ಮುಂಬೈ: ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕಗಳು ಸೋಮವಾರ ದೊಡ್ಡ ಮಟ್ಟದ ಇಳಿಕೆಯೊಂದಿಗೆ ಕೊನೆಗೊಂಡಿವೆ. ಸೆನ್ಸೆಕ್ಸ್ 1,272 ಪಾಯಿಂಟ್ ಅಥವಾ ಶೇಕಡಾ 1.49 ರಷ್ಟು ಕುಸಿದು 84,299 ರಲ್ಲಿ ಕೊನೆಗೊಂಡಿದೆ ಮತ್ತು ನಿಫ್ಟಿ 368 ಪಾಯಿಂಟ್ ಅಥವಾ ಶೇಕಡಾ 1.41 ರಷ್ಟು ಕುಸಿದು 25,810 ರಲ್ಲಿ ಕೊನೆಗೊಂಡಿದೆ.
ಪ್ರಮುಖವಾಗಿ ಬ್ಯಾಂಕಿಂಗ್ ಷೇರುಗಳು ಮಾರುಕಟ್ಟೆಯ ಕುಸಿತಕ್ಕೆ ಕಾರಣವಾದವು. ನಿಫ್ಟಿ ಬ್ಯಾಂಕ್ 856 ಪಾಯಿಂಟ್ ಅಥವಾ ಶೇಕಡಾ 1.59 ರಷ್ಟು ಕುಸಿದು 52,978 ರಲ್ಲಿ ಕೊನೆಗೊಂಡಿತು.
ನಾಲ್ಕು ಲಕ್ಷ ಕೋಟಿ ನಷ್ಟ:ಇಂದಿನ ತೀವ್ರ ಕುಸಿತದಿಂದಾಗಿ, ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನಲ್ಲಿ (ಬಿಎಸ್ಇ) ನಲ್ಲಿ ಲಿಸ್ಟ್ ಮಾಡಲಾದ ಎಲ್ಲಾ ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳ ಸುಮಾರು 4 ಲಕ್ಷ ಕೋಟಿ ರೂ.ಗಳಷ್ಟು ಕಡಿಮೆಯಾಗಿ 474 ಲಕ್ಷ ಕೋಟಿ ರೂ.ಗೆ ಇಳಿದಿದೆ. ಅಂದರೆ ಒಂದೇ ದಿನದ ವಹಿವಾಟಿನಲ್ಲಿ ಹೂಡಿಕೆದಾರರು 4 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದ್ದಾರೆ.
ಕುಸಿತದ ನಡುವೆ ಲಾಭ ಮಾಡಿದ ಷೇರುಗಳಿವು:ಸೆನ್ಸೆಕ್ಸ್ ಪ್ಯಾಕ್ನಲ್ಲಿ ಜೆಎಸ್ಡಬ್ಲ್ಯೂ ಸ್ಟೀಲ್, ಎನ್ಟಿಪಿಸಿ, ಟಾಟಾ ಸ್ಟೀಲ್, ಟೈಟನ್ ಮತ್ತು ಏಷ್ಯನ್ ಪೇಂಟ್ಸ್ ಹೆಚ್ಚು ಲಾಭ ಗಳಿಸಿದವು.
ಈ ಪ್ರಮುಖ ಷೇರುಗಳಲ್ಲಿ ನಷ್ಟ:ರಿಲಯನ್ಸ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ನೆಸ್ಲೆ, ಟೆಕ್ ಮಹೀಂದ್ರಾ, ಎಂ & ಎಂ, ಮಾರುತಿ ಸುಜುಕಿ, ಬಜಾಜ್ ಫಿನ್ ಸರ್ವ್, ಟಾಟಾ ಮೋಟಾರ್ಸ್, ಎಸ್ ಬಿಐ, ಇನ್ಫೋಸಿಸ್ ಮತ್ತು ಸನ್ ಫಾರ್ಮಾ ನಷ್ಟ ಅನುಭವಿಸಿದವು.
ಎಲ್ಲ ವಲಯಗಳಲ್ಲೂ ಇಂದು ಬಹುತೇಕ ಕುಸಿತ:ನಿಫ್ಟಿ ಮಿಡ್ ಕ್ಯಾಪ್ 100 ಸೂಚ್ಯಂಕವು 227 ಪಾಯಿಂಟ್ ಅಥವಾ ಶೇಕಡಾ 0.38 ರಷ್ಟು ಕುಸಿದು 60,153 ಕ್ಕೆ ತಲುಪಿದೆ ಮತ್ತು ನಿಫ್ಟಿ ಸ್ಮಾಲ್ ಕ್ಯಾಪ್ 100 ಸೂಚ್ಯಂಕವು 62 ಪಾಯಿಂಟ್ ಅಥವಾ ಶೇಕಡಾ 0.32 ರಷ್ಟು ಕುಸಿದು 19,179 ಕ್ಕೆ ತಲುಪಿದೆ. ವಲಯ ಸೂಚ್ಯಂಕಗಳ ಪೈಕಿ ಆಟೋ, ಐಟಿ, ಪಿಎಸ್ಯು ಬ್ಯಾಂಕ್, ಫಿನ್ ಸರ್ವಿಸ್, ಫಾರ್ಮಾ, ಎಫ್ಎಂಸಿಜಿ, ರಿಯಾಲ್ಟಿ, ಇಂಧನ, ಖಾಸಗಿ ಬ್ಯಾಂಕ್ ಮತ್ತು ಇನ್ಫ್ರಾ ಪ್ರಮುಖವಾಗಿ ಕುಸಿತ ಕಂಡಿವೆ. ಲೋಹ ಮತ್ತು ಮಾಧ್ಯಮ ಸೂಚ್ಯಂಕಗಳು ಮಾತ್ರ ಏರಿಕೆಯಲ್ಲಿ ಕೊನೆಗೊಂಡವು.
ವಿದೇಶಿ ಹೂಡಿಕೆದಾರರಿಂದ ಭಾರಿ ಮಾರಾಟ;ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಸೆಪ್ಟೆಂಬರ್ 27 ರಂದು 1,209 ಕೋಟಿ ರೂ.ಗಳ ಈಕ್ವಿಟಿಗಳನ್ನು ಮಾರಾಟ ಮಾಡುವ ಮೂಲಕ ನಿವ್ವಳ ಮಾರಾಟಗಾರರಾದರು. ದೇಶೀಯ ಸಾಂಸ್ಥಿಕ ಹೂಡಿಕೆದಾರರು ಅದೇ ದಿನ 6,886 ಕೋಟಿ ರೂ.ಗಳ ಈಕ್ವಿಟಿಗಳನ್ನು ಖರೀದಿಸಿ ತಮ್ಮ ಖರೀದಿಯನ್ನು ವಿಸ್ತರಿಸಿದರು.
ಇದನ್ನೂ ಓದಿ : ಜನವರಿ 12ರಿಂದ ಕುಂಭಮೇಳ: 30 ಕೋಟಿ ಭಕ್ತರ ಆಗಮನ ನಿರೀಕ್ಷೆ, 992 ವಿಶೇಷ ರೈಲು ಓಡಿಸಲು ಸಿದ್ಧತೆ - Kumbh Mela