ಮುಂಬೈ: ಭಾರತೀಯ ಬೆಂಚ್ ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ ಮತ್ತು ನಿಫ್ಟಿ 50 ಶುಕ್ರವಾರದ ವಹಿವಾಟಿನಲ್ಲಿ ಉತ್ತಮ ಏರಿಕೆ ಕಂಡವು. ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಐಟಿ ಷೇರುಗಳಲ್ಲಿನ ಹೆಚ್ಚಿನ ಖರೀದಿಯ ಕಾರಣದಿಂದ ಷೇರು ಮಾರುಕಟ್ಟೆ ಏರಿಕೆ ದಾಖಲಿಸಿದೆ.
ನಿಫ್ಟಿ- 50 ಶುಕ್ರವಾರ ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಸೂಚ್ಯಂಕವು ಮಧ್ಯಾಹ್ನ 22,126.80 ರ ಗರಿಷ್ಠ ಮಟ್ಟವನ್ನು ತಲುಪಿ 21,853.80 ರಲ್ಲಿ ಕೊನೆಗೊಂಡಿತು. ಇದು 156.35 ಪಾಯಿಂಟ್ ಅಥವಾ ಶೇಕಡಾ 0.72 ರಷ್ಟು ಹೆಚ್ಚಳವಾಗಿದೆ. ಬಿಎಸ್ಇ ಸೆನ್ಸೆಕ್ಸ್ ಕೂಡ ದಿನದ ವಹಿವಾಟಿನಲ್ಲಿ 1,440 ಪಾಯಿಂಟ್ಗಳಷ್ಟು ಏರಿಕೆ ಕಂಡಿತ್ತು. ನಂತರ ದಿನದ ಕೊನೆಗೆ 440 ಪಾಯಿಂಟ್ಸ್ ಅಥವಾ ಶೇಕಡಾ 0.61 ರಷ್ಟು ಏರಿಕೆಯಾಗಿ 72,086 ರಲ್ಲಿ ಕೊನೆಗೊಂಡಿದೆ.
ಶುಕ್ರವಾರದ ವಹಿವಾಟಿನಲ್ಲಿ 38 ಷೇರುಗಳು ಏರಿಕೆಯಾದರೆ, ಕೇವಲ 12 ಷೇರುಗಳು ಇಳಿಕೆ ಕಂಡವು. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್, ಪವರ್ ಗ್ರಿಡ್ ಕಾರ್ಪೊರೇಷನ್, ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಮಿಷನ್, ಅದಾನಿ ಪೋರ್ಟ್ಸ್ ಮತ್ತು ಸ್ಪೆಷಲ್ ಇಕನಾಮಿಕ್ ಜೋನ್ ಮತ್ತು ಎನ್ಟಿಪಿಸಿ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿದ್ದು, ಐಷರ್ ಮೋಟಾರ್ಸ್, ಆಕ್ಸಿಸ್ ಬ್ಯಾಂಕ್, ಎಚ್ಡಿಎಫ್ಸಿ ಲೈಫ್ ಇನ್ಶೂರೆನ್ಸ್ ಕಂಪನಿ, ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಹಿಂದೂಸ್ತಾನ್ ಯೂನಿಲಿವರ್ ಹೆಚ್ಚು ನಷ್ಟ ಅನುಭವಿಸಿದ ಷೇರುಗಳಾಗಿವೆ.