ಮುಂಬೈ: ಭಾರತದ ಎರಡು ಪ್ರಮುಖ ಇಕ್ವಿಟಿ ಬೆಂಚ್ ಮಾರ್ಕ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಶುಕ್ರವಾರ ಇಳಿಕೆಯೊಂದಿಗೆ ಇಂದಿನ ವ್ಯವಹಾರ ಮುಗಿಸಿದವು. ಬೆಳಗಿನ ವಹಿವಾಟಿನಲ್ಲಿ ಸೂಚ್ಯಂಕಗಳು ತಮ್ಮ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದವು. ನಂತರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್ಇ) 264 ಅಂಕ ಇಳಿಕೆಯಾಗಿ 85,572 ರಲ್ಲಿ ಕೊನೆಗೊಂಡಿದೆ. ಸೂಚ್ಯಂಕವು ಇಂಟ್ರಾ-ಡೇ ವಹಿವಾಟಿನಲ್ಲಿ ಹೊಸ ದಾಖಲೆಯ ಗರಿಷ್ಠ 85,978 ಕ್ಕೆ ಏರಿಕೆಯಾಗಿತ್ತು. ಮತ್ತೊಂದೆಡೆ, ಎನ್ಎಸ್ಇ ನಿಫ್ಟಿ 50 ಸಾರ್ವಕಾಲಿಕ ಗರಿಷ್ಠ 26,277 ಕ್ಕೆ ತಲುಪಿತ್ತು. ನಂತರ ಇದು 37 ಅಂಕ ಕುಸಿದು 26,179 ರಲ್ಲಿ ಕೊನೆಗೊಂಡಿತು.
ಈ ಷೇರುಗಳಿಗೆ ಲಾಭ, ಇವುಗಳಿಗೆ ನಷ್ಟ:30 ಷೇರುಗಳ ಸೆನ್ಸೆಕ್ಸ್ನಲ್ಲಿ ಸನ್ ಫಾರ್ಮಾ, ರಿಲಯನ್ಸ್, ಟೈಟಾನ್, ಎಚ್ಸಿಎಲ್ ಟೆಕ್, ಬಜಾಜ್ ಫಿನ್ ಸರ್ವ್, ಏಷ್ಯನ್ ಪೇಂಟ್ಸ್ ಲಾಭ ಗಳಿಸಿದವು. ಪವರ್ ಗ್ರಿಡ್, ಐಸಿಐಸಿಐ ಬ್ಯಾಂಕ್, ಏರ್ ಟೆಲ್, ಎಚ್ಡಿಎಫ್ಸಿ ಬ್ಯಾಂಕ್, ಕೋಟಕ್ ಬ್ಯಾಂಕ್, ಎಲ್ &ಟಿ ನಷ್ಟ ಅನುಭವಿಸಿದವು. ವಿಶಾಲ ಮಾರುಕಟ್ಟೆಗಳಲ್ಲಿ, ನಿಫ್ಟಿ ಮಿಡ್ ಕ್ಯಾಪ್ 100 ಮತ್ತು ನಿಫ್ಟಿ ಸ್ಮಾಲ್ ಕ್ಯಾಪ್ 100 ಸೂಚ್ಯಂಕಗಳು ಕ್ರಮವಾಗಿ ಶೇಕಡಾ 0.15 ಮತ್ತು ಶೇಕಡಾ 0.10 ರಷ್ಟು ನಷ್ಟದೊಂದಿಗೆ ಕೊನೆಗೊಂಡವು.