ಮುಂಬೈ: ಭಾರತೀಯ ಬೆಂಚ್ ಮಾರ್ಕ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೋಮವಾರ (ಮಾರ್ಚ್ 18) ಆರಂಭಿಕ ವಹಿವಾಟಿನಲ್ಲಿ ಇಳಿಕೆಯಲ್ಲಿ ವಹಿವಾಟು ಆರಂಭಿಸಿದ ನಂತರ ಅಲ್ಪ ಏರಿಕೆಯೊಂದಿಗೆ ಕೊನೆಗೊಂಡವು. 72,587.30ಕ್ಕೆ ಇಳಿದ ಸೆನ್ಸೆಕ್ಸ್ ಇಂಟ್ರಾಡೇ ವಹಿವಾಟಿನಲ್ಲಿ 72,985.89 ಮತ್ತು 72,314.16 ರ ಗರಿಷ್ಠ ಮತ್ತು ಕನಿಷ್ಠ ಮಟ್ಟಗಳ ನಡುವೆ ಏರಿಳಿತ ಕಂಡಿತು. ಸೆನ್ಸೆಕ್ಸ್ ತನ್ನ ಹಿಂದಿನ ಗರಿಷ್ಠ ಮಟ್ಟದಿಂದ ಸ್ವಲ್ಪ ಲಾಭ ಕಳೆದುಕೊಂಡಿದ್ದರೂ, ಸೆನ್ಸೆಕ್ಸ್ 104.99 ಪಾಯಿಂಟ್ ಅಥವಾ 0.14% ಏರಿಕೆ ಕಂಡು 72,748.42 ರಲ್ಲಿ ಕೊನೆಗೊಂಡಿದೆ.
ಏತನ್ಮಧ್ಯೆ, 21,990.10 ಕ್ಕೆ ಇಳಿದ ನಿಫ್ಟಿ 50, ಕನಿಷ್ಠ 21,916.55 ಮತ್ತು ಗರಿಷ್ಠ 22,123.70 ರ ನಡುವೆ ವ್ಯವಹಾರ ನಡೆಸಿತು. ನಿಫ್ಟಿ 32.35 ಪಾಯಿಂಟ್ ಅಥವಾ ಶೇಕಡಾ 0.15ರಷ್ಟು ಏರಿಕೆ ಕಂಡು 22,055.70 ರಲ್ಲಿ ಕೊನೆಗೊಂಡಿದೆ. ಟಾಟಾ ಸ್ಟೀಲ್, ಮಹೀಂದ್ರಾ & ಮಹೀಂದ್ರಾ, ಜೆಎಸ್ ಡಬ್ಲ್ಯೂ ಸ್ಟೀಲ್, ಟಾಟಾ ಮೋಟಾರ್ಸ್ ಮತ್ತು ಆಕ್ಸಿಸ್ ಬ್ಯಾಂಕ್ ಸೆನ್ಸೆಕ್ಸ್ನಲ್ಲಿ ಹೆಚ್ಚು ಲಾಭ ಗಳಿಸಿದರೆ, ಇನ್ಫೋಸಿಸ್, ಟಿಸಿಎಸ್, ಟೈಟಾನ್, ವಿಪ್ರೋ ಮತ್ತು ಎಚ್ಯುಎಲ್ ನಷ್ಟ ಅನುಭವಿಸಿದವು.
ಏತನ್ಮಧ್ಯೆ ನಿಫ್ಟಿ- 50ಯಲ್ಲಿ ಟಾಟಾ ಸ್ಟೀಲ್, ಮಹೀಂದ್ರಾ & ಮಹೀಂದ್ರಾ, ಜೆಎಸ್ಡಬ್ಲ್ಯೂ ಸ್ಟೀಲ್, ಟಾಟಾ ಮೋಟಾರ್ಸ್ ಮತ್ತು ಅಪೊಲೊ ಹಾಸ್ಪಿಟಲ್ ಎಂಟರ್ ಪ್ರೈಸಸ್ ಹೆಚ್ಚು ಲಾಭ ಗಳಿಸಿದವು ಮತ್ತು ಯುಪಿಎಲ್, ಇನ್ಫೋಸಿಸ್, ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್, ಟಿಸಿಎಸ್ ಮತ್ತು ಟೈಟಾನ್ ನಷ್ಟಕ್ಕೀಡಾದವು. ನಿಫ್ಟಿ ಬ್ಯಾಂಕ್ ಸೂಚ್ಯಂಕ ಶೇ 0.04, ಹಣಕಾಸು ಸೇವೆಗಳು ಶೇ 0.09, ಐಟಿ ಮತ್ತು ಎಫ್ ಎಂಸಿಜಿ ಕ್ರಮವಾಗಿ ಶೇ 1.64 ಮತ್ತು ಶೇ 0.46ರಷ್ಟು ಕುಸಿತ ಕಂಡಿವೆ.