ವಾಷಿಂಗ್ಟನ್ (ಅಮೆರಿಕ):ಜಾಗತಿಕ ಹಣಕಾಸು ಮಾರುಕಟ್ಟೆಗಳನ್ನು ಅಲುಗಾಡಿಸುತ್ತಿರುವ ಪ್ರಕ್ಷುಬ್ಧತೆ ಗಮನಿಸಿದರೆ, ಫೆಡರಲ್ ರಿಸರ್ವ್ ಬ್ಯಾಂಕ್ ತನ್ನ ಪ್ರಮುಖ ಬಡ್ಡಿದರ ಹೆಚ್ಚಿಸಲಿದೆಯೇ ಎಂಬ ಭಯ ಆವರಿಸಿದೆ. ಇದರಿಂದ ಅಮೆರಿಕ ಆರ್ಥಿಕ ಹಿಂಜರಿತದ ಅಪಾಯ ಎದುರಾಗುವ ಸಾಧ್ಯತೆ ಹೆಚ್ಚಿದೆ.
ಅರ್ಥಶಾಸ್ತ್ರಜ್ಞರು ಮತ್ತು ವಾಲ್ ಸ್ಟ್ರೀಟ್ ವ್ಯಾಪಾರಿಗಳು ಈಗ ಫೆಡ್ ತನ್ನ ಮಾನದಂಡದ ದರವನ್ನು ಕಡಿತಗೊಳಿಸುತ್ತದೆ ಎಂಬ ಭಾರಿ ನಿರೀಕ್ಷೆಯಲ್ಲಿದ್ದಾರೆ. ಸಾಮಾನ್ಯವಾಗಿ ಆರ್ಥಿಕತೆಯನ್ನು ಬಲಗೊಳಿಸಲು ಹಾಗೂ ಹಣದ ಹರಿವನ್ನು ಹೆಚ್ಚಿಸಲು ಫೆಡ್ ತ್ವರಿತವಾಗಿ ದರಗಳನ್ನು ಕಡಿಮೆ ಮಾಡಬಹುದು ಎಂದು ಅಧ್ಯಕ್ಷ ಜೆರೋಮ್ ಪೊವೆಲ್ ಒತ್ತಿ ಹೇಳಿದ್ದಾರೆ.
ಮುಂಬರುವ ಆರ್ಥಿಕ ಹಿಂಜರಿತದ ಭಯವು ಕೋವಿಡ್ ಸಾಂಕ್ರಾಮಿಕ ನಂತರದ ಆರ್ಥಿಕತೆಯಷ್ಟೇ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಹೆಚ್ಚಿನ ವಿಶ್ಲೇಷಕರು ಊಹಿಸಿದ್ದಕ್ಕೆ ವಿರುದ್ಧವಾಗಿ, ಸ್ಥಿರವಾದ ಆರ್ಥಿಕ ಬೆಳವಣಿಗೆ ಮತ್ತು ವೇಗವನ್ನು ಸಹಿಸಿಕೊಂಡಿದೆ. ಹಿಂದೆ, ಅಮೆರಿಕ ಆರ್ಥಿಕತೆಯು ಆರ್ಥಿಕ ಹಿಂಜರಿತವಾಗಿದ್ದ ಸಮಯದಲ್ಲಿ ಯಥಾಸ್ಥಿತಿಗೆ ಪ್ರಯತ್ನಗಳನ್ನು ಮಾಡುತ್ತಿತ್ತು. ಆದರೆ, COVID-19 ಸಾಂಕ್ರಾಮಿಕ ರೋಗವು ಅಪ್ಪಳಿಸಿದ ವೇಳೆ ನಿರೀಕ್ಷೆಗಿಂತ ಹೆಚ್ಚು ಪ್ರಮಾಣದಲ್ಲಿ ಮಾರುಕಟ್ಟೆ ಕುಸಿತ ಕಂಡಿತ್ತು.
ಜುಲೈ ಉದ್ಯೋಗ ವರದಿ ಹಾಗೂ ಏನಿದು ಸಾಹ್ಮ್ ನಿಯಮ?:ಅಮೆರಿಕ ಮಾರುಕಟ್ಟೆ ಮೇಲೆ ಭಾರಿ ನಕಾರಾತ್ಮಕ ಪರಿಣಾಮ ಬೀರಲು ಕಾರಣವಾಗಿದ್ದು, ಕಾರ್ಮಿಕ ಇಲಾಖೆಯಿಂದ ಪ್ರಕಟವಾದ ಜುಲೈ ಉದ್ಯೋಗ ವರದಿ . ಇದರಲ್ಲಿ ನಿರುದ್ಯೋಗ ದರವು 4.1 ಶೇಕಡಾದಿಂದ 4.3 ಶೇಕಡಾಕ್ಕೆ ಏರಿಕೆ ಆಗಿದೆ ಎಂಬ ಅಂಕಿ- ಅಂಶವನ್ನು ನೀಡಿದೆ. ಇದು ಅಮೆರಿಕ ಆರ್ಥಿಕತೆ ಮೇಲೆ ದೊಡ್ಡ ಪರಿಣಾಮ ಬೀರುವಂತೆ ಕಾಣಿಸುತ್ತಿದೆ. ಆದರೆ, ಇದು ತುಲನಾತ್ಮಕವಾಗಿ ಕಡಿಮೆ ಮಟ್ಟವಾಗಿದೆ. ಹಾಗಿದ್ದರೂ , ಸುಮಾರು ಮೂರು ವರ್ಷಗಳಲ್ಲಿ ನಿರುದ್ಯೋಗ ಪ್ರಮಾಣ ಅತ್ಯಧಿಕವಾಗಿದೆ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿ ಬಿಡುಗಡೆಯಾದ ನಂತರ ಅಮೆರಿಕ ಷೇರು ಮಾರುಕಟ್ಟೆಯಲ್ಲಿ ಭಾರಿ ತಲ್ಲಣ ಕಂಡುಬಂದಿದೆ. ಇದನ್ನು ಸಾಹ್ಮ್ ನಿಯಮ ಎಂದು ಕರೆಯಲಾಗುತ್ತದೆ.