ಕರ್ನಾಟಕ

karnataka

ETV Bharat / business

ಸತತ 2ನೇ ದಿನವೂ ಲಾಭದಲ್ಲಿ ಷೇರು ಮಾರುಕಟ್ಟೆ: ಸೆನ್ಸೆಕ್ಸ್​ 631 & ನಿಫ್ಟಿ 205 ಅಂಕಗಳ ಏರಿಕೆ - STOCK MARKET

ಭಾರತದ ಷೇರು ಮಾರುಕಟ್ಟೆ ಬುಧವಾರ ಏರಿಕೆಯೊಂದಿಗೆ ಕೊನೆಗೊಂಡಿದೆ.

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್
ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (ians)

By ETV Bharat Karnataka Team

Published : Jan 29, 2025, 5:35 PM IST

ಮುಂಬೈ: ಬೆಂಚ್ ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ50 ಸತತ ಎರಡನೇ ದಿನವೂ ಲಾಭದಲ್ಲಿ ಕೊನೆಗೊಂಡವು. 30 ಷೇರುಗಳ ಸೆನ್ಸೆಕ್ಸ್ 631.55 ಪಾಯಿಂಟ್ ಅಥವಾ ಶೇಕಡಾ 0.83 ರಷ್ಟು ಏರಿಕೆಯಾಗಿ ದಿನದ ಗರಿಷ್ಠ 76,599.73 ಕ್ಕೆ ತಲುಪಿದ ನಂತರ 76,532.96 ರಲ್ಲಿ ಕೊನೆಗೊಂಡಿತು.

ಇನ್ನು ಎನ್ಎಸ್ಇ ನಿಫ್ಟಿ 50 ಸೂಚ್ಯಂಕವು 205.85 ಪಾಯಿಂಟ್ ಅಥವಾ ಶೇಕಡಾ 0.90 ರಷ್ಟು ಏರಿಕೆಯಾಗಿ 23,163.10 ರಲ್ಲಿ ಕೊನೆಗೊಂಡಿದೆ. ನಿಫ್ಟಿ ಬುಧವಾರ 23,183.35 ರಿಂದ 22,976.50 ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು.

ನಿಫ್ಟಿಯ 50 ಘಟಕ ಷೇರುಗಳ ಪೈಕಿ 42 ಷೇರುಗಳು ಲಾಭ ಗಳಿಸಿದವು. ಶ್ರೀರಾಮ್ ಫೈನಾನ್ಸ್, ಭಾರತ್ ಎಲೆಕ್ಟ್ರಾನಿಕ್ಸ್, ಟಾಟಾ ಮೋಟಾರ್ಸ್, ಎಸ್​ಬಿಐ ಲೈಫ್ ಮತ್ತು ಟ್ರೆಂಟ್ ನಿಫ್ಟಿಯಲ್ಲಿ ಲಾಭ ಗಳಿಸಿದ ಪ್ರಮುಖ ಷೇರುಗಳಾಗಿವೆ. ಮತ್ತೊಂದೆಡೆ, ಭಾರ್ತಿ ಏರ್​​ಟೆಲ್, ಐಟಿಸಿ ಹೋಟೆಲ್ಸ್, ಮಾರುತಿ ಸುಜುಕಿ ಇಂಡಿಯಾ, ಬ್ರಿಟಾನಿಯಾ ಮತ್ತು ಏಷ್ಯನ್ ಪೇಂಟ್ಸ್ ನಷ್ಟಕ್ಕೀಡಾದವು.

ನಿಫ್ಟಿ ಸ್ಮಾಲ್ ಕ್ಯಾಪ್ 100 ಸೂಚ್ಯಂಕವು ಶೇಕಡಾ 3.32 ರಷ್ಟು ಏರಿಕೆಯಾಗಿದ್ದರೆ, ನಿಫ್ಟಿ ಮಿಡ್ ಕ್ಯಾಪ್ 100 ಶೇಕಡಾ 2.31 ರಷ್ಟು ಲಾಭದೊಂದಿಗೆ ಕೊನೆಗೊಂಡಿತು. ಮಾರುಕಟ್ಟೆಗಳಲ್ಲಿನ ಚಂಚಲತೆಯನ್ನು ಅಳೆಯುವ ಭಯ ಸೂಚ್ಯಂಕ, ಇಂಡಿಯಾ ವಿಎಕ್ಸ್ ಶೇಕಡಾ 2.44 ರಷ್ಟು ಏರಿಕೆಯಾಗಿ 18.64 ಪಾಯಿಂಟ್​ನಲ್ಲಿ ಕೊನೆಗೊಂಡಿತು. ಎಫ್ ಎಂಸಿಜಿ ಹೊರತುಪಡಿಸಿ ಎಲ್ಲ ವಲಯ ಸೂಚ್ಯಂಕಗಳು ಲಾಭದೊಂದಿಗೆ ಕೊನೆಗೊಂಡವು. ವಿಶೇಷವೆಂದರೆ, ನಿಫ್ಟಿ ಐಟಿ ಸೂಚ್ಯಂಕ ಶೇಕಡಾ 2.62 ರಷ್ಟು ಹೆಚ್ಚಾಗಿದೆ.

ಡಾಲರ್ ವಿರುದ್ಧ ರೂಪಾಯಿ ಏರಿಕೆ: ಸಕಾರಾತ್ಮಕ ದೇಶೀಯ ಮಾರುಕಟ್ಟೆಗಳ ಬೆಂಬಲದೊಂದಿಗೆ ಬುಧವಾರ (ಜನವರಿ 29, 2025) ಯುಎಸ್ ಡಾಲರ್ ವಿರುದ್ಧ ರೂಪಾಯಿ 1 ಪೈಸೆ ಏರಿಕೆಯಾಗಿ 86.56 ರಲ್ಲಿ (ತಾತ್ಕಾಲಿಕ) ಕೊನೆಗೊಂಡಿದೆ. ಇಂಟರ್ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ರೂಪಾಯಿ 86.58 ರಲ್ಲಿ ದುರ್ಬಲವಾಗಿ ಪ್ರಾರಂಭವಾಯಿತು ಮತ್ತು ದಿನದಲ್ಲಿ ಅಮೆರಿಕನ್ ಕರೆನ್ಸಿ ವಿರುದ್ಧ ಗರಿಷ್ಠ 86.49 ಮತ್ತು ಕನಿಷ್ಠ 86.61 ರ ಮಧ್ಯೆ ವಹಿವಾಟು ನಡೆಸಿತು. ಅಂತಿಮವಾಗಿ ರೂಪಾಯಿ 86.56 (ತಾತ್ಕಾಲಿಕ)ರ ಸಕಾರಾತ್ಮಕ ಟಿಪ್ಪಣಿಯಲ್ಲಿ ಸ್ಥಿರವಾಯಿತು. ಇದು ಹಿಂದಿನ ಮುಕ್ತಾಯಕ್ಕಿಂತ 1 ಪೈಸೆ ಏರಿಕೆಯಾಗಿದೆ.

ಇದನ್ನೂ ಓದಿ :ಹೈವೇ ನಿರ್ಮಾಣಕ್ಕೆ ಖರ್ಚು ಮಾಡಿದ ಪ್ರತಿ 1 ರೂ.ನಿಂದ ಜಿಡಿಪಿಗೆ 3 ರೂ. ಆದಾಯ: IIM-B - INDIAS HIGHWAY GDP REPORT

For All Latest Updates

ABOUT THE AUTHOR

...view details