ಲಿ ಕೂಡ ಮಹಿಳೆಯರು ಮ್ಯೂಚುವಲ್ ಫಂಡ್ ಮಾರುಕಟ್ಟೆಯಲ್ಲಿ ಭಾಗಿಯಾಗುತ್ತಿದ್ದು, ಶೇ 140ರಷ್ಟು ಏರಿಕೆ ಕಂಡಿದೆ ಎಂದು ಆನ್ಲೈನ್ ಬ್ರೋಕೆರೇಜ್ ಗ್ರೋವ್ ದತ್ತಾಂಶ ತಿಳಿಸಿದೆ.
2024ರಲ್ಲಿ ಎಲ್ಲಾ ವಲಯದಲ್ಲಿ ಅದ್ಭುತ ಬೆಳವಣಿಗೆ ಕಂಡಿದೆ. ಮಹಿಳಾ ಹೂಡಿಕೆದಾರರ ಬೆಳವಣಿಗೆ ದುಪ್ಪಟ್ಟಾಗಿದೆ ಎಂದು ಗ್ರೋವ್ ಸಿಇಒ ಮತ್ತು ಸಹ ಸಂಸ್ಥಾಪಕರಾದ ಲಲಿತ್ ಕೆಶ್ರೆ ತಿಳಿಸಿದ್ದಾರೆ.
ಮೆಟ್ರೋ, ಟೈರ್ , 2 ಮತ್ತು 3 ನಗರದಲ್ಲಿ ಮ್ಯೂಚುವಲ್ ಫಂಡ್ನಲ್ಲಿ ಮಹಿಳಾ ಭಾಗಿದಾರರ ಸಂಖ್ಯೆ ಶೇ 100ರಷ್ಟು ಬೆಳವಣಿಗೆ ಕಂಡಿದೆ. ಇದರಲ್ಲಿ ದೆಹಲಿ, ಮುಂಬೈ, ಕೋಲ್ಕತ್ತಾ (ಮೆಟ್ರೋ), ಪುಣೆ, ಲಕ್ನೋ, ನಾಗ್ಪುರ್, ಅಹಮದಾಬಾದ್ ಮತ್ತು ಜೈಪುರ್ (ಮೆಟ್ರೋ ಹೊರತಾಗಿ)ಗಳಲ್ಲಿ ಮಹಿಳಾ ಹೂಡಿಕೆದಾರರ ಸಂಖ್ಯೆ ಹೆಚ್ಚಿದೆ.
ಮಹಿಳೆಯರ ಎಸ್ಐಪಿ ಕೊಡುಗೆ ಕೂಡ ಹೆಚ್ಚಿದ್ದು, ಪುರುಷರಿಗಿಂತ ಶೇ 25ರಷ್ಟು ಹೆಚ್ಚಿದೆ. ಇದೀಗ ಐವರಲ್ಲಿ ನಾಲ್ವರು ಮಹಿಳೆರು ಎಸ್ಐಪಿ ಹೂಡಿಕೆ ಮಾಡುತ್ತಾರೆ ಎಂದು ದತ್ತಾಂಶ ತೋರಿಸಿದೆ.