ನವದೆಹಲಿ:ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಇಂದು ಕೇಂದ್ರದ ಮಧ್ಯಂತರ ಬಜೆಟ್ ಮಂಡಿಸಿದರು. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರಿಗೆ ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆ, ಲಕ್ಷದ್ವೀಪ ಸೇರಿದಂತೆ ಪ್ರವಾಸೋದ್ಯಮ ಅಭಿವೃದ್ಧಿ, ಸಾಮಾನ್ಯ ಬೋಗಿಗಳು ವಂದೇ ಭಾರತ್ ಮಾದರಿಯಲ್ಲಿ ಅಭಿವೃದ್ಧಿ, ಉಡಾನ್ ಯೋಜನೆ ಸಣ್ಣ ಸಣ್ಣ ನಗರಗಳಿಗೂ ವಿಸ್ತರಣೆ, 1 ಕೋಟಿ ಮನೆಗಳಿಗೆ ಸೌರ ವಿದ್ಯುತ್ ಸಂಪರ್ಕ ಸೇರಿದಂತೆ ಪ್ರಮುಖ ಅಂಶಗಳು ಈ ಬಾರಿಯ ಆಯವ್ಯಯದಲ್ಲಿವೆ.
ಕೇಂದ್ರ ಮಧ್ಯಂತರ ಬಜೆಟ್ ಮುಖ್ಯಾಂಶಗಳು - ಕೇಂದ್ರ ಮಧ್ಯಂತರ ಬಜೆಟ್ 2024
Union Budget 2024: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದಾಖಲೆಯ ಆರನೇ ಬಾರಿ ಕೇಂದ್ರ ಬಜೆಟ್ ಮಂಡಿಸಿದರು. ಈ ಮಧ್ಯಂತರ ಬಜೆಟ್ನ ಮುಖ್ಯಾಂಶಗಳು ಹೀಗಿವೆ.
Union Budget 2024
Published : Feb 1, 2024, 12:29 PM IST
|Updated : Feb 1, 2024, 12:43 PM IST
ಬಜೆಟ್ ಪ್ರಮುಖ ಅಂಶಗಳು:
- ಬಜೆಟ್ ಗಾತ್ರ: 47.66 ಲಕ್ಷ ಕೋಟಿ ರೂಪಾಯಿ
- ತೆರಿಗೆ ವಿನಾಯಿತಿ:7 ಲಕ್ಷ ರೂ. ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ. ನೇರ ಮತ್ತು ಪರೋಕ್ಷ ತೆರಿಗೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ.
- ರೈಲ್ವೆ ಇಲಾಖೆಗೆ ಬೂಸ್ಟರ್: 40 ಸಾವಿರ ಸಾಮಾನ್ಯ ಬೋಗಿಗಳು ವಂದೇ ಭಾರತ್ ಮಾದರಿಯಲ್ಲಿ ಅಭಿವೃದ್ಧಿ
- ಉಡಾಣ್ ಯೋಜನೆ: ಟೈರ್ 1 ಮತ್ತು ಟೈರ್ 2 ನಗರಗಳಿಗೂ ಯೋಜನೆ ವಿಸ್ತರಣೆ
- ಆರೋಗ್ಯ ಯೋಜನೆ ವಿಸ್ತರಣೆ: ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರಿಗೆ ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆ
- ಪ್ರಧಾನಮಂತ್ರಿ ಆವಾಸ್ ಗ್ರಾಮೀಣ ಯೋಜನೆಯಡಿ ನಿರ್ಮಿಸಲಾಗುತ್ತಿರುವ 3 ಕೋಟಿ ಮನೆ ಸದ್ಯದಲ್ಲೇ ಪೂರ್ಣ. ಮುಂದಿನ 5 ವರ್ಷಗಳಲ್ಲಿ ಇನ್ನೂ 2 ಕೋಟಿ ಮನೆಗಳ ನಿರ್ಮಾಣ ಗುರಿ
- 1 ಕೋಟಿ ಮನೆಗಳಿಗೆ ಉಚಿತ ಸೌರ ವಿದ್ಯುತ್ ಸಂಪರ್ಕ. ಈ ಯೋಜನೆಯಿಂದ ಫಲಾನುಭವಿಗಳು ವಾರ್ಷಿಕವಾಗಿ 15-18 ಸಾವಿರ ರೂ ಹಣ ಉಳಿಸಿಕೊಳ್ಳಲಿದ್ದಾರೆ
- ಮೂರು ಆರ್ಥಿಕ ರೈಲ್ವೆ ಕಾರಿಡಾರ್ ನಿರ್ಮಾಣ:ಬಹು ಮಾದರಿ ಸಂಪರ್ಕ ಕಲ್ಪಿಸುವ ಪಿಎಂ ಗತಿ ಶಕ್ತಿ ಕಾರಿಡಾರ್ ಅಡಿಯಲ್ಲಿ 1) ಖನಿಜ ಶಕ್ತಿ ಮತ್ತು ಸಿಮೆಂಟ್ ಕಾರಿಡಾರ್ 2) ಅಧಿಕ ಸಂಚಾರ ಸಾಂದ್ರತೆಯ ಕಾರಿಡಾರ್ 3) ಪೋರ್ಟ್ ಕನೆಕ್ಟಿವಿಟಿ ಕಾರಿಡಾರ್ ಕಾರ್ಯಕ್ರಮ ಜಾರಿ
- ಪ್ರವಾಸೋದ್ಯಮ ಅಭಿವೃದ್ಧಿ:ಲಕ್ಷದ್ವೀಪ ಸೇರಿದಂತೆ ಹಲವು ಪ್ರವಾಸಿ ತಾಣಗಳ ಅಭಿವೃದ್ಧಿ
- ವಿಕಸಿತ ಭಾರತಕ್ಕಾಗಿ ರಾಜ್ಯ ಸರ್ಕಾರಗಳಿಗೆ 75 ಸಾವಿರ ಕೋಟಿ ರೂ. ಬಡ್ಡಿರಹಿತ ಸಾಲ ನೀಡುವುದಾಗಿ ಘೋಷಣೆ
- ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಮಹಿಳಾ ಉದ್ಯಮಿಗಳಿಗಾಗಿ 43 ಕೋಟಿ ರೂ. ಸಾಲ ನೀಡಲಾಗುವುದು
- 9-14 ವರ್ಷದೊಳಗಿನ ಬಾಲಕಿಯರಿಗೆ ಸರ್ವೈಕಲ್ ಕ್ಯಾನ್ಸರ್ ಲಸಿಕೆಗೆ ಸರ್ಕಾರ ಉತ್ತೇಜನ
- ಹೆಚ್ಚು ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಚಿಂತನೆ
- ಹೈನುಗಾರಿಕೆಗೆ ಉತ್ತೇಜನ ನೀಡಲು ಕಾರ್ಯಕ್ರಮ
Last Updated : Feb 1, 2024, 12:43 PM IST