ಹೈದರಾಬಾದ್: ಪ್ರಮುಖ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಕಂಪನಿ ಇತ್ತೀಚಿನ ಸ್ವಿಫ್ಟ್ Z ಸರಣಿಯ ಮಾಡೆಲ್ ಕಾರಿನ ಬುಕ್ಕಿಂಗ್ ಅನ್ನು ಬುಧವಾರದಿಂದ ಶುರು ಮಾಡಿದೆ. ನಾಲ್ಕನೇ ತಲೆಮಾರಿನ ಹ್ಯಾಚ್ ಬ್ಯಾಕ್ ಕಾರು ಎಂಬ ಹೆಗ್ಗಳಿಕೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ಮಾರುತಿ ಸ್ವಿಫ್ಟ್ ಈಗಾಗಲೇ ಹಲವು ವಿವರಗಳೊಂದಿಗೆ ಸದ್ದು ಮಾಡುತ್ತಿದೆ. ವಿವರಗಳ ಪ್ರಕಾರ, ಈ ಹೊಸ Z ಸರಣಿಯ ಮಾದರಿಯಲ್ಲಿ ಎಂಜಿನ್ ಸಾಮರ್ಥ್ಯ, ಟಾರ್ಕ್ ಮತ್ತು ಇಂಧನ-ದಕ್ಷತೆಯಲ್ಲಿನ ನವೀಕರಣದಿಂದ ಸುದ್ದಿಯಲ್ಲಿದೆ. ಟಾಪ್-ಸ್ಪೆಕ್ ರೂಪಾಂತರದಲ್ಲಿ ಸುರಕ್ಷತಾ ಕಿಟ್ ಅನ್ನು ಸಹ ನೀಡಲಾಗುತ್ತಿದೆ. ಹೀಗಾಗಿ ಮಾರುತಿ ಗ್ರಾಹಕರು ಈ ಕಾರಿನತ್ತ ಆಕರ್ಷಿತರಾಗಿದ್ದಾರೆ ಎನ್ನಲಾಗಿದೆ.
ಹೊಸ ಮಾರುತಿ ಸ್ವಿಫ್ಟ್ ಪ್ರತಿ ಲೀಟರ್ ಪೆಟ್ರೋಲ್ ಹೊಸ ಸ್ವಿಫ್ಟ್ ಝೆಡ್ 25.72 ಕಿ.ಮೀ ಮೈಲೇಜ್ ನೀಡಲಿದೆ ಎಂದು ಕಂಪನಿ ಪ್ರಕಟಿಸಿದೆ. ಈ ಹೊಸ ಮಾದರಿಯು 1.2-ಲೀಟರ್ Z12E ಎಂಜಿನ್ನೊಂದಿಗೆ ಮಾರುಕಟ್ಟೆಗೆ ಬರುತ್ತಿದೆ. 82hp ಶಕ್ತಿಯು 112Nm ಟಾರ್ಕ್ ಉತ್ಪಾದಿಸುತ್ತದೆ. ಈ ಹೊಸ ಸ್ವಿಫ್ಟ್ನ ಎಲ್ಲ ಮಾದರಿಗಳಲ್ಲೀ ಆರು ಏರ್ಬ್ಯಾಗ್ಗಳು ಲಭ್ಯವಿವೆ. ಇದು ಗ್ರಾಹಕರ ಕುತೂಹಲವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ.
ಹೊಸ ಮಾರುತಿ ಸ್ವಿಫ್ಟ್ನ ಇತರ ವಿಶೇಷತೆಗಳು : ಹೊಸ ಸ್ವಿಫ್ಟ್ Z ಸರಣಿಯ ಎಂಜಿನ್ ಹಿಂದಿನ K ಸರಣಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ರೂಪಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಮಾದರಿಯು ಹಿಂದಿನ ಕೆ ಸಿರೀಸ್ಗಿಂತ 3 ಕಿ.ಮೀನಷ್ಟು ಹೆಚ್ಚು ಮೈಲೇಜ್ ನೀಡುತ್ತದೆ. ಇದರೊಂದಿಗೆ ಹೊಸ ಸ್ವಿಫ್ಟ್ ಸಿಎನ್ಜಿ ಆವೃತ್ತಿಯು ಶೀಘ್ರದಲ್ಲೇ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ.