ಮುಂಬೈ(ಮಹಾರಾಷ್ಟ್ರ):ಇಂದುದೇಶೀಯ ಷೇರು ಮಾರುಕಟ್ಟೆಗಳು ಉತ್ತಮ ಗಳಿಕೆಯೊಂದಿಗೆ ಆರಂಭಗೊಂಡಿವೆ. ವಹಿವಾಟಿನ ಆರಂಭದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸಾರ್ವಕಾಲಿಕ ಗರಿಷ್ಠ ದಾಖಲೆ ಬರೆದವು. ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಸಕಾರಾತ್ಮಕ ಸಂಕೇತಗಳೇ ಇದಕ್ಕೆ ಕಾರಣ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
ಷೇರು ಮಾರುಕಟ್ಟೆ ಇಂದು: ಸಾರ್ವಕಾಲಿಕ ಎತ್ತರಕ್ಕೆ ಜಿಗಿದ ಸೆನ್ಸೆಕ್ಸ್, ನಿಫ್ಟಿ - Mumbai Share Market - MUMBAI SHARE MARKET
ದೇಶೀಯ ಷೇರು ಮಾರುಕಟ್ಟೆಗಳು ಇಂದು ಉತ್ತಮ ಗಳಿಕೆಯೊಂದಿಗೆ ಏರುಗತಿಯಲ್ಲಿವೆ. ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದವು.
ಸಾಂದರ್ಭಿಕ ಚಿತ್ರ (Getty Images)
By ANI
Published : Jul 29, 2024, 10:22 AM IST
ಬೆಳಗ್ಗೆ 9.30ಕ್ಕೆ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 349 ಅಂಕ ಗಳಿಸಿ 81,681ರಲ್ಲಿ ಮುಂದುವರಿಯಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 85 ಪಾಯಿಂಟ್ ಏರಿಕೆ ಕಂಡು 24,920ರಲ್ಲಿ ವಹಿವಾಟು ನಡೆಸಿತು.
- ಯಾರಿಗೆ ಲಾಭ?:ಐಸಿಐಸಿಐ ಬ್ಯಾಂಕ್, ಎಸ್‌ಬಿಐ, ಇಂಡಸ್‌ಇಂಡ್ ಬ್ಯಾಂಕ್, ಎಲ್ & ಟಿ, ಎನ್‌ಟಿಪಿಸಿ, ಟಾಟಾ ಮೋಟಾರ್ಸ್, ಇನ್ಫೋಸಿಸ್, ರಿಲಯನ್ಸ್, ಟಾಟಾ ಸ್ಟೀಲ್ ಹಾಗು ಅದಾನಿ ಪೋರ್ಟ್ಸ್.
- ಇವರಿಗೆ ನಷ್ಟ: ಟೈಟಾನ್, ಭಾರ್ತಿ ಏರ್‌ಟೆಲ್, ಟೆಕ್ ಮಹೀಂದ್ರ, ಐಟಿಸಿ, ಪವರ್‌ಗ್ರಿಡ್, ಏಷ್ಯನ್ ಪೇಂಟ್ಸ್, ಸನ್‌ಫಾರ್ಮಾ, ಕೋಟಕ್ ಬ್ಯಾಂಕ್, ಎಚ್‌ಸಿಎಲ್ ಟೆಕ್ ಹಾಗು ನೆಸ್ಲೆ ಇಂಡಿಯಾ.