ಕರ್ನಾಟಕ

karnataka

By ETV Bharat Karnataka Team

Published : Apr 19, 2024, 1:30 PM IST

ETV Bharat / business

ಬೇಸಿಗೆ ಪ್ರಯಾಣ ದಟ್ಟಣೆ: 2,742 ಹೆಚ್ಚುವರಿ ಟ್ರಿಪ್​ ಓಡಿಸಲಿದೆ ಭಾರತೀಯ ರೈಲ್ವೆ - Indian Railways

ಬೇಸಿಗೆ ರಜಾಕಾಲದಲ್ಲಿನ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಭಾಯಿಸಲು ಭಾರತೀಯ ರೈಲ್ವೆ ದೇಶಾದ್ಯಂತ ದಾಖಲೆಯ 9 ಟ್ರಿಪ್​ಗಳನ್ನು ಓಡಿಸಲಿದೆ.

Indian Railways
Indian Railways

ನವದೆಹಲಿ: ಬೇಸಿಗೆಯಲ್ಲಿ ಪ್ರಯಾಣಿಕರ ಹೆಚ್ಚಿದ ಅಗತ್ಯಗಳನ್ನು ಪೂರೈಸಲು ಭಾರತೀಯ ರೈಲ್ವೆ ದೇಶಾದ್ಯಂತ ದಾಖಲೆಯ 9,111 ಟ್ರಿಪ್ ಗಳನ್ನು ನಡೆಸಲಿದೆ ಎಂದು ರೈಲ್ವೆ ಸಚಿವಾಲಯ ಶುಕ್ರವಾರ ತಿಳಿಸಿದೆ. ಇದು 2023 ರ ಬೇಸಿಗೆಯಲ್ಲಿ ಓಡಿಸಲಾದ 6,369 ಟ್ರಿಪ್​ಗಳಿಗಿಂತ 2,742 ಟ್ರಿಪ್​ಗಳಷ್ಟು ಹೆಚ್ಚಳವಾಗಿದೆ. ದೇಶಾದ್ಯಂತದ ಪ್ರಮುಖ ಸ್ಥಳಗಳನ್ನು ಸಂಪರ್ಕಿಸಲು ಹೆಚ್ಚುವರಿ ರೈಲುಗಳನ್ನು ಓಡಿಸಲು ಯೋಜಿಸಲಾಗಿದ್ದು, ಇದು ಪ್ರಮುಖ ರೈಲ್ವೆ ಮಾರ್ಗಗಳಲ್ಲಿ ತಡೆ ರಹಿತ ಪ್ರಯಾಣವನ್ನು ಖಚಿತಪಡಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.

ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ಒಡಿಶಾ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಜಾರ್ಖಂಡ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ದೆಹಲಿಯಂತಹ ರಾಜ್ಯಗಳಲ್ಲಿನ ಬೇಸಿಗೆ ಪ್ರಯಾಣದ ದಟ್ಟಣೆ ಪೂರೈಸಲು ಭಾರತದಾದ್ಯಂತ ಹರಡಿರುವ ಎಲ್ಲಾ ವಲಯ ರೈಲ್ವೆಗಳು ಈ ಹೆಚ್ಚುವರಿ ಟ್ರಿಪ್​ಗಳನ್ನು ನಿರ್ವಹಿಸಲು ಸಜ್ಜಾಗಿವೆ.

ಹೆಚ್ಚುವರಿ ರೈಲುಗಳ ನಿಯೋಜನೆ ಮತ್ತು ಚಾಲನೆಯು ನಿರಂತರ ಪ್ರಕ್ರಿಯೆಯಾಗಿದೆ. ಪಿಆರ್​ಎಸ್ ವ್ಯವಸ್ಥೆಯಲ್ಲಿ ವೇಟ್ ಲಿಸ್ಟ್ ಪ್ರಯಾಣಿಕರ ವಿವರಗಳ ಹೊರತಾಗಿ, ನಿರ್ದಿಷ್ಟ ಮಾರ್ಗದಲ್ಲಿ ರೈಲುಗಳ ಬೇಡಿಕೆ ನಿರ್ಣಯಿಸಲು ಮಾಧ್ಯಮ ವರದಿಗಳು, ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ರೈಲ್ವೆ ಸಮಗ್ರ ಸಹಾಯವಾಣಿ ಸಂಖ್ಯೆ 139 ರಂತಹ ಎಲ್ಲ ಸಂಪರ್ಕ ಮೂಲಗಳಿಂದ ಇದಕ್ಕಾಗಿ ಸಲಹೆಗಳನ್ನು ಪಡೆಯಲಾಗುತ್ತದೆ. ಈ ಅವಶ್ಯಕತೆಯ ಆಧಾರದ ಮೇಲೆ, ರೈಲುಗಳ ಸಂಖ್ಯೆ ಮತ್ತು ಟ್ರಿಪ್​ಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಬೇಸಿಗೆಯಲ್ಲಿ, ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಕುಡಿಯುವ ನೀರು ಲಭ್ಯವಾಗುವಂತೆ ನೋಡಿಕೊಳ್ಳಲು ವಲಯ ರೈಲ್ವೆಗೆ ಸೂಚನೆ ನೀಡಲಾಗಿದೆ. ಎಲ್ಲ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ವ್ಯಾಪಕ ಜನಸಂದಣಿ ನಿಯಂತ್ರಣ ವ್ಯವಸ್ಥೆಗಳನ್ನು ಮಾಡಲಾಗಿದೆ. ಜನಸಂದಣಿಯನ್ನು ವ್ಯವಸ್ಥಿತ ರೀತಿಯಲ್ಲಿ ನಿಯಂತ್ರಿಸಲು ಹಿರಿಯ ಅಧಿಕಾರಿಗಳನ್ನು ಈ ನಿಲ್ದಾಣಗಳಲ್ಲಿ ನಿಯೋಜಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸಾಮಾನ್ಯ ವರ್ಗದ ಬೋಗಿಗಳ ಪ್ರವೇಶಕ್ಕಾಗಿ ಕ್ಯೂ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಮೂಲ ನಿಲ್ದಾಣಗಳಲ್ಲಿ ಆರ್​ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜನದಟ್ಟಣೆಯ ಪ್ರದೇಶಗಳ ಮೇಲೆ ನಿಗಾ ಇಡಲು ಮತ್ತು ಪ್ರಯಾಣಿಕರಿಗೆ ನೈಜ ಸಮಯದ ಸಹಾಯ ಒದಗಿಸಲು ಸಿಸಿಟಿವಿ ನಿಯಂತ್ರಣ ಕೊಠಡಿಯಲ್ಲಿ ಆರ್​ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಟಿಕೆಟ್ ಕೌಂಟರ್​ಗಳು ಅಥವಾ ಐಆರ್​ಸಿಟಿಸಿ ವೆಬ್​ಸೈಟ್ / ಅಪ್ಲಿಕೇಶನ್ ಮೂಲಕ ಪ್ರಯಾಣಿಕರು ಈ ಹೆಚ್ಚುವರಿ ರೈಲುಗಳಲ್ಲಿ ಟಿಕೆಟ್ ಕಾಯ್ದಿರಿಸಬಹುದು.

ಇದನ್ನೂ ಓದಿ : ಟೈಪ್2 ಡಯಾಬಿಟೀಸ್​ ಇದ್ದರೂ ಜೈಲಿನಲ್ಲಿ ಕೇಜ್ರಿವಾಲ್​ರಿಂದ ಅಧಿಕ ಸಿಹಿ ಸೇವನೆ: ನ್ಯಾಯಾಲಯಕ್ಕೆ ಇಡಿ ಹೇಳಿಕೆ - Arvind Kejriwal

For All Latest Updates

ABOUT THE AUTHOR

...view details